ಕ್ರೀಡಾಪಟುಗಳಿಗೆ ಗುಡ್‌ ನ್ಯೂಸ್‌! ದಕ್ಷಿಣ ರೈಲ್ವೆಯಲ್ಲಿ ಕ್ರೀಡಾ ಕೋಟಾದಡಿ ನೇಮಕಾತಿ

RRC SR Recruitment 2025: ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ರೀಡೆಗಳನ್ನು ಪ್ರತಿನಿಧಿಸಿದ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವ ಸುವರ್ಣಾವಕಾಶ ಒದಗಿ ಬಂದಿದೆ.

ದಕ್ಷಿಣ ರೈಲ್ವೆ ಸ್ಪೋರ್ಟ್ಸ್‌ ಕೋಟಾದಡಿ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯು ಸೆಪ್ಟೆಂಬರ್‌ 13 ರಿಂದ ಪ್ರಾರಂಭವಾಗಿದ್ದು ಅಕ್ಟೋಬರ್‌ 12 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಲೆವಲ್‌ 1 ರಿಂದ 5 ರವರೆಗಿನ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯ ನಡೆಯಲಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು rrcmas.in ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅಗತ್ಯವಿರುವ ಅರ್ಹತೆ ಮತ್ತು ಮಾನದಂಡಗಳು ಹೀಗಿವೆ…

ಅರ್ಹತೆ ಮತ್ತು ಮಾನದಂಡಗಳು

ಆರ್‌ಆರ್‌ಸಿ ಹೊರಡಿಸಿದ ಅಧಿಸೂಚನೆಯ ಪ್ರಕಾರ ಒಟ್ಟು 67 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅದರಲ್ಲಿ ಲೆವಲ್‌ 1 ರಲ್ಲಿ 46, ಲೆವಲ್‌ 2 ಮತ್ತು 3 ರಲ್ಲಿ 16, ಲೆವಲ್‌ 4 ಮತ್ತು 5 ರಲ್ಲಿ 5 ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ.

ವಯೋಮಿತಿ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ಹಾಗೂ ಗರಿಷ್ಠ ವಯಸ್ಸು 25 ವರ್ಷಗಳು.

ಇದನ್ನೂ ಓದಿ: ಡಿಗ್ರಿ ಆದವರಿಗೆ RBI ನಲ್ಲಿ ಕೆಲಸ ಮಾಡುವ ಸುವರ್ಣಾವಕಾಶ: 120 ಗ್ರೇಡ್ ಬಿ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ

ಶೈಕ್ಷಣಿಕ ಅರ್ಹತೆ

ಲೆವಲ್‌ 1 ರಿಂದ ಲೆವಲ್‌ 7 ವರೆಗಿನ ಹುದ್ದೆಗಳ ನೇಮಕಾತಿಗೆ ಶೈಕ್ಷಣಿಕ ಅರ್ಹತೆ ಬೇರೆ ಬೇರೆಯಾಗಿದೆ.

ನೇಮಕಾತಿ ಅಧಿಸೂಚನೆಯನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಶುಲ್ಕ

ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಎಲ್ಲಾ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕ 500 ರೂ. ಪಾವತಿಸಬೇಕಾಗುತ್ತದೆ. ಟ್ರಯಲ್‌ನಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ 400 ರೂ. ಮರುಪಾವತಿಸಲಾಗುವುದು. ಇದಲ್ಲದೆ, ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ/ಮಾಜಿ ಸೈನಿಕ ಅಭ್ಯರ್ಥಿಗಳು 250 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ ಟ್ರಯಲ್‌ನಲ್ಲಿ ಪಭಾಗವಹಿಸಿದವರಿಗೆ ಸಂಪೂರ್ಣ ಶುಲ್ಕವನ್ನು ಮರುಪಾವತಿಸಲಾಗುವುದು.

ಅರ್ಜಿ ಸಲ್ಲಿಕೆ ಹೇಗೆ?

– ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮೊದಲಿಗೆ ರೈಲ್ವೆಯ ಅಧಿಕೃತ ವೆಬ್‌ಸೈಟ್ rrcmas.in ಗೆ ಭೇಟಿ ನೀಡಿ.

– ನಂತರ ವೆಬ್‌ಸೈಟ್‌ನ ಮುಖಪುಟದಲ್ಲಿ, ನೇರನೇಮಕಾತಿ ಟ್ಯಾಬ್‌ಗೆ ಹೋಗಬೇಕು. ಅಲ್ಲಿ ನೋಂದಣಿ ಲಿಂಕ್‌ ಮೇಲೆ ಕ್ಲಿಕ್ಕಿಸಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ.

– ಇದಾದ ನಂತರ ಮತ್ತೊಮ್ಮೆ ಲಾಗಿನ್ ಆಗುವ ಮೂಲಕ ಅರ್ಜಿ ನೂಮೂನೆಯಲ್ಲಿ ಕೇಳಿದ ಮಾಹಿತಿಗಳನ್ನು ಭರ್ತಿ ಮಾಡಿ.

– ಬಳಿಕ ನಿಗದಿತ ಶುಲ್ಕವನ್ನು ಪಾವತಿಸಿ.

– ಅಂತಿಮವಾಗಿ, ಸಂಪೂರ್ಣವಾಗಿ ಭರ್ತಿ ಮಾಡಿದ ಫಾರ್ಮ್ ಅನ್ನು ಇನ್ನೊಮ್ಮೆ ಓದಿ ಸಲ್ಲಿಸಿ.

– ಭವಿಷ್ಯದ ಉಲ್ಲೇಖಕ್ಕಾಗಿ ಅದರ ಮುದ್ರಣವನ್ನು ತೆಗೆದುಕೊಂಡು ಕಾಯ್ದಿಟ್ಟುಕೊಳ್ಳಿ.

ಇದನ್ನೂ ಓದಿ: ಡಿಗ್ರಿ ಆದವರಿಗೆ ಗುಡ್ ನ್ಯೂಸ್! ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿದೆ 1425 ಹುದ್ದೆಗಳು

(RRC SR Recruitment 2025 application invited under sports quota apply within October 12)

Exit mobile version