ಬಿಇ, ಬಿಟೆಕ್‌ ಆದವರಿಗೆ ಗುಡ್‌ನ್ಯೂಸ್‌ : CDAC ನೇಮಕಾತಿಯಲ್ಲಿ ಪ್ರಾಜೆಕ್ಟ್‌ ಎಂಜಿನಿಯರ್‌, ಮ್ಯಾನೇಜರ್‌ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಸೆಂಟರ್‌ ಫಾರ್ ಡೆವಲಪ್‌ಮೆಂಟ್‌ ಆಫ್‌ ಅಡ್ವಾನ್ಸ್‌ಡ್ ಕಂಪ್ಯೂಟಿಂಗ್‌ (C-DAC) ದೇಶಾದ್ಯಂತ ತನ್ನ ಒಟ್ಟು 11 ಕೇಂದ್ರಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ.

ತಾಂತ್ರಿಕ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ನಡೆಸಬೇಕೆಂದು ಬಯಸುವ ಯುವಕ/ಯುವತಿ ಮತ್ತು ಅನುಭವಿ ವೃತ್ತಪರರಿಗೆ ಅತ್ಯುತ್ತಮ ಅವಕಾಶವೊಂದು ಬಂದಿದೆ. ಸೆಂಟರ್‌ ಫಾರ್ ಡೆವಲಪ್‌ಮೆಂಟ್‌ ಆಫ್‌ ಅಡ್ವಾನ್ಸ್‌ಡ್ ಕಂಪ್ಯೂಟಿಂಗ್‌ (C-DAC) ದೇಶಾದ್ಯಂತ ತನ್ನ ಒಟ್ಟು 11 ಕೇಂದ್ರಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿ ಮೂಲಕ ಅದು ಬರೋಬ್ಬರಿ 951 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ. ಸಿಡಿಎಸಿ ಈ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಜೂನ್‌ 1 ರಿಂದ ಪ್ರಾರಂಭಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಸಿಡಿಎಸಿಯ ಅಧಿಕೃತ ವೆಬ್‌ಸೈಟ್‌ cdac.in ಗೆ ಭೇಟಿ ನೀಡಿ ಜೂನ್ 20 ರ ಒಳಗೆ ತಮ್ಮ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಯು ನೋಯ್ಡಾ, ಬೆಂಗಳೂರು, ಚೆನ್ನೈ, ಪುಣೆ, ಮುಂಬೈ, ಹೈದರಾಬಾದ್, ದೆಹಲಿ, ಮೊಹಾಲಿ, ಕೋಲ್ಕತ್ತಾ ಮುಂತಾದ ಸ್ಥಳಗಳಿಗೆ ನಡೆಯಲಿದೆ.

ನೇಮಕಾತಿ ವಿವರ

ಈ ನೇಮಕಾತಿ ಅಭಿಯಾನದ ಮೂಲಕ ಸಿಡಿಎಸಿ ಪ್ರಾಜೆಕ್ಟ್ ಅಸೋಸಿಯೇಟ್ ಮತ್ತು ಫ್ರೆಶರ್‌ಗಳಿಗೆ ಪ್ರಾಜೆಕ್ಟ್ ಎಂಜಿನಿಯರ್‌ನಿಂದ ಹಿಡಿದು ಸೀನಿಯರ್ ಪ್ರಾಜೆಕ್ಟ್ ಎಂಜಿನಿಯರ್, ಪ್ರಾಜೆಕ್ಟ್ ಮ್ಯಾನೇಜರ್, ಅಡ್ಮಿನಿಸ್ಟ್ರೇಟಿವ್ ಅಸೋಸಿಯೇಟ್ ಮತ್ತು ಪ್ರಾಜೆಕ್ಟ್ ಟೆಕ್ನೀಷಿಯನ್‌ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ.

ವಿದ್ಯಾರ್ಹತೆ

ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಕನಿಷ್ಠ 60% ಅಂಕಗಳೊಂದಿಗೆ ಬಿಇ/ಬಿಟೆಕ್‌ ಅಥವಾ ತತ್ಸಮಾನ ಪದವಿಯನ್ನು ಹೊಂದಿರಬೇಕು. ಕಂಪ್ಯೂಟರ್‌ ಅಪ್ಲಿಕೇಶನ್‌ನಲ್ಲಿ ಸ್ನಾತಕೋತ್ತರ ಪದವೀಧರರು, ಪಿಹೆಚ್‌ಡಿ ಹೊಂದಿದವರೂ ಸಹ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು.

ಇದನ್ನೂ ಓದಿ : ಎನ್‌ಸಿಎಲ್‌ನಲ್ಲಿ 1607 ಅಪ್ರೆಂಟಿಸ್‌ಶಿಪ್‌ಗೆ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಕೆ ಈ ದಿನದಿಂದ ಪ್ರಾರಂಭ

ವಯೋಮಿತಿ

ಸಿಡಿಎಸಿ ನೇಮಕಾತಿಯಲ್ಲಿ ವಯೋಮಿತಿಯನ್ನು ಹುದ್ದೆಗಳಿಗೆ ಅನುಸಾರವಾಗಿ ನಿಗದಿ ಪಡಿಸಲಾಗಿದೆ. ಕನಿಷ್ಠ ವಯಸ್ಸು 30 ವರ್ಷಗಳಾಗಿದೆ. ಗರಿಷ್ಠ ವಯೋಮಿತಿಯನ್ನು ಹುದ್ದೆಗೆ ಅನುಗುಣವಾಗಿ 56 ವರ್ಷಗಳವರೆಗೆ ನಿಗದಿಪಡಿಸಲಾಗಿದೆ. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.

ಅರ್ಜಿ ಶುಲ್ಕ

ಈ ನೇಮಕಾತಿಯಲ್ಲಿ ಎಲ್ಲ ವರ್ಗದ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಆಯ್ಕೆ ಪ್ರಕ್ರಿಯೆ

ಸಿಡಿಎಸಿ ನೇಮಕಾತಿಯಲ್ಲಿ ಅಭ್ಯರ್ಥಿಗಳ ಆಯ್ಕೆಯು ಮೂರು ಹಂತಗಳಲ್ಲಿ ನಡೆಯಲಿದೆ. ಅರ್ಜಿ ಪರಿಶೀಲನೆ, ಲಿಖಿತ ಪರೀಕ್ಷೆ (ಅಗತ್ಯವಿದ್ದರೆ), ವೈಯಕ್ತಿಕ ಸಂದರ್ಶನ.

ಅರ್ಜಿ ಸಲ್ಲಿಕೆ ಹೇಗೆ?

Exit mobile version