ಕರ್ನಾಟಕಕ್ಕೆ ಬರುತ್ತಿದೆ ಮೂರು ನೂತನ ವಂದೇ ಭಾರತ್​ ರೈಲು : ಕರಾವಳಿ ಜನತೆಗೂ ಗುಡ್​ ನ್ಯೂಸ್​

ಕರ್ನಾಟಕದಲ್ಲಿ ಮೂರು ಹೊಸ ವಂದೇ ಭಾರತ್​ ರೈಲು ಆರಂಭಿಸಲು ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ. ಈ ಮೂರು ರೈಲುಗಳ ಪೈಕಿ 2 ರೈಲು ಕರ್ನಾಟಕ ಹಾಗೂ ಕೇರಳ ನಡುವೆ ಸಂಚರಿಸಲಿದ್ದು ಬೆಂಗಳೂರು ಹಾಗೂ ಮಂಗಳೂರಿನ ಜನತೆಗೆ ಅನುಕೂಲವಾಗಲಿದೆ.
ಮೂರು ಪ್ರಮುಖ ಮಾರ್ಗಗಗಳಲ್ಲಿ ವಂದೇ ಭಾರತ್​ ಸ್ಲೀಪರ್​ ರೈಲು ಸಂಚರಿಸಲಿದ್ದು , ಪ್ರಯಾಣಿಕರಿಗೆ ಅತ್ಯಂತ ಆರಾಮದಾಯಕ ಪ್ರಯಾಣದ ಅನುಭವ ನೀಡಲಿದೆ.
ಈ ವಂದೇ ಭಾರತ್​ ಸ್ಲೀಪರ್​ ರೈಲುಗಳು ತಿರುವನಂತಪುರದಿಂದ ಬೆಂಗಳೂರು, ಮಂಗಳೂರು ಹಾಗೂ ಚೆನ್ನೈ ಮಾರ್ಗವಾಗಿ ಸಂಚರಿಸಲಿವೆ. ಕೇರಳದಲ್ಲಿ ಸಂಚರಿಸುತ್ತಿರುವ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ, ತಿರುವನಂತಪುರಂ -ಮಂಗಳೂರು ಮಾರ್ಗದ ರೈಲು ಹೆಚ್ಚು ಆದಾಯವನ್ನು ಗಳಿಸುತ್ತಿದೆ. 2023ರ ಏಪ್ರಿಲ್‌ನಲ್ಲಿ ಕೇರಳದಲ್ಲಿ ಮೊದಲ ವಂದೇ ಭಾರತ್ ಸೇವೆ ಆರಂಭಗೊಂಡು ಭರ್ಜರಿ ಯಶಸ್ಸು ಸಂಪಾದಿಸಿದೆ.

Exit mobile version