ಐಬಿಪಿಎಸ್‌ ಕ್ಲರ್ಕ್‌ ಪ್ರಿಲಿಮ್ಸ್‌ ಪರೀಕ್ಷೆ ಹಾಲ್‌ ಟಿಕೆಟ್‌: ಡೌನ್‌ಲೋಡ್‌ ಮಾಡುವುದು ಹೇಗೆ?

IBPS Clerk Prelims Admit Card 2025: ಇನ್ಸ್ಟಿಟ್ಯೂಟ್ ಆಫ್‌ ಬ್ಯಾಂಕಿಂಗ್‌ ಪರ್ಸನಲ್‌ ಸೆಲೆಕ್ಷನ್ ಕ್ಲರ್ಕ್‌ ಪ್ರಿಲಿಮ್ಸ್‌ ಪ್ರವೇಶ ಪರೀಕ್ಷೆಯ ಹಾಲ್‌ ಟಿಕಟ್‌ ಅನ್ನು ಬಿಡುಗಡೆ ಮಾಡಿದೆ.

ಪರೀಕ್ಷೆಗೆ ಹಾಜಾರಾಗಲು ಬಯಸುವ ಅಭ್ಯರ್ಥಿಗಳು ಐಬಿಪಿಎಸ್‌ನ ಅಧಿಕೃತ ವೆಬ್‌ಸೈಟ್‌ ibps.in ಗೆ ಭೇಟಿ ನೀಡುವ ಮೂಲಕ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಅದಕ್ಕೆ ಅಭ್ಯರ್ಥಿಗಳು ಮೊದಲಿಗೆ ತಮ್ಮ ನೋಂದಣಿ ಸಂಖ್ಯೆ, ಜನ್ಮದಿನಾಂಕ/ಪಾಸ್‌ವರ್ಡ್‌ ನಮೂದಿಸಿ ಲಾಗಿನ್‌ ಆಗಬೇಕು. ಅಭ್ಯರ್ಥಿಗಳು ಹಾಲ್‌ ಟಿಕೆಟ್‌ ಅನ್ನು ಅಕ್ಟೋಬರ್‌ 5, 2025 ರವರೆಗೆ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಐಬಿಪಿಎಸ್‌ ಕ್ಲರ್ಕ್‌ ಪ್ರಿಲಿಮ್ಸ್‌ ಪರೀಕ್ಷೆ ಯಾವಾಗ?

ಐಬಿಪಿಎಸ್‌ ಕ್ಲರ್ಕ್‌ ಪ್ರಿಲಿಮ್ಸ್‌ ಪರೀಕ್ಷೆಯು ಅಕ್ಟೋಬರ್‌ 4, 5 ಮತ್ತು 11 ರಂದು ನಡೆಯಲಿದೆ. ಪ್ರಿಲಿಮಿನಿರಿ ಪರೀಕ್ಷೆಯು ಆನ್‌ಲೈನ್‌ ನಲ್ಲಿ ನಡೆಸಲಾಗುತ್ತಿದೆ. ಪ್ರಶ್ನೆ ಪತ್ರಿಕೆಯು ಒಟ್ಟು 100 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ 30 ಅಂಕಗಳ ಇಂಗ್ಲೀಷ್‌ ಭಾಷೆಯ ಪ್ರಶ್ನೆ, 35 ಅಂಕಗಳು ನ್ಯೂಮೆರಿಕಲ್‌ ಎಬಿಲಿಟಿ ಹಾಗೂ 35 ಅಂಕಗಳು ರೀಜನಿಂಗ್‌ ಎಬಿಲಿಟಿ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈ ಪ್ರಶ್ನೆ ಪ್ರತ್ರಿಕೆಗೆ ಉತ್ತರಿಸಲು ಅಭ್ಯರ್ಥಿಗಳಿಗೆ ಒಂದು ಗಂಟೆಯ ಕಾಲಾವಕಾಶವಿರುತ್ತದೆ.

ಇದನ್ನೂ ಓದಿ: ಡಿಗ್ರಿ ಆದವರಿಗೆ ಆಫೀಸರ್ ಆಗುವ ಸುವರ್ಣಾವಕಾಶ: ಬ್ಯಾಂಕ್‌ ಆಫ್ ಮಹಾರಾಷ್ಟ್ರಕ್ಕೆ ಇಂದೇ ಅರ್ಜಿ ಸಲ್ಲಿಸಿ

ಐಬಿಪಿಎಸ್‌ ಕ್ಲರ್ಕ್‌ ಪ್ರಿಲಿಮ್ಸ್‌ ಪರೀಕ್ಷೆ ಹಾಲ್‌ ಟಿಕೆಟ್‌ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ?

ಹಾಲ್‌ ಟಿಕೆಟ್‌ನಲ್ಲಿ ಏನು ಗಮನಿಸಬೇಕು?

ಹಾಲ್‌ ಟಿಕೆಟ್‌ನಲ್ಲಿ ನಿಮ್ಮ ಹೆಸರು, ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿ. ಅದರಲ್ಲಿರುವ ಪರೀಕ್ಷಾ ಮಾರ್ಗಸೂಚಿಗಳನ್ನು ಓದಿ. ಪರೀಕ್ಷೆಗೆ ಅಗತ್ಯವಿರುವ ದಾಖಲೆಗಳೇನು ಎಂಬುದನ್ನು ಪರಿಶೀಲಿಸಿ. ನಕಾರಾತ್ಮಕ ಅಂಕಗಳು ಎಷ್ಟು ಎಂಬುದನ್ನು ಪರೀಕ್ಷಿಸಿ. ಇದು ಉತ್ತರ ಬರೆಯುವಾಗ ಎಚ್ಚರಿಕೆಯಿಂದಿರಬೇಕು ಎಂಬುದನ್ನು ನೆನಪಿಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಹೆಚ್ಚಿನ ವಿವರಗಳಿಗಾಗಿ ಐಬಿಪಿಎಸ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಇದನ್ನೂ ಓದಿ: ಪದವೀಧರರಿಗೆ ಕೆನರಾ ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಸುವರ್ಣಾವಕಾಶ

(How to download IBPS Clerk Prelims Admit Card 2025)

Exit mobile version