ನಬಾರ್ಡ್‌ ನೇಮಕಾತಿ 2025: 92 ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

NABARD Recruitment 2025: ನ್ಯಾಷನಲ್‌ ಬ್ಯಾಂಕ್ ಫಾರ್‌ ಅಗ್ರಿಕಲ್ಚರ್‌ ಆ್ಯಂಡ್‌ ರೂರಲ್‌ ಡೆವಲಪ್‌ಮೆಂಟ್‌ (NABARD) ಸಹಾಯಕ ವ್ಯವಸ್ಥಾಪಕ ಗ್ರೇಡ್‌ ಎ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ.

ಒಟ್ಟು 92 ಹುದ್ದೆಗಳ ಭರ್ತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದ್ದು ನವೆಂಬರ್‌ 30, 2025ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಆಸಕ್ತ ಅರ್ಹ ಅಭ್ಯರ್ಥಿಗಳು ನಬಾರ್ಡ್‌ನ ಅಧಿಕೃತ ವೆಬ್‌ಸೈಟ್‌ nabard.org ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆ ಮತ್ತು ಮಾನದಂಡಗಳೇನು ಎಂದು ನೋಡೋಣ.

ಹುದ್ದೆಯ ಹೆಸರು ಮತ್ತು ವಿವರ

ಈ ನೇಮಕಾತಿ ಅಭಿಯಾನದಲ್ಲಿ ನಬಾರ್ಡ್‌ ಒಟ್ಟು 92 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಅದು ಈ ಕೆಳಗಿನ ರೀತಿಯಲ್ಲಿದೆ:

ಸಹಾಯಕ ವ್ಯವಸ್ಥಾಪಕ ಗ್ರೇಡ್ ‘ಎ’ (ಗ್ರಾಮೀಣಾಭಿವೃದ್ಧಿ ಬ್ಯಾಂಕಿಂಗ್ ಸೇವೆ/ಆರ್‌ಡಿಬಿಎಸ್) – 85
ಸಹಾಯಕ ವ್ಯವಸ್ಥಾಪಕ ಗ್ರೇಡ್ ‘ಎ’ (ಕಾನೂನು) – 02
ಸಹಾಯಕ ವ್ಯವಸ್ಥಾಪಕ ಗ್ರೇಡ್ ‘ಎ’ (ಪ್ರೋಟೋಕಾಲ್ ಮತ್ತು ಭದ್ರತಾ ಸೇವೆ) – 4

ಶೈಕ್ಷಣಿಕ ಅರ್ಹತೆ
ಸಹಾಯಕ ವ್ಯವಸ್ಥಾಪಕ ಗ್ರೇಡ್ ಎ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಯಿಂದ ಹುದ್ದೆಯ ಪ್ರಕಾರ ಸಂಬಂಧಿತ ಕ್ಷೇತ್ರದಲ್ಲಿ ಪದವಿ/ ಸ್ನಾತಕೋತ್ತರ ಪದವಿ/ MBA/ PGDM/ CA/ CS/ ICWA ಇತ್ಯಾದಿಗಳಲ್ಲಿ ಉತ್ತೀರ್ಣರಾಗಿರಬೇಕು.

ನಬಾರ್ಡ್‌ ನೇಮಕಾತಿ 2025 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ.

ವಯೋಮಿತಿ

ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ವರ್ಷಗಳು ಹಾಗೂ ಗರಿಷ್ಠ ವಯಸ್ಸು 30 ವರ್ಷಗಳು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.

ಅರ್ಜಿ ಶುಲ್ಕ

ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲ್ಯೂಬಿಡಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಅರ್ಜಿಯನ್ನು 150 ರೂ. ಶುಲ್ಕವನ್ನು ಪಾವತಿಸಿ ಸಲ್ಲಿಸಬೇಕಾಗುತ್ತದೆ. ಇತರ ಎಲ್ಲಾ ವರ್ಗಗಳ ಅಭ್ಯರ್ಥಿಗಳು 850 ರೂ. ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: PNB 750 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆ ನೇಮಕಾತಿ: ಅರ್ಜಿ ಸಲ್ಲಿಕೆಗೆ ನ. 23 ಕೊನೆ !

ಅರ್ಜಿ ಸಲ್ಲಿಕೆ ಹೇಗೆ?

ನಬಾರ್ಡ್ ನೇಮಕಾತಿ 2025 ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಅಭ್ಯರ್ಥಿಗಳು ಮೊದಲಿಗೆ ನಬಾರ್ಡ್‌ನ ಅಧಿಕೃತ ವೆಬ್‌ಸೈಟ್‌ ibpsreg.ibps.in/nbardamoct25/ ಪೋರ್ಟಲ್‌ಗೆ ಭೇಟಿ ನೀಡಬೇಕು.

ನಂತರ ಮುಖಪುಟದಲ್ಲಿ ಹೊಸ ನೋಂದಣಿ ಮಾಡಿಕೊಳ್ಳಿ. ಅಲ್ಲಿ ನೀಡಿರುವ ವಿವರಗಳನ್ನು ಭರ್ತಿ ಮಾಡುವ ಮೂಲಕ ನಿಮ್ಮ ಹೆಸರು ನೋಂದಾಯಿಸಿ.

ಬಳಿಕ ನಿಮ್ಮ ಇತರ ವಿವರಗಳು, ವಿದ್ಯಾರ್ಹತೆಗಳನ್ನು ಸರಿಯಾಗಿ ತುಂಬಿ.

ನಂತರ ನಿಮ್ಮ ಸಹಿ ಮತ್ತು ಫೋಟೋವನ್ನು ಅಪ್‌ಲೋಡ್ ಮಾಡಿ.

ಇದಾದ ಬಳಿಕ, ನಿಗದಿತ ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ

ಕೊನೆಯದಾಗಿ ಅರ್ಜಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ. ಫಾರ್ಮ್ ಅನ್ನು ಸಲ್ಲಿಸಿ.

ನಂತರ, ಭವಿಷ್ಯದ ಉಲ್ಲೇಖಕ್ಕಾಗಿ ಅದರ ಪ್ರಿಂಟ್‌ಔಟ್‌ ತೆಗೆದುಕೊಳ್ಳಿ.

ಇದನ್ನೂ ಓದಿ: CCRH ನೇಮಕಾತಿ 2025: ಗ್ರೂಪ್ ಎ, ಬಿ ಮತ್ತು ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Exit mobile version