LKG UKG Education in Anganwadi: ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ಎಲ್​ಕೆಜಿ, ಯುಕೆಜಿ ಶಿಕ್ಷಣ : ಐತಿಹಾಸಿಕ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ

LKG UKG Education in Anganwadi: 5 ಸಾವಿರ ಅಂಗನವಾಡಿಗಳಲ್ಲಿ ಎಲ್​ಕೆಜಿ – ಯುಕೆಜಿ ಶಿಕ್ಷಣ, ಅಕ್ಕಪಡೆ ಮತ್ತು ಗೃಹಲಕ್ಷ್ಮೀ ವಿವಿಧೋದ್ದೇಶ ಸಹಕಾರಿ ಸಂಘಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಅದ್ಧೂರಿ ಚಾಲನೆ ನೀಡಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಶಿಶು ಅಭಿವೃದ್ಧಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್(DK Shivakumar)​ ಈ ಐತಿಹಾತಿಕ ಯೋಜನೆಗಳಿಗೆ ಚಾಲನೆ ನೀಡಿದ್ರು.

ಈ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಬಡ ವರ್ಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರಕಬೇಕೆಂಬ ಉದ್ದೇಶದಿಂದ ಪ್ರಾಯೋಗಿಕವಾಗಿ ರಾಜ್ಯದ 5 ಸಾವಿರ ಅಂಗನವಾಡಿಗಳಲ್ಲಿ ಎಲ್​ಕೆಜಿ – ಯುಕೆಜಿ ಶಿಕ್ಷಣ ಆರಂಭಿಸುತ್ತಿದ್ದೇವೆ. ಇದರ ಜೊತೆಯಲ್ಲಿ ಮಹಿಳೆಯರ ಆರ್ಥಿಕ ಸ್ವಾವಲಂಬಿತನಕ್ಕೆ ಮತ್ತಷ್ಟು ನೆರವಾಗಲು ಗೃಹ ಲಕ್ಷ್ಮೀ ಬ್ಯಾಂಕ್​ ಆರಂಭಗೊಂಡಿದೆ. ಮತ್ತು ಸ್ತ್ರೀಯರ ರಕ್ಷಣೆಗೆಂದು ಅಕ್ಕಪಡೆಯನ್ನು ಲೋಕಾರ್ಪಣೆಗೊಳಿಸಿದ್ದೇವೆ ಎಂದು ಹೇಳಿದರು.

Also Read: ಪವರ್​ ಶೇರಿಂಗ್​ ಪಾಲಿಟಿಕ್ಸ್ : ಹೈಕಮಾಂಡ್​ ಆಣತಿಯಂತೆ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​ ಬ್ರೇಕ್​ಫಾಸ್ಟ್​ ಮೀಟಿಂಗ್

ರಾಜ್ಯದಲ್ಲಿ ಪ್ರಸ್ತುತ ಒಟ್ಟೂ 69,922 ಅಂಗನವಾಡಿ ಕೇಂದ್ರಗಳಿದ್ದು ಪ್ರಾಯೋಗಿಕವಾಗಿ 5 ಸಾವಿರ ಅಂಗನವಾಡಿಗಳನ್ನು ಮಾತ್ರ ಎಲ್​ಕೆಜಿ – ಯುಕೆಜಿ ಶಿಕ್ಷಣಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಮೂಲಕ ಅಂಗನವಾಡಿ ಕೇಂದ್ರಗಳಲ್ಲಿ ಎಲ್​ಕೆಜಿ – ಯುಕೆಜಿ ಶಿಕ್ಷಣ ಆರಂಭಿಸಲಿರುವ ದೇಶದ ಮೊಟ್ಟ ಮೊದಲ ರಾಜ್ಯ ಕರ್ನಾಟಕ ಎಂಬ ಕೀರ್ತಿಗೆ ನಮ್ಮ ರಾಜ್ಯ ಪಾತ್ರವಾಗಿದೆ.

Exit mobile version