ಇನ್ಮುಂದೆ ವಂದೇ ಮಾತರಂ ಹಾಡುವಾಗಲೂ ಎದ್ದು ನಿಲ್ಲುವುದು ಕಡ್ಡಾಯ? ರಾಷ್ಟ್ರಗೀತೆಯಂತೆ ಅಧಿಕೃತ ಪ್ರೋಟೋಕಾಲ್

Vande Mataram protocol: ನವದೆಹಲಿ: ಭಾರತದ ರಾಷ್ಟ್ರಗೀತೆ ‘ಜನ ಗಣ ಮನ’ ಹಾಡುವಾಗ ಪಾಲಿಸುವ ಶಿಷ್ಟಾಚಾರಗಳನ್ನು (Protocols) ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗೂ ವಿಸ್ತರಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ. ವಂದೇ ಮಾತರಂ ಗೀತೆ ರಚನೆಯಾಗಿ 150 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.

ಸರ್ಕಾರದ ಮುಂದಿರುವ ಪ್ರಸ್ತಾವನೆ:

ಪ್ರಸ್ತುತ ರಾಷ್ಟ್ರಗೀತೆಗೆ ಇರುವಂತೆಯೇ ವಂದೇ ಮಾತರಂ ಗೀತೆಗೂ ಸಮಾನ ನಿಯಮಗಳನ್ನು ಅನ್ವಯಿಸಬೇಕೇ ಎಂಬ ಬಗ್ಗೆ ಗೃಹ ಸಚಿವಾಲಯವು ಚರ್ಚೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಸದ್ಯಕ್ಕೆ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿಲ್ಲವಾದರೂ, ರಾಷ್ಟ್ರೀಯ ಗೌರವದ ದೃಷ್ಟಿಯಿಂದ ಈ ಬದಲಾವಣೆ ತರಲು ಸರ್ಕಾರ ಮುಂದಾಗಿದೆ.

ಪ್ರಸ್ತುತ ಇರುವ ಕಾನೂನು ಏನು?

ಹಲವು ವರ್ಷಗಳ ಬೇಡಿಕೆ:

ವಂದೇ ಮಾತರಂ ಗೀತೆಗೂ ರಾಷ್ಟ್ರಗೀತೆಯಷ್ಟೇ ಸಮಾನ ಸ್ಥಾನಮಾನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈಕೋರ್ಟ್‌ಗಳಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಬಿಜೆಪಿ ನಾಯಕರು ಕೂಡ ಈ ಗೀತೆಯು ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ ಗೀತೆಯಾಗಿದ್ದು, ಇದಕ್ಕೆ ಸಮಾನ ಗೌರವ ಸಿಗಲೇಬೇಕು ಎಂದು ವಾದಿಸುತ್ತಿದ್ದರು.

ಸೈಂಟ್‌ ಮೇರಿಸ್‌ ಐಲ್ಯಾಂಡ್‌ ನಲ್ಲಿ ಧ್ವಜಾರೋಹಣ, ಭಗವಾಧ್ವಜ ವಿವಾದ ಬಿಟ್ಟು ಬಿಡಿ : ಲಕ್ಷ್ಮೀ ಹೆಬ್ಬಾಳ್ಕರ್‌

ಹಿನ್ನೆಲೆ:

ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರ ‘ಆನಂದ ಮಠ’ ಕಾದಂಬರಿಯ ಭಾಗವಾಗಿರುವ ‘ವಂದೇ ಮಾತರಂ’ ಸಂಸ್ಕೃತ ಪದದ ಅರ್ಥ “ತಾಯೇ ನಿನಗೆ ವಂದಿಸುವೆ” ಎಂದಾಗಿದೆ. 1950ರಲ್ಲಿ ಇದನ್ನು ಭಾರತದ ರಾಷ್ಟ್ರೀಯ ಗೀತೆ (National Song) ಎಂದು ಅಂಗೀಕರಿಸಲಾಗಿತ್ತು. ಒಂದು ವೇಳೆ ಈ ಪ್ರಸ್ತಾವನೆ ಜಾರಿಗೆ ಬಂದರೆ, ಸಾರ್ವಜನಿಕ ಸಮಾರಂಭಗಳಲ್ಲಿ ವಂದೇ ಮಾತರಂ ಗೀತೆ ಮೊಳಗುವಾಗ ಜನರು ಎದ್ದು ನಿಂತು ಗೌರವ ಸೂಚಿಸುವುದು ಕಾನೂನುಬದ್ಧವಾಗಿ ಕಡ್ಡಾಯವಾಗಲಿದೆ.

Exit mobile version