UPSC Civil Services 2025 Final Result Out : ಯುನಿಯನ್ ಪಬ್ಲಿಕ್ ಸರ್ವೀಸ್ ಕಮೀಷನ್ (UPSC) ಕಾಮನ್ ಸರ್ವೀಸ್ ಎಕ್ಸಾಮಿನೇಷನ್ (CSE) 2025 ರ ಫಲಿತಾಂಶ ಬಿಡುಗಡೆ ಮಾಡಿದೆ. ಸಂದರ್ಶನದಲ್ಲಿ ಭಾಗವಹಿಸಿದ್ದ 2,736 ಅಭ್ಯರ್ಥಿಗಳಲ್ಲಿ ಅಂತಿಮವಾಗಿ 958 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಈ ವರ್ಷ ರಾಜಸ್ಥಾನದ ಅನುಜ್ ಅಗ್ನಿಹೋತ್ರಿ ಮೊದಲ ಸ್ಥಾನ ಗಳಿಸಿದ್ದಾರೆ. ರಾಜೇಶ್ವರಿ ಸುವೆ ಎಂ ಎರಡನೇ ಸ್ಥಾನ ಮತ್ತು ಆಕಾಂಶ್ ಧುಲ್ 3ನೇ ಸ್ಥಾನ ಗಳಿಸಿದ್ದಾರೆ.
ಯುಪಿಎಸ್‌ಸಿ ಸಿಎಸ್‌ಸಿ 2025 ರ ಫಲಿತಾಂಶ ವೀಕ್ಷಿಸಲು ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್ upsc.gov.in ಗೆ ಭೇಟಿ ನೀಡಿ. ಅಲ್ಲಿ ರೋಲ್ ನಂಬರ್ ಮತ್ತು ಜನ್ಮ ದಿನಾಂಕ ನಮೂದಿಸುವ ಮೂಲಕ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಈಗ ಬಿಡುಗಡೆಯಾದ ಒಟ್ಟು ಅಭ್ಯರ್ಥಿಗಳ ಪಟ್ಟಿಯಲ್ಲಿ 180 ಮಂದಿ IAS ಅಧಿಕಾರಿಗಳಾಗಿರುತ್ತಾರೆ. 2 ಅಭ್ಯರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ.
ಯುಪಿಎಸ್‌ಸಿ ಸಿವಿಲ್ ಸರ್ವೀಸ್ 2025 ಅಂತಿಮ ಫಲಿತಾಂಶ : ಟಾಪರ್ ಲಿಸ್ಟ್
ರ್‍ಯಾಂಕ್ 1 – ಅನುಜ್ ಅಗ್ನಿಹೋತ್ರಿ
ರ್‍ಯಾಂಕ್ 2 – ರಾಜೇಶ್ವರಿ ಸುವೆ ಎಮ್
ರ್‍ಯಾಂಕ್ 3 – ಆಕಾಂಶ್ ಧುಲ್
ರ್‍ಯಾಂಕ್ 4 – ರಾಘವ್ ಜುಂಜುನ್ವಾಲಾ
ರ್‍ಯಾಂಕ್ 5 – ಇಶಾನ್ ಭಟ್ನಾಗರ್
ರ್‍ಯಾಂಕ್ 6 – ಜಿನ್ನಿಯಾ ಅರೋರಾ
ರ್‍ಯಾಂಕ್ 7 – ಎ.ಆರ್. ರಜಾ ಮೊಹೈದೀನ್
ರ್‍ಯಾಂಕ್ 8 – ಪಕ್ಷಲ್ ಸೆಕ್ರೆಟರಿ
ರ್‍ಯಾಂಕ್ 9 – ಆಸ್ಥಾ ಜೈನ್
ರ್‍ಯಾಂಕ್ 10 – ಉಜ್ವಲ್ ಪ್ರಿಯಾಂಕ್
UPSC 2025: ಒಟ್ಟು ಹುದ್ದೆಗಳು
ವಿವಿಧ ಸೇವೆಗಳಿಗಾಗಿ ಕೇಂದ್ರ ಸರ್ಕಾರವು ಒಟ್ಟು 1087 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಇವುಗಳಲ್ಲಿ
• ಐಎಎಸ್: 180
• ಐಎಫ್‌ಎಸ್: 55
• ಐಪಿಎಸ್: 150
• ಕೇಂದ್ರ ಸೇವೆಗಳು (ಗ್ರೂಪ್ ‘ಎ’): 507
• ಗ್ರೂಪ್ ‘ಬಿ’ ಸೇವೆಗಳು: 195
ಈ 1087 ಹುದ್ದೆಗಳಲ್ಲಿ 42 ಹುದ್ದೆಗಳು ಪಿಡಬ್ಲ್ಯೂಬಿಡಿ ವರ್ಗಕ್ಕೆ ಸೇರಿವೆ.
ಅಂಕ ಪಟ್ಟಿ ಯಾವಾಗ ಲಭ್ಯ?
ಯುಪಿಎಸ್‌ಸಿ ಅಂಕಪಟ್ಟಿ ಫಲಿತಾಂಶ ಬಿಡುಗಡೆಯಾದ 15 ದಿನಗಳಲ್ಲಿ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. ಆಯೋಗವು ಫಲಿತಾಂಶಗಳಿಗಾಗಿ ಸಹಾಯವಾಣಿ ಸಂಖ್ಯೆಯನ್ನು ಸಹ ನೀಡಿದೆ. ಇದರ ಜೊತೆಗೆ ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ಎಕ್ಸಾಮ್ ಹಾಲ್‌ನ ಬಳಿ ಫೆಸಿಲಿಟೇಶನ್ ಕೌಂಟರ್ ತೆರೆಯಲಾಗಿದೆ. ಅಭ್ಯರ್ಥಿಗಳು ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ ಕೌಂಟರ್‌ಗೆ ಖುದ್ದಾಗಿ ಭೇಟಿ ನೀಡಬಹುದು. ಅಥವಾ 23385271 / 23381125 / 23098543 ಸಹಾಯವಾಣಿಗೆ ಕರೆ ಮಾಡಿ ನೇಮಕಾತಿ ಮಾಹಿತಿ ಪಡೆಯಬಹುದು.
