ಕಾಂಗ್ರೆಸ್‌ನಿಂದ ಇಸ್ಲಾಂ ಮೂಲಭೂತವಾದಿಗಳಿಂದ ಹಿಂಸೆಗೆ ಪ್ರಚೋದನೆ : ಸುನಿಲ್‌ ಕುಮಾರ್‌

Mandya Maddur : ಬೆಂಗಳೂರು : ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಇಸ್ಲಾಂ ಮೂಲಭೂತವಾದಿಗಳು ಹಿಂಸೆಗೆ ಪ್ರಚೋದನೆ ಕೊಡ್ತಿದ್ದಾರೆ ಎಂದು ಕಾರ್ಕಳ ಶಾಸಕರಾದ ವಿ.ಸುನಿಲ್‌ ಕುಮಾರ್‌ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶ ವಿಸರ್ಜನೆ ವೇಳೆ ಮದ್ದೂರಿನಲ್ಲಿ ಆಗಿರುವ ಘಟನೆ, ಸರ್ಕಾರ ಗಣೇಶೋತ್ಸವದಲ್ಲಿ ಭಾಗಿಯಾದವರ ಮೇಲೆ ಲಾಠಿ ಚಾರ್ಜ್ ನೋಡಿದ್ರೆ ಸರ್ಕಾರದ ಆದ್ಯತೆ ಗೊತ್ತಾಗುತ್ತೆ ಎಂದಿದ್ದಾರೆ.

ಕಾಶ್ಮೀರದಲ್ಲಿ ಸೈನಿಕರಿಗೆ ಕಲ್ಲು ಹೊಡೆಯುವವರನ್ನು ಕಾಂಗ್ರೆಸ್‌ ಪಕ್ಷ ಬೆಂಬಲಿಸಿತ್ತು. ದೇವಸ್ಥಾನಗಳ ಮೇಲೆ, ಧಾರ್ಮಿಕ ಉತ್ಸವಗಳ ಮೇಲೆ ಕಲ್ಲೆಸೆಯುವವರನ್ನು ಸಿದ್ದರಾಮಯ್ಯ ಸರ್ಕಾರ ಬೆಂಬಲಿಸುತ್ತಲೇ ಬಂದಿದೆ. ಅದರ ಪರಿಣಾಮವೇ ಮದ್ದೂರು ಘಟನೆ ಎಂದು ಸುನಿಲ್‌ ಕುಮಾರ್‌ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು, ಮದ್ದೂರು ಗಲಭೆಗೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತರ ಪ್ರಚೋದನೆ ಇದೆ, ಹಿಂದೂ ಸಂಘಟನೆಗಳ ಪಾತ್ರ ಇದೆ ಅಂತಾರೆ. ಆದರೆ ಗಲಭೆಗೆ ಯಾರು ಪ್ರಚೋದನೆ ಕೊಡ್ತಾರೆ ಅಂತನೇ ಸರ್ಕಾರ ಅರ್ಥ ಮಾಡಿಕೊಂಡಿಲ್ಲ ಎಂದಿದ್ದಾರೆ.

ಕರ್ನಾಟಕದ ಕಾಂಗ್ರೆಸ್‌ ಸರಕಾರ ಇಂತಹ ಪ್ರಕರಣಗಳನ್ನು ಬುರ್ಕಾ ಹಾಕಿಕೊಂಡೇ ತನಿಖೆ ಮಾಡುತ್ತೆ. ಮುಖ್ಯಮಂತ್ರಿಗಳ ಹೇಳಿಕೆಗಳು ತನಿಖೆಯ ಮೇಲೆ ಪರಿಣಾಮ ಬೀರುತ್ತದೆ. ಸಿಎಂ ಕಚೇರಿಯೇ ಇಸ್ಲಾಂ ಮೂಲಭೂತವಾದಿತನಕ್ಕೆ ಪ್ರಚೋದನೆ ಕೊಡ್ತಿದೆ ಎಂದು ಆರೋಪಿಸಿದ್ದಾರೆ.

ವಿಧಾನಸಭೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ರು, ಅದನ್ನು ಮಟ್ಟ ಹಾಕಿದ್ದಿದ್ರೆ ಇವತ್ತು ಭದ್ರಾವತಿಯಲ್ಲೂ ಪಾಕ್ ಪರ ಘೋಷಣೆ ಕೇಳಿ ಬರ್ತಿರಲಿಲ್ಲ. ಪಾಕ್ ಪರ ಘೋಷಣೆ ಕೂಗೋರಿಗೆ ಧೈರ್ಯ ಇನ್ನಷ್ಟು ಜಾಸ್ತಿ ಆಗಿದೆ. ಮದ್ದೂರಿನಲ್ಲಿ ಹಿಂದೂ ಹೆಣ್ಣುಮಕ್ಕಳ ಮೇಲೆ ಲಾಠಿಚಾರ್ಜ್ ಆಗಿದೆ ಎಂದಿದ್ದಾರೆ.

ಇದನ್ನೂ ಓದಿ : ಹಿಂದೂಗಳ ಮೇಲೆ ಲಾಠಿಚಾರ್ಜ್‌ : ದುಷ್ಕರ್ಮಿಗಳ ಮೇಲೆ ಯಾಕಿಲ್ಲ ಕ್ರಮ

ಸರಕಾರದ ನಡೆ ಸರಿಯಲ್ಲ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಹಳೇ ಮೈಸೂರು ಭಾಗ ಮತ್ತು ಮಂಡ್ಯ ಇಸ್ಲಾಂ ಮೂಲಭೂತವಾದಿಗಳ ಪ್ರಯೋಗ ಶಾಲೆ ಆಗಿದೆ. ಕಳೆದ ಬಾರಿಯೂ ನಾಗಮಂಗಲದಲ್ಲಿ ಗಲಾಟೆ ಮಾಡಿದ್ರು. ಕರ್ನಾಟಕ ಇಸ್ಲಾಂ ಮೂಲಭೂತವಾದಿಗಳ ಪ್ರಯೋಗ ಶಾಲೆ ಆಗ್ತಿರೋದಿಕ್ಕೆ ಸರ್ಕಾರ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡವಳಿಕೆ, ಅವರ ಹೇಳಿಕೆ. ಸಿಎಂ ಕಚೇರಿಯೇ ಪಾಕ್‌ ಪರ ಘೋಷಣೆಗೆ, ಕಲ್ಲು ತೂರಾಟಕ್ಕೆ ಕಾರಣ. ಮುಸ್ಲೀಮರು ಮಾತ್ರ ಮತ ಹಾಕಿದ್ದಾರೆಂಬ ಮಾನಸಿಕತೆಯಿಂದ ಸಿಎಂ ಸಿದ್ದರಾಮಯ್ಯ ಅವರು ಹೊರಗೆ ಬರಬೇಕು ಎಂದಿದ್ದಾರೆ.

ಪಾಕ್ ಪರ ಘೋಷಣೆ ಕೇಳಿದಾಗಲೂ ಜಾಣ ಕಿವುಡು ತೋರೋದು ಸಿಎಂಗೆ ಶೋಭೆ ತರೋದಿಲ್ಲ. ಕೇಂದ್ರದ ಕಾಂಗ್ರೆಸ್ ಓಲೈಕೆಯಿಂದಾಗಿ ಕಾಶ್ಮೀರದ ಜನ ಕಲ್ಲುತೂರಾಟದಿಂದ ವಲಸೆ ಹೋಗಿದ್ರು. ಇವತ್ತು ಕರ್ನಾಟಕದಲ್ಲೂ ಕಲ್ಲು ತೂರಾಟ ನಡೀತಿದೆ, ಬಹಳ ದೊಡ್ಡ ಗಲಭೆಗೆ ಇಸ್ಲಾಂ ಮೂಲಭೂತವಾದಿಗಳು ಪಿತೂರಿ ಮಾಡಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ : ಮದ್ದೂರು ಗಲಭೆ 21 ಮಂದಿ ಅರೆಸ್ಟ್‌

ರಾಜ್ಯ ಸರಕಾರಕ್ಕೂ, ಮೂಲಭೂತವಾದಿಗಳಿಗೂ ಶಾಂತಿ ಬೇಕಿಲ್ಲ. ಕಲ್ಲು ತೂರಿದವರ ವಿರುದ್ಧ, ಲಾಠಿಚಾರ್ಜ್ ಮಾಡಿದವರ ವಿರುದ್ಧ ಸರ್ಕಾರ ದಿಟ್ಟತನದ ಕ್ರಮ ಕೈಗೊಳ್ಳಬೇಕು ಎಂದು ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ.

ಇವಿಎಂ ಅವಹೇಳನ ರಾಷ್ಟ್ರೀಯ ಪಕ್ಷಕ್ಕೆ ಶೋಭೆಯಲ್ಲ

ಚುನಾವಣೆಗೆ ಬ್ಯಾಲೆಟ್‌ ಪೇಪರ್‌ ಜಾರಿಗೆ ಕಾಂಗ್ರೆಸ್‌ ಸರಕಾರ ತರಾತುರಿ ಮಾಡ್ತಾ ಇರೋ ಹಿನ್ನೆಲೆಯಲ್ಲಿ ಸುನಿಲ್‌ ಕುಮಾರ್‌ ಅವರು ಪ್ರತಿಕ್ರಿಯಿಸಿದ್ದಾರೆ. ಇವಿಎಂ ಬಗ್ಗೆ ಅವಹೇಳನ ಮಾಡೋದು ರಾಷ್ಟ್ರೀಯ ಪಕ್ಷಕ್ಕೆ ಶೋಭೆ ತರಲ್ಲ ಎಂದಿದ್ದಾರೆ.

ಎಲ್ಲವೂ ತಂತ್ರಜ್ಞಾನ ಆಧರಿತ ಆಗ್ತಿದೆ. ಕಾಂಗ್ರೆಸ್ ಗೆ ಶಿಲಾಯುಗದ ಆಡಳಿತವೇ ಬೇಕು ಅನ್ನೋದಾದರೆ ಅದೇ ಮಾಡಲಿ. ಕಾಂಗ್ರೆಸ್ ನವ್ರು ಶಿಲಾಯುಗಕ್ಕೆ ಮರಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಸಂಗಮೇಶ್‌ಗೆ ಸುನಿಲ್‌ ಕುಮಾರ್‌ ಟಾಂಗ್‌

ಮುಸ್ಲೀ ಆಗಿ ಹುಟ್ಟುತ್ತೇನೆ ಅನ್ನೋ ಭದ್ರಾವತಿ ಶಾಸಕ ಸಂಗಮೇಶ್‌ ಅವರ ಹೇಳಿಕೆಯನ್ನು ಶಾಸಕ ಸುನಿಲ್‌ ಕುಮಾರ್‌ ಅವರು ಟೀಕಿಸಿದ್ದಾರೆ. ಮುಂದಿನ ಜನ್ಮ ಇಸ್ಲಾಂನಲ್ಲಿ ಎಂಬ ಹೇಳಿಕೆ ಕಾಂಗ್ರೆಸ್ ಶಾಸಕರ ಬಾಯಲ್ಲಿ ಬರಲಾಂಭಿಸಿದೆ. ಇದು ಕಾಂಗ್ರೆಸ್ ಮಾನಸಿಕತೆ. ಮುಂದಿನ ಜನ್ಮ ಇಸ್ಲಾಂನಲ್ಲೇ ಆಗಲಿ, ಅದೂ ಪಾಕಿಸ್ತಾನದಲ್ಲೇ ಆಗಲಿ ಅಂತಾ ಆಶಿಸುತ್ತೇನೆ ಎಂದಿದ್ದಾರೆ.

ಕಲ್ಲುತೂರಾಟ ಚೆಲುವರಾಯ ಸ್ವಾಮಿಗೆ ಮೊದಲೇ ಗೊತ್ತಿತ್ತಾ ?

ಮದ್ದೂರು ಗಲಭೆಗೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ, ಚಲುವರಾಯಸ್ವಾಮಿ, ಬಿಜೆಪಿ ಹಾಗೂ ಜೆಡಿಎಸ್‌ ವಿರುದ್ದ ಕುಮ್ಮಕ್ಕಿನ ಆರೋಪ ಮಾಡಿದ್ದರು. ಈ ಆರೋಪಕ್ಕೆ ಸುನಿಲ್‌ ಕುಮಾರ್‌ ಖಡಕ್‌ ಆಗಿಯೇ ಉತ್ತರ ಕೊಟ್ಟಿದ್ದಾರೆ.

ಒಬ್ಬ ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲಿ ಕುಳಿತುಕೊಂಡು ಹೇಳಿಕೆ ನೀಡುತ್ತಾರೆ ಅಂದರೆ, ಮಸೀದಿಯಲ್ಲಿ ಕಲ್ಲು ತೂರಾಟ ಆಗಿದ್ದು ಚಲುವರಾಯಸ್ವಾಮಿಗೆ ಮೊದಲೇ ಗೊತ್ತಿತ್ತಾ ಎಂದು ಪ್ರಶ್ನಿಸಿದ್ದಾರೆ.

ಇಡೀ ರಾಜ್ಯದ ಹಿಂದೂಗಳ ಭಾವನೆಗೆ ತೊಂದರೆ ಮಾಡಬೇಕೆಂಬ ಉದ್ದೇಶದಿಂದ ಸಿಎಂ ಪದೇ ಪದೇ ಯಾವ ಹೇಳಿಕೆ ನೀಡುತ್ತಾರೆ ಎಂದು ಗಮನಿಸಿದ್ದೇವೆ ಎಂದಿದ್ದಾರೆ.

ಸಿಎಂ ಸುತ್ತಲೂ ನಗರ ನಕ್ಸಲರು, ಎಡಪಂಥೀಯರು

ಮೂಲ‌ ಸಿದ್ದರಾಮಯ್ಯ ಅವರು ಕಳೆದು ಹೋಗಿದ್ದಾರೆ. ಅವರ ಸುತ್ತ ಇಸ್ಲಾಂ ಮೂಲಭೂತವಾದಿಗಳು, ನಗರ ನಕ್ಸಲರು, ಎಡಪಂಥೀಯರು ಸೇರಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮದ್ದೂರಿನಲ್ಲಿ ಶಾಂತಿ ಅನ್ನೋದು ಎಲ್ಲಿದೆ. ನಿನ್ನೆ ಲಾಠಿ ಚಾರ್ಜ್ ಮೂಲಕ ಹೆಣ್ಣು ಮಕ್ಕಳನ್ನ ಹೊಡೆದಿದ್ದಾರೆ. ಹೊಡೆಯುವಾಗ ಶಾಂತಿ ಇರಬೇಕು ಅನಿಸಲಿಲ್ಲವಾ.? ಮೊದಲು ಸರ್ಕಾರ ಶಾಂತಿಯನ್ನ ಕಾಪಾಡಲಿ ಎಂದು ಸವಾಲು ಹಾಕಿದ್ದಾರೆ.

Exit mobile version