2026ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ : ಕರ್ನಾಟಕದ 9 ಮಂದಿಗೆ ಸ್ಥಾನ

2026ನೇ ಸಾಲಿನ ಪದ್ಮ ಪ್ರಶಸ್ತಿ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ಬಾರಿಯ ಪದ್ಮ ಪಟ್ಟಿಯಲ್ಲಿ ಕರ್ನಾಟಕದ 9 ಸಾಧಕರು ಸ್ಥಾನ ಪಡೆದಿದ್ದಾರೆ. ಶತಾವಧಾನಿ ಗಣೇಶ್​ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆಯಾಗಿದ್ದರೆ, ಅಂಕೇಗೌಡ, ಅರ್ಮಿದಾ ಫರ್ನಾಂಡೀಸ್​, ಸುಶೀಲಮ್ಮ, ಪ್ರಭಾಕರ ಕೋರೆ, ಶಶಿ ಶೇಖರ ವೆಂಪಾಟಿ, ಶುಭಾ ವೆಂಕಟೇಶ ಅಯ್ಯಂಗಾರ್​, ಸುರೇಶ್​ ಹನಗವಾಡಿ ಹಾಗೂ ಟಿ.ಟಿ ಜಗನ್ನಾಥ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರಕಿದೆ.

ಈ ಬಾರಿ ಒಟ್ಟೂ 131 ಜನರಿಗೆ ಪದ್ಮ ಪ್ರಶಸ್ತಿ ಪ್ರಕಟಿಸಲಾಗಿದೆ. ಇದರಲ್ಲಿ 5 ಪದ್ಮವಿಭೂಷಣ, 13 ಪದ್ಮಭೂಷಣ ಹಾಗೂ 113 ಪದ್ಮಶ್ರೀ ಪ್ರಶಸ್ತಿಗಳು ಸೇರಿವೆ.
ಬಾಲಿವುಡ್​ ಹಿರಿಯ ನಟ ಧರ್ಮೇಂದ್ರ ಹಾಗೂ ಕೇರಳದ ಮಾಜಿ ಸಿಎಂ ವಿ.ಎಸ್​ ಅಚ್ಯುತಾನಂದನ್​ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ.

ಇದನ್ನೂ ಓದಿ: ಭಾರತ ಸರ್ಕಾರದ ಅತ್ಯುನ್ನತ ಪದ್ಮ ಪ್ರಶಸ್ತಿ 2026: ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ಸಂಪೂರ್ಣ ಪಟ್ಟಿ

ಇನ್ನು ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಕ್ರಿಕೇಟಿಗ ರೋಹಿತ್​ ಶರ್ಮಾ ಅವರಿಗೂ ಪದ್ಮಶ್ರೀ ಒಲಿದಿದೆ. ಇನ್ನುಳಿದಂತೆ ಭಾರತೀಯ ಕ್ರೀಡಾಪಟುಗಳಾದ ಪ್ರವೀಣ್​ ಕುಮಾರ್​, ಸವಿತಾ ಪುನಿತಾ, ಬಲದೇವ್​ ಸಿಂಗ್​, ಭಗವಾನ್​ ದಾಸ್​ ರಾಯ್ಕ್ಬಾರ್​​​ ಹಾಗೂ ಕೆ. ಪಜನಿವೇಲ್​ ಕೂಡ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Exit mobile version