ರೈಲ್ವೆಯಿಂದ ಅತಿ ದೊಡ್ಡ ನೇಮಕಾತಿ: 11,127 ಲೊಕೊ ಪೈಲಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

RRB ALP Recruitment 2026: ರೈಲ್ವೆ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂದು ತಯಾರಿ ನಡೆಸುತ್ತಿದ್ದವರಿಗೆ ಸುವರ್ಣಾವಕಾಶ. ರೈಲ್ವೆ ಮಂತ್ರಾಲಯವು 11,000 ಕ್ಕೂ ಅಧಿಕ ಅಸಿಸ್ಟಂಟ್‌ ಲೊಕೊ ಪೈಲೆಟ್‌ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅಧಿಕೃತ ಘೋಷಣೆಯ ಪ್ರಕಾರ ಆರ್‌ಆರ್‌ಬಿ ವಿವಿಧ ವಲಯಗಳಲ್ಲಿ ಖಾಲಿ ಇರುವ ಒಟ್ಟು 11,127 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಪ್ರಾರಂಭಗೊಂಡ ನಂತರ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಫಾರ್ಮ್‌ ಭರ್ತಿ ಮಾಡಬಹುದಾಗಿದೆ.

ನೇಮಕಾತಿ ವಿವರ

ಆರ್‌ಆರ್‌ಬಿ ಅಸಿಸ್ಟೆಂಟ್‌ ಲೊಕೊ ಪೈಲೆಟ್‌ ಹುದ್ದೆಗೆ ವಲಯವಾರು ನೇಮಕಾತಿ ವಿವರಗಳನ್ನು ಹಂಚಿಕೊಂಡಿದೆ. ಅಧಿಸೂಚನೆ ಪ್ರಕಾರ ರೈಲ್ವೆ ಇಲಖೆಯು ಒಟ್ಟು 11,127 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ.

ಶೈಕ್ಷಣಿಕೆ ಅರ್ಹತೆ

ರೈಲ್ವೆ ಇಲಾಖೆಯ ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ 10 ನೇ ತರಗತಿ ಉತ್ತೀರ್ಣರಾಗಿಬೇಕು. ಜೊತೆಗೆ ಐಟಿಐ ಅಥವಾ ಡಿಪ್ಲೊಮಾ ಪಡೆದಿರಬೇಕು.

ವಯೋಮಿತಿ

ಈ ನೇಮಕಾತಿಯಲ್ಲಿ ಭಾಗವಹಿಸಿಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಗಳಾಗಿರಬೇಕು ಹಾಗೂ ಗರಿಷ್ಠ ವಯಸ್ಸು 30 ವರ್ಷಗಳು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.

ಅರ್ಜಿ ಶುಲ್ಕ

ಸಾಮಾನ್ಯ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು 500 ರೂ. ಅರ್ಜಿ ಶುಲ್ಕವನ್ನು ಸಲ್ಲಿಸಬೇಕು. SC/ST/ಮಾಜಿ ಸೈನಿಕರು/ಟ್ರಾನ್ಸ್ಜೆಂಡರ್/EBC ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 250 ರೂ. ನಿಗದಿಪಡಿಸಲಾಗಿದೆ.

ಇದನ್ನೂ ಓದಿ: Government Jobs: ನಿರುದ್ಯೋಗಿಗಳ ಹೋರಾಟಕ್ಕೆ ಸಂದ ಜಯ; 56 ಸಾವಿರ ಹುದ್ದೆಗಳ ನೇಮಕಾತಿಗೆ ರಾಜ್ಯ ಸಚಿವ ಸಂಪುಟ ಅಸ್ತು!

ಆಯ್ಕೆ ಪ್ರಕ್ರಿಯೆ ಹೇಗೆ?

ಈ ನೇಮಕಾತಿಯಲ್ಲಿ ಆಯ್ಕೆಯಾಗಲು ಅಭ್ಯರ್ಥಿಗಳು CBT 1, CBT 2, ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಟೆಸ್ಟ್ (CBAT), ದಾಖಲೆ ಪರಿಶೀಲನೆ (DV) ಮತ್ತು ವೈದ್ಯಕೀಯ ಪರೀಕ್ಷೆ (ME) ಗಳನ್ನು ಎದುರಿಸಬೇಕಾಗುತ್ತದೆ.

Exit mobile version