CBSE Recruitment 2025: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯಿಂದ ಗ್ರೂಪ್‌ ಎ, ಬಿ ಮತ್ತು ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ

CBSE Recruitment 2025: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಗ್ರೂಪ್ ಎ, ಬಿ ಮತ್ತು ಸಿ ಹುದ್ದೆಗಳ ನೇಮಕಾತಿಗೆ ಪ್ರಕಟಣೆಯನ್ನು ಹೊರಡಿಸಿದೆ. ಈ ಅಧಿಸೂಚನೆಯ ಪ್ರಕಾರ ಸಿಬಿಎಸ್‌ಇ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ.

ಒಟ್ಟು 224 ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಡಿಸೆಂಬರ್ 22, 2025 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳು ಸಿಬಿಎಸ್‌ಇ ಯ ಅಧಿಕೃತ ವೆಬ್‌ಸೈಟ್ cbse.gov.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು.

ಈ ನೇಮಕಾತಿ ಅಭಿಯಾನದಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತಾ ಮಾನದಂಡಗಳೇನು ಎಂದು ತಿಳಿಯೋಣ.

ನೇಮಕಾತಿ ವಿವರ

ಈ ನೇಮಕಾತಿಯಲ್ಲಿ ಸಿಬಿಎಸ್‌ಇ ಖಾಲಿ ಇರುವ 224 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಅದು ಗ್ರೂಪ್‌ ಎ, ಬಿ ಮತ್ತು ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ವಿವರವಾದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

ವಯೋಮಿತಿ

ಸಿಬಿಎಸ್‌ಇ ಗ್ರೂಪ್‌ ಎ, ಬಿ ಮತ್ತು ಸಿ ಹುದ್ದೆಗಳಿಗೆ ಗರಿಷ್ಠ ವಯೋಮಿತಿಯನ್ನು ಹುದ್ದೆಗಳಿಗೆ ಅನುಸಾರವಾಗಿ ನಿಗದಿಪಡಿಸಿದೆ. ಈ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಗಳು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.

ವಿದ್ಯಾರ್ಹತೆ

ವಿವಿಧ ಗ್ರೂಪ್‌ನ ಹುದ್ದೆಗಳಿಗೆ ವಿದ್ಯಾರ್ಹತೆಯನ್ನು ಬೇರೆ ಬೇರೆಯಾಗಿ ನಗದಿಪಡಿಸಿದೆ.

ಅರ್ಜಿ ಶುಲ್ಕ

ಸಿಬಿಎಸ್‌ಇ ನೇಮಕಾತಿಗ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕು. ಶುಲ್ಕವಿಲ್ಲದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಎಸ್‌ಸಿ/ಎಸ್‌ಟಿ/ದಿವ್ಯಾಂಗರು/ಮಾಜಿ ಸೈನಿಕರು/ಮಹಿಳಾ ಅಭ್ಯರ್ಥಿಗಳು ₹250 ಪಾವತಿಸಬೇಕಾಗುತ್ತದೆ.

ಆದರೆ ಮೀಸಲಾತಿ ರಹಿತ/OBC/EWS ಅಭ್ಯರ್ಥಿಗಳು ಗ್ರೂಪ್ A ಗೆ ₹1750 ಮತ್ತು ಗ್ರೂಪ್ B ಮತ್ತು C ಗೆ ₹1050 ಪಾವತಿಸಬೇಕಾಗುತ್ತದೆ. ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು UPI ಮೂಲಕ ಪಾವತಿಸಬಹುದು.

ಇದನ್ನೂ ಓದಿ: ಇಂಡಿಗೋದಲ್ಲಿ ಉದ್ಯೋಗಾವಕಾಶ! ಈ ಕೆಲಸ ಗೊತ್ತಿದ್ರೆ ತಕ್ಷಣ ಅಪ್ಪೆ ಮಾಡಿ

ಅರ್ಜಿ ಸಲ್ಲಿಕೆ ಹೇಗೆ?

Exit mobile version