Illegal BPL card holders: ಅಕ್ರಮ ಬಿಪಿಎಲ್​ ಕಾರ್ಡ್​ದಾರರಿಗೆ ರಾಜ್ಯ ಸರ್ಕಾರದಿಂದ ಶಾಕ್​ : 7.76 ಲಕ್ಷ ರೇಷನ್​ ಕಾರ್ಡ್ ರದ್ದು

Illegal BPL card holders: ಅಕ್ರಮವಾಗಿ ಬಿಪಿಎಲ್​ ಕಾರ್ಡ್​ ಬಳಕೆ ಮಾಡುತ್ತಿರುವವರ ವಿರುದ್ಧ ರಾಜ್ಯ ಸರ್ಕಾರದ ಸಮರ ಮುಂದುವರಿದಿದೆ. ಅನರ್ಹ ಬಿಪಿಎಲ್​ ಕಾರ್ಡ್(BPL card) ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಬಿಗ್​ ಶಾಕ್​ ನೀಡಿದೆ. ಅನರ್ಹ ಫಲಾನುಭವಿಗಳನ್ನು ನಿಯಮಾನುಸಾರ ಪತ್ತೆ ಹಚ್ಚಿರುವ ರಾಜ್ಯ ಸರ್ಕಾರ 7.76 ಲಕ್ಷ ರೇಷನ್​ ಕಾರ್ಡ್​ಗಳನ್ನು ರದ್ದುಗೊಳಿಸಿದೆ.

ಪ್ರಸ್ತುತ ಕೇಂದ್ರ ಸರ್ಕಾರವು ಎನ್ಎಫ್ಎಸ್ಎ ಮಿತಿಯನ್ನು 4,01,93,000ಕ್ಕೆ ನಿಗಧಿಪಡಿಸಿದೆ. ಆದಾಗ್ಯೂ ದಿನಾಂಕ:25.08.2025ಕ್ಕೆ ಅನುಗುಣವಾಗುವಂತೆ ರಾಜ್ಯದಲ್ಲಿ ಒಟ್ಟು 4,54,00,838 ಪಡಿತರ ಫಲಾನುಭವಿಗಳಿದ್ದು ಕೇಂದ್ರ ಸರ್ಕಾರವು ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಫಲಾನುಭವಿಗಳಿರುತ್ತಾರೆ.

ಹೀಗಾಗಿ ಪ್ರಸ್ತುತ ರಾಜ್ಯದಲ್ಲಿ ಅನರ್ಹ ಪಡಿತರ ಚೀಟಿದಾರರ ಪತ್ತೆ ಕಾರ್ಯ ಚಾಲ್ತಿಯಲ್ಲಿದ್ದು , ಅನರ್ಹ ಬಿಪಿಎಲ್​ ಕಾರ್ಡ್​ದಾರರನ್ನು ಪತ್ತೆ ಮಾಡಿ ಅವುಗಳನ್ನು ರದ್ದುಗೊಳಿಸಲಾಗಿತ್ತಿದೆ. ಈ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಅರ್ಹ ಫಲಾನುಭವಿಗಳಿಗೆ ಆದ್ಯತಾ ಪಡಿತರ ಚೀಟಿ ನೀಡಲು ಸಾಧ್ಯವಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

Also Read: ಕ್ಲೈಮ್ಯಾಕ್ಸ್ ಹಂತ ತಲುಪಿದ ನವೆಂಬರ್ ಕ್ರಾಂತಿ : ಸಿದ್ದರಾಮಯ್ಯ – ಡಿಕೆಶಿ ನಡುವೆ ರಾಜಿ ಸಂಧಾನಕ್ಕೆ ಮುಂದಾದ ಹೈಕಮಾಂಡ್​

ಅಲ್ಲದೇ ಜನವರಿ ತಿಂಗಳಿನಿಂದ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಇಂದಿರಾ ಕಿಟ್​ ವಿತರಣೆ ಮಾಡಲಿದೆ. ತೊಗರಿ ಬೇಳೆ, ಸಕ್ಕರೆ, ಉಪ್ಪು ಹಾಗೂ ಅಡುಗೆ ಎಣ್ಣೆಗಳನ್ನು ಒಳಗೊಂಡಿರುವ ಈ ಕಿಟ್​ ಅರ್ಹರಿಗೆ ಮಾತ್ರ ದೊರಕಬೇಕು ಎಂದರೆ ಈ ರೀತಿಯ ಕ್ರಮಗಳು ಅತ್ಯಗತ್ಯ ಎಂಬುದು ರಾಜ್ಯ ಸರ್ಕಾರದ ಅಭಿಪ್ರಾಯವಾಗಿದೆ.

ಇನ್ನು ವಾರಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರ ಕೂಡ ದೇಶವ್ಯಾಪಿ 5.8 ಕೋಟಿ ನಕಲಿ ಬಿಪಿಎಲ್​ ಕಾರ್ಡ್​ಗಳನ್ನು ರದ್ದು ಮಾಡಿತ್ತು. ಆಧಾರ್ ವೆರಿಫಿಕೇಷನ್​ ಹಾಗೂ ಇ ಕೆವೈಸಿ ಮೂಲಕ ನಕಲಿ ಫಲಾನುಭವಿಗಳಿಗೆ ಅಂಕುಶ ಹಾಕುವ ಕೆಲಸವನ್ನು ಕೇಂದ್ರ ಸರ್ಕಾರ ಕೈಗೊಂಡಿತ್ತು.

Also Read: ಮಹಾಂತೇಶ್​ ಬೀಳಗಿ ಇಂದು ಅಂತ್ಯಕ್ರಿಯೆ : ತಾಯಿ ಸಮಾಧಿ ಪಕ್ಕದಲ್ಲೇ ಅಂತಿಮ ವಿಧಿವಿಧಾನ

Exit mobile version