ಕುಡಿದ ಮತ್ತಿನಲ್ಲಿ ಕಂಟೈನರ್​ ಚಾಲಕನ ಅವಾಂತರ : ಭೀಕರ ಅಪಘಾತದಲ್ಲಿ ಬಾಲಕ ಬಲಿ

ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಅರಗಾ ಗ್ರಾಮದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬಾಲಕ ಮೃತಪಟ್ಟು, ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡುತ್ತಿದ್ದ ಕಂಟೈನರ್​ ಚಾಲಕ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮುಗ್ಧ ಬಾಲಕ ಮೃತಪಟ್ಟ ದಾರುಣ ಘಟನೆಯು ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಅರಗಾ ಗ್ರಾಮದಲ್ಲಿ ಸಂಭವಿಸಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕುಡಿದ ಮತ್ತಿನಲ್ಲಿ ಕಂಟೈನರ್​ ವಾಹನ ಚಲಾಯಿಸುತ್ತಿದ್ದ ಚಾಲಕ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಾರಿನ ಮೇಲೆ ಕಂಟೈನರ್​ ಬಿದ್ದಿದೆ. ಈ ದುರಂತದಲ್ಲಿ 8 ವರ್ಷದ ಬಾಲಕ ಜೀವ ಕಳೆದುಕೊಂಡಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ದಂಪತಿ ಹಾಗೂ ಮತ್ತೊಂದು ಮಗುವನ್ನು ಕಾರವಾರದ ಮೆಡಿಕಲ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಉಡುಪಿ : MDMA ಮಾದಕ ವಸ್ತು ಸಾಗಾಟ; ಕಾಂಗ್ರೆಸ್ ಮುಖಂಡ ಸೇರಿ ಇಬ್ಬರು ಅರೆಸ್ಟ್‌

ಅಪಘಾತ ಮಾಡಿರುವ ಕಂಟೈನರ್​ ಮಹಾರಾಷ್ಟ್ರದ ನೋಂದಣಿ ಹೊಂದಿತ್ತು. ಟ್ರಕ್​ ಚಾಲಕನನ್ನು ಕಾರವಾರ ಗ್ರಾಮೀಣ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಕುಡಿದ ಮತ್ತಿನಲ್ಲಿ ರಸ್ತೆ ತುಂಬೆಲ್ಲಾ ಉಳಿದ ವಾಹನಗಳ ಚಾಲಕರೊಂದಿಗೆ ಜಗಳವಾಡುತ್ತಲೇ ಬರುತ್ತಿದ್ದ ಎನ್ನಲಾಗಿದೆ. ಜಗಳ ಮಾಡಿಕೊಂಡು ಕೋಪದಲ್ಲಿ ಕಂಟೈನರ್​ ಚಲಾಯಿಸುತ್ತಿದ್ದ ಈತ ಬಳಿಕ ಭೀಕರ ರಸ್ತೆ ಅಪಘಾತ ಮಾಡಿದ್ದಾನೆ.

Exit mobile version