ಯಾರು ಈ ಅಯತೊಲ್ಲಾ ಅಲಿ ಖಮೇನಿ? ಇಸ್ರೇಲ್, ಅಮೆರಿಕದ ಟಾರ್ಗೆಟ್ ಲಿಸ್ಟ್‌ನಲ್ಲಿ ಈತನ ಹೆಸರಿರುವುದೇಕೆ?

Who is Iran’s Ayatollah Ali Khamenei: ಟೆಹ್ರಾನ್: ಶನಿವಾರ ಇಸ್ರೇಲ್ ಮತ್ತು ಅಮೆರಿಕದ ಪಡೆಗಳು ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ‘ಆಪರೇಷನ್ ಎಪಿಕ್ ಫ್ಯೂರಿ’ ಹೆಸರಿನಲ್ಲಿ ಭೀಕರ ವೈಮಾನಿಕ ದಾಳಿ ನಡೆಸಿವೆ. ಈ ದಾಳಿಯು ಇರಾನ್‌ನ ಪರಮೋಚ್ಚ ನಾಯಕ (Supreme Leader) ಅಯತೊಲ್ಲಾ ಅಲಿ ಖಮೇನಿ ಅವರ ಕಚೇರಿಯ ಸಮೀಪವೇ ನಡೆದಿದ್ದು, ಅವರ ಸುರಕ್ಷತೆಯ ಬಗ್ಗೆ ಜಾಗತಿಕವಾಗಿ ಚರ್ಚೆ ಶುರುವಾಗಿದೆ.

ಈಗ ಖಮೇನಿ ಎಲ್ಲಿದ್ದಾರೆ?

ವರದಿಗಳ ಪ್ರಕಾರ, ಇಸ್ರೇಲ್ ದಾಳಿ ನಡೆಸಿದ ಸಮಯದಲ್ಲಿ ಖಮೇನಿ ಟೆಹ್ರಾನ್‌ನಲ್ಲಿ ಇರಲಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಈಗಾಗಲೇ ರಹಸ್ಯ ಮತ್ತು ಅತ್ಯಂತ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಫೆಬ್ರವರಿ 8 ರಂದು ನಡೆಯಬೇಕಿದ್ದ ವಾರ್ಷಿಕ ಮಿಲಿಟರಿ ಕಾರ್ಯಕ್ರಮಕ್ಕೂ ಅವರು ಗೈರುಹಾಜರಾಗಿದ್ದರು, ಇದು ಅವರ ಸುರಕ್ಷತೆಯ ಬಗ್ಗೆ ಮೊದಲೇ ಆತಂಕ ಮೂಡಿಸಿತ್ತು.

ಯಾರು ಈ ಅಯತೊಲ್ಲಾ ಅಲಿ ಖಮೇನಿ?

ಇಸ್ರೇಲ್ ಮತ್ತು ಅಮೆರಿಕ ಇವರನ್ನೇ ಗುರಿಯಾಗಿಸುತ್ತಿರುವುದೇಕೆ?

  1. ಪರಮಾಣು ಭೀತಿ: ಇರಾನ್ ಪರಮಾಣು ಅಸ್ತ್ರಗಳನ್ನು ತಯಾರಿಸುತ್ತಿದೆ ಎಂಬುದು ಅಮೆರಿಕ ಮತ್ತು ಇಸ್ರೇಲ್‌ನ ದೊಡ್ಡ ಆತಂಕ. ಇದರ ಹಿಂದೆ ಖಮೇನಿ ಅವರ ನಿರ್ಧಾರವೇ ಮುಖ್ಯವಾಗಿದೆ.
  2. ಇಸ್ರೇಲ್ ವಿರೋಧಿ ನಿಲುವು: ಇಸ್ರೇಲ್ ದೇಶವನ್ನು ನಾಶಪಡಿಸುವುದೇ ತನ್ನ ಗುರಿ ಎಂದು ಘೋಷಿಸಿರುವ ಖಮೇನಿ ಅವರನ್ನು “ಅತ್ಯಂತ ಅಪಾಯಕಾರಿ ವ್ಯಕ್ತಿ” ಎಂದು ಇಸ್ರೇಲ್ ಪರಿಗಣಿಸಿದೆ.
  3. ಪ್ರತಿಭಟನೆಗಳ ದಮನ: ಇರಾನ್‌ನಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ನಡೆದ ಪ್ರತಿಭಟನೆಗಳನ್ನು (ಮಹ್ಸಾ ಅಮಿನಿ ಸಾವು) ಸೈನಿಕರ ಮೂಲಕ ಅತ್ಯಂತ ಕ್ರೂರವಾಗಿ ಹತ್ತಿಕ್ಕಿದ ಆರೋಪ ಇವರ ಮೇಲಿದೆ.
  4. ಟ್ರಂಪ್ ಎಚ್ಚರಿಕೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಖಮೇನಿ ಅವರನ್ನು “ಸುಲಭ ಗುರಿ” ಎಂದು ಕರೆದಿದ್ದು, ಇರಾನ್‌ನಲ್ಲಿ ಆಡಳಿತ ಬದಲಾವಣೆಯೇ ಉತ್ತಮ ಪರಿಹಾರ ಎಂದು ಈ ಹಿಂದೆಯೇ ಹೇಳಿದ್ದರು.

    ಎಲ್‌ಐಸಿಯಲ್ಲಿ ಹಣ ಹೂಡಿಕೆ ಮಾಡ್ತಿದ್ದೀರಾ ? ನಿಮ್ಮ ಹಣಕ್ಕೆ ಗ್ಯಾರಂಟಿ ಯಾರು ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಇಸ್ರೇಲ್ ರಕ್ಷಣಾ ಸಚಿವರು ಹೇಳುವಂತೆ, “ಇಸ್ರೇಲ್ ಅನ್ನು ನಾಶಮಾಡುವ ಗುರಿ ಹೊಂದಿರುವ ಖಮೇನಿಯಂತಹ ಸರ್ವಾಧಿಕಾರಿ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ.” ಈ ಹೇಳಿಕೆಯು ಯುದ್ಧವು ಈಗ ನೇರವಾಗಿ ನಾಯಕತ್ವದ ಮೇಲೆ ನಡೆಯುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದೆ.

Exit mobile version