Railway Department: SSLC ಮತ್ತು ITI ಪಾಸಾದವರಿಗೆ ಶುಭ ಸುದ್ದಿ : ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Railway Department: 10ನೇ ತರಗತಿ ಹಾಗೂ ITI ಉತ್ತೀರ್ಣರಾದವರಿಗೆ ಶುಭ ಸುದ್ದಿ ಕಾದಿದೆ. ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಈ ವಿದ್ಯಾರ್ಹತೆ ಪಡೆದ ಅಭ್ಯರ್ಥಿಗಳಿಗೆ ಈಶಾನ್ಯ ರೈಲ್ವೆ ಇಲಾಖೆಯಿಂದ ದೇಶಾದ್ಯಂತ ಒಟ್ಟೂ 1104 ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆ ಗಳಿಸಲು ಇಚ್ಛಿಸುವವರು ನವೆಂಬರ್​ 15ರ ಒಳಗಾಗಿ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಖಾಲಿ ಇರುವ ಹುದ್ದೆಗಳ ವಿವರವನ್ನು ನೋಡುವುದಾದರೆ ಸಿಗ್ನಲ್ ವರ್ಕ್‌ಶಾಪ್ 63, ಬಿಡ್ಜಿ ವರ್ಕ್‌ಶಾಪ್ 35,ಮೆಕ್ಯಾನಿಕಲ್ ವರ್ಕ್‌ಶಾಪ್ 390, ಸಿಗ್ನಲ್ ವರ್ಕ್‌ಶಾಪ್ 63,ಡೀಸೆಲ್ ಶೆಡ್ 60, ಕ್ಯಾರೇಜ್ ಮತ್ತು ವ್ಯಾಗನ್ 64, ಕ್ಯಾರೇಜ್ ಮತ್ತು ವ್ಯಾಗನ್/ಲಕ್ನೋ 149, ಮೆಕ್ಯಾನಿಕಲ್ ವರ್ಕ್‌ಶಾಪ್ 142, ಕ್ಯಾರೇಜ್ ಮತ್ತು ವ್ಯಾಗನ್ ವಾರಣಾಸಿ 73, ಡೀಸೆಲ್ ಶೆಡ್/ಗೊಂಡಾ 88 ಹಾಗೂ ವಾರಣಾಸಿಯ ಟಿಆರ್‌ಡಿಯಲ್ಲಿ ಖಾಲಿ ಇರುವ 40 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

Also Read: ಕ್ರೀಡಾಪಟುಗಳಿಗೆ ಶುಭ ಸುದ್ದಿ! ಬಿಎಸ್‌ಎಫ್‌ನಲ್ಲಿ ಕಾನ್ಸ್‌ಟೇಬಲ್‌ನ ಜನರಲ್‌ ಡ್ಯೂಟಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಹತೆ :
ಇನ್ನು ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಲು ಇಚ್ಛಿಸುವವರು 10ನೇ ತರಗತಿ ಅಥವಾ ಐಟಿಐನಲ್ಲಿ ಉತ್ತೀರ್ಣರಾಗಿರಬೇಕು. 2025ರ ಅಕ್ಟೋಬರ್​ 16ಕ್ಕೆ ಅನ್ವಯವಾಗುವಂತೆ 24 ವರ್ಷದ ಒಳಗಿನ ಪ್ರಾಯವಾಗಿರಬೇಕು. ವಯಸ್ಸಿನ ಮಿತಿಯಲ್ಲಿ ಎಸ್‌ಸಿ, ಎಸ್‌ಟಿಗಳಿಗೆ 5 ವರ್ಷಗಳು, ಒಬಿಸಿಗೆ 3 ವರ್ಷಗಳು ಮತ್ತು ಪಿಎಚ್ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕ :
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡುವವರು 100 ರೂಪಾಯಿಯನ್ನು ಶುಲ್ಕದ ರೂಪದಲ್ಲಿ ಪಾವತಿ ಮಾಡಬೇಕು. ಆದರೆ ಎಸ್ಸಿ, ಎಸ್ಟಿ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ರಿಯಾಯಿತಿ ನೀಡಲಾಗಿದ್ದು ಯಾವುದೇ ಶುಲ್ಕ ಪಾವತಿಯ ಅಗತ್ಯವಿರುವುದಿಲ್ಲ.

Also Read: ಇಸ್ರೋದಲ್ಲಿ ಸೈಂಟಿಸ್ಟ್‌ ಆಗುವ ಸುರ್ಣಾವಕಾಶ: 141 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಯ್ಕೆ ಪ್ರಕ್ರಿಯೆ :
ಈ ಹುದ್ದೆಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ. ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.

Exit mobile version