ಬೆಂಗಳೂರಿನ ಜನರಿಗೆ ಇತರ ಊರುಗಳ ಜನರಿಗಿಂತ ವರ್ಷಕ್ಕೆ 7 ದಿನ ಕಡಿಮೆ! ಏಕೆ ಗೊತ್ತಾ?  

Bengaluru Worst Traffic: ಸಿಲಿಕಾನ್ ಸಿಟಿ ಬೆಂಗಳೂರು ತನ್ನ ಟ್ರಾಫಿಕ್ ಸಮಸ್ಯೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಮತ್ತೆ ಸುದ್ದಿಯಾಗಿದೆ. ಇತ್ತೀಚಿನ ‘ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್’ (TomTom Traffic Index 2025) ವರದಿಯ ಪ್ರಕಾರ, ವಿಶ್ವದ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನ ಪಡೆದಿದೆ. ಮೊದಲ ಸ್ಥಾನದಲ್ಲಿ ಮೆಕ್ಸಿಕೋ ಸಿಟಿ ಇದೆ.

ವರದಿಯ ಆಘಾತಕಾರಿ ಮುಖ್ಯಾಂಶಗಳು:

ಪೀಕ್ ಅವರ್ ಪರಿಸ್ಥಿತಿ:

ವಿಶ್ವದ ಟಾಪ್ 5 ಸಂಚಾರ ದಟ್ಟಣೆಯ ನಗರಗಳು ಹೀಗಿವೆ:

  1. ಮೆಕ್ಸಿಕೋ ಸಿಟಿ, ಮೆಕ್ಸಿಕೋ
  2. ಬೆಂಗಳೂರು, ಭಾರತ
  3. ಡಬ್ಲಿನ್, ಐರ್ಲೆಂಡ್
  4. ಲಾಡ್ಜ್, ಪೋಲೆಂಡ್
  5. ಪುಣೆ, ಭಾರತ

ಭಾರತದ ಇತರ ಪ್ರಮುಖ ನಗರಗಳಾದ ಮುಂಬೈ (18ನೇ ಸ್ಥಾನ), ನವದೆಹಲಿ (23ನೇ ಸ್ಥಾನ) ಮತ್ತು ಕೋಲ್ಕತ್ತಾ (29ನೇ ಸ್ಥಾನ) ಕೂಡ ಈ ಪಟ್ಟಿಯಲ್ಲಿವೆ.

ಸ್ವಂತ ಮನೆ ಒದಗಿಸುತ್ತೆ PMAY-U 2.0 ಯೋಜನೆ: ಯಾರು ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಅತ್ಯಂತ ಕೆಟ್ಟ ದಿನ: 2025ರ ಮೇ 17, ಶನಿವಾರದಂದು ಬೆಂಗಳೂರಿನಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ದಾಖಲಾಗಿತ್ತು ಎಂದು ವರದಿ ತಿಳಿಸಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಖಾಸಗಿ ವಾಹನಗಳ ಸಂಖ್ಯೆ ಮತ್ತು ನಡೆಯುತ್ತಿರುವ ರಸ್ತೆ ಕಾಮಗಾರಿಗಳು ಈ ದಟ್ಟಣೆಗೆ ಪ್ರಮುಖ ಕಾರಣ ಎನ್ನಲಾಗಿದೆ.

Exit mobile version