ರಾಜ್ಯದ ಜನತೆ ಗಮನಿಸಿ : ಬಿಪಿಎಲ್​ ಕಾರ್ಡ್ ಇದ್ದಲ್ಲಿ ನೀವು ಪಡೆಯಬಹುದು ಉಚಿತ ದಂತಪಕ್ತಿ

ವಿವಿಧ ಭಾಗ್ಯಗಳ ಮೂಲಕ ರಾಜ್ಯದ ಬಡ ಜನತೆಗೆ ಅನುಕೂಲ ಮಾಡುತ್ತಲೇ ಬಂದಿರುವ ರಾಜ್ಯ ಸರ್ಕಾರ ಇದೀಗ ಬಿಪಿಎಲ್​ ಕಾರ್ಡ್​ದಾರರಿಗೆ ಮತ್ತೊಂದು ಶುಭ ಸುದ್ದಿ ನೀಡಿದೆ. ರಾಜ್ಯ ಸರ್ಕಾರವು ಹಿರಿಯ ನಾಗರಿಕರಿಗಾಗಿ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಬಿಪಿಎಲ್​ ಕಾರ್ಡ್ ಹೊಂದಿರುವ ನಾಗರಿಕರು ಇನ್ಮುಂದೆ ಉಚಿತವಾಗಿ ದಂತಪಂಕ್ತಿಗಳನ್ನು ಹಾಕಿಸಿಕೊಳ್ಳಬಹುದಾಗಿದೆ. ರಾಜ್ಯ ಸರ್ಕಾರವು ದಂತ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು ಗುಣಮಟ್ಟದ ದಂತಪಂಕ್ತಿಗಳನ್ನು ಒದಗಿಸುವ ಬಗ್ಗೆ ಘೋಷಣೆ ಮಾಡಿದೆ.

ಬಿಪಿಎಲ್​ ಕಾರ್ಡ್​ಗಳನ್ನು ಹೊಂದಿರುವ 45 ವರ್ಷ ಮೇಲ್ಪಟ್ಟ ನಾಗರಿಕರು ಈ ಯೋಜನೆಗೆ ಅರ್ಹರಾಗಲಿದ್ದಾರೆ. ಹತ್ತಿರದ ಜಿಲ್ಲಾಸ್ಪತ್ರೆ ಅಥವಾ ಸರ್ಕಾರ ಗುರುತಿಸಿರುವ ಆಯ್ದ 44 ದಂತ ವೈದ್ಯಕೀಯ ಕಾಲೇಜುಗಳಿಗೆ ತೆರಳಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಬಿಪಿಎಲ್​ ಕಾರ್ಡ್​ಗಳನ್ನು ಹಾಗೂ ಅಲ್ಲಿ ಕೇಳಲಾಗುವ ದಾಖಲೆಗಳನ್ನು ಒದಗಿಸುವ ಮೂಲಕ ಉಚಿತವಾಗಿ ದಂತಪಕ್ತಿಗಳನ್ನು ಹಾಕಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ವಿಶೇಷ ಪಿಂಚಣಿ ಯೋಜನೆ: ತಿಂಗಳಿಗೆ ₹3,000 ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಈಗಾಗಲೇ ರಾಜ್ಯದ 41,218ಕ್ಕೂ ಅಧಿಕ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆದಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಯೋಜನೆಯ ಲಾಭ ಪಡೆಯುವಂತೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ

Exit mobile version