Indian student arrested: ಚಲಿಸುತ್ತಿದ್ದ ವಿಮಾನದಲ್ಲಿ ಸಹಪ್ರಯಾಣಿಕರ ಮೇಲೆ ಫೋರ್ಕ್​ನಿಂದ ಹಲ್ಲೆ : ಭಾರತೀಯ ವಿದ್ಯಾರ್ಥಿ ಬಂಧನ

Indian student arrested: ಜರ್ಮನಿಯ ಫ್ರಾಂಕ್​ಫರ್ಟ್​ಗೆ ಅಮೆರಿಕದ ಚಿಕಾಗೋದಿಂದ ಪ್ರಯಾಣಿಸುತ್ತಿದ್ದ ಇಬ್ಬರು ಯುವಕರನ್ನು ಲೋಹದ ಫೋರ್ಕ್​ನಿಂದ ಇರಿದ ಆರೋಪದ ಅಡಿಯಲ್ಲಿ 28 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಂಧಿತ ವಿದ್ಯಾರ್ಥಿಯನ್ನು ಪ್ರಣೀತ್​ ಕುಮಾರ್​ ಎಂದು ಗುರುತಿಸಲಾಗಿದೆ. ಈತ ವಿಮಾನದಲ್ಲಿದ್ದ ಸಹಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ ಆರೋಪದ ಅಡಿಯಲ್ಲಿ ಜೈಲುಪಾಲಾಗಿದ್ದಾನೆ. ಈ ಘಟನೆ ಬಳಿಕ ವಿಮಾನವನ್ನು ಬೋಸ್ಟನ್​ ನಿಲ್ದಾಣದಲ್ಲಿ ಲ್ಯಾಂಡ್​ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿ ಪ್ರಣೀತ್​ ಕುಮಾರ್​ ಉಸಿರಿಪಲ್ಲಿ ಎಂಬಾತ ಊಟವಾದ ಬಳಿಕ ಫೋರ್ಕ್​ನಿಂದ 17 ವರ್ಷದ ಇಬ್ಬರು ಯುವಕರನ್ನು ಇರಿದಿದ್ದಾನೆ, ಒಬ್ಬಾತನ ಭುಜಕ್ಕೆ ಹಾಗೂ ಮತ್ತೊಬ್ಬನ ತಲೆಯ ಹಿಂಭಾಗಕ್ಕೆ ಗಾಯ ಮಾಡಿದ್ದಾನೆ.

Also Read: ಗಡಿ ಭದ್ರತಾ ಪಡೆಯಲ್ಲಿ ಭಾರತೀಯ ತಳಿಯ ಶ್ವಾನಗಳ ಪಾರುಪತ್ಯ : ಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಗರಿಮೆ

ಇದು ಮಾತ್ರವಲ್ಲದೇ ಆರೋಪಿಯು ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾನೆ ಹಾಗೂ ವಿಮಾನದ ಸಿಬ್ಬಂದಿ ಮೇಲೆ ಕಪಾಳಮೋಕ್ಷ ಮಾಡಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಈ ಎಲ್ಲಾ ಘಟನೆಗಳ ಬಳಿಕ ವಿಮಾನವನ್ನು ಬೋಸ್ಟನ್​ ಲೋಗನ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು, ಹಾಗೂ ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ದೈಹಿಕ ಹಲ್ಲೆ, ಅಪಾಯಕಾರಿ ಆಯುಧಗಳ ಬಳಕೆ ಆರೋಪಗಳ ಅಡಿಯಲ್ಲಿ ಭಾರತೀಯ ಯುವಕನ ವಿರುದ್ಧ ಅಮೆರಿಕ(America) ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿ ಪ್ರಣೀತ್​ ಕುಮಾರ್​ ವಿದ್ಯಾರ್ಥಿ ವೀಸಾದ ಮೇಲೆ ಅಮೆರಿಕದಲ್ಲಿ ವಾಸವಿದ್ದ ಎನ್ನಲಾಗಿದೆ. ಇತ್ತೀಚಿಗೆ ಆತ ಸ್ನಾತಕೋತ್ತರ ಅಭ್ಯಾಸಕ್ಕೆಂದು ಅಮೆರಿಕಕ್ಕೆ ಬಂದಿದ್ದ ಎನ್ನಲಾಗಿದೆ. ಆದರೆ ಈ ಘಟನೆಯ ಬಳಿಕ ಪ್ರಣೀತ್​ಕುಮಾರ್​ಗೆ ಇನ್ನು ಅಮೆರಿಕದಲ್ಲಿ ಕಾನೂನುಬದ್ಧ ಸ್ಥಾನಮಾನವಿಲ್ಲ ಎಂದು ಅಮೆರಿಕದ ನ್ಯಾಯಾಲಯ ಹೇಳಿದೆ.

Also read: ಯುದ್ಧಕ್ಕೆ ತಯಾರಾಗುತ್ತಿದೆಯಾ ಚೀನಾ : ಭಾರತೀಯ ಗಡಿ ಬಳಿ ಹೊಸ ವಾಯು ರಕ್ಷಣಾ ತಾಣ ನಿರ್ಮಿಸಿದೆ ಡ್ರ್ಯಾಗನ್​ ರಾಷ್ಟ್ರ

Exit mobile version