ಶಬರಿಮಲೆ ವಿಮಾನ ನಿಲ್ದಾಣ ಯೋಜನೆಯಲ್ಲಿ ಕೇರಳ ಸರ್ಕಾರಕ್ಕೆ ಹಿನ್ನಡೆ

ಶಬರಿಮಲೆಗೆ ಪ್ರಯಾಣಿಸುವ ಭಕ್ತಾದಿಗಳ ಸಂಖ್ಯೆ ಅಪಾರ. ಈ ಹಿನ್ನೆಲೆಯಲ್ಲಿ ಶಬರಿಮಲೆ ವಿಮಾನ ನಿಲ್ದಾಣ ಯೋಜನೆ ಕೈಗೆತ್ತಿಕೊಂಡಿದ್ದ ಕೇರಳ ಸರ್ಕಾರಕ್ಕೆ ನಿರಾಶೆಯಾಗಿದೆ. ಚೆರುವಳ್ಳಿ ಎಸ್ಟೇಟ್​ ಮಾಲೀಕತ್ವ ವಿವಾದ ಪಾಲಾಸಬ್​ ಕೋರ್ಟ್​ನಲ್ಲಿದ್ದು. ಇಲ್ಲಿ ಜಾಗದ ಮಾಲೀಕತ್ವದ ಸಾಬೀತುಪಡಿಸುವಲ್ಲಿ ಸರ್ಕಾರ ವಿಫಲವಾಗಿದೆ. ಈ ಮೂಲಕ ಶಬರಿಮಲೆ ಏರ್​ಪೋರ್ಟ್​ ಕನಸು ಬಹುತೇಕ ಭಗ್ನವಾಗಿದೆ.

ಚೆರುವಳ್ಳಿ ಎಸ್ಟೇಟ್​ ಜಾಗ ಮಾಲೀಕತ್ವದ ವಿಚಾರದಲ್ಲಿ ಕೇರಳ ಸರ್ಕಾರ ಮಂಡಿಸಿದ ಕಂದಾಯ ದಾಖಲೆಗಳನ್ನು ಕೋರ್ಟ್ ತಿರಸ್ಕರಿಸಿದೆ. ಪ್ರತಿವಾದಿಗಳಾದ ಅಯನ ಚಾರಿಟೆಬಲ್‌ ಟ್ರಸ್ಟ್‌ ಮತ್ತು ಹ್ಯಾರಿಸನ್‌ ಮಲಯಾಳಂ ಕಂಪನಿಯ ವಾದಗಳನ್ನು ನ್ಯಾಯಾಲಯ ಅಂಗೀಕರಿಸಿದೆ.
ಎರುಮೇಲಿ ಸೌತ್​ ಹಾಗೂ ಮಣಿಮಲ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಚೆರುವಳ್ಳಿ ಎಸ್ಟೇಟ್​ನಲ್ಲಿರುವ 2263 ಎಕರೆ ಜಾಗದಲ್ಲಿ ಏರ್​ಪೋರ್ಟ್ ನಿರ್ಮಿಸುವುದು ಕೇರಳ ಸರ್ಕಾರದ ಉದ್ದೇಶವಾಗಿತ್ತು. ಆದರೆ ಜಾಗದ ಮಾಲೀಕತ್ವದ ವಿಚಾರದಲ್ಲಿ ಈಸ್ಟರ್​ ಚರ್ಚ್​ ಅಡಿಯಲ್ಲಿ ಬರುವ ಅಯಾನಾ ಚಾರಿಟೇಬಲ್​ ಟ್ರಸ್ಟ್​ ಹಾಗೂ ಕೇರಳ ಸರ್ಕಾರದ ನಡುವೆ ನ್ಯಾಯಾಂಗ ಹೋರಾಟ ನಡೆಯುತ್ತಿತ್ತು. ಕೇರಳ ಸರ್ಕಾರ ಈ ಜಾಗ ತನಗೆ ಸೇರಿದ್ದು ಎಂದರೆ ಅಯಾನಾ ಚಾರಿಟೇಬಲ್​ ಟ್ರಸ್ಟ್​ 2005ರಲ್ಲಿ ಈ ಜಾಗವನ್ನು ಹ್ಯಾರಿಸನ್​ ಮಲಯಾಳಂ ಕಂಪನಿಯಿಂದ ಖರೀದಿಸಿರುವುದಾಗಿ ವಾದಕ್ಕೆ ಇಳಿದಿತ್ತು.
ವಿದೇಶಿ ಕಂಪನಿಗಳು ಮತ್ತು ವ್ಯಕ್ತಿಗಳಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂಬ ಎಂಜಿ ರಾಜಮಾಣಿಕ್ಯಂ ಆಯೋಗದ ವರದಿಯ ವಿರುದ್ಧ ಹ್ಯಾರಿಸನ್‌ ಮಲಯಾಳಂ ಕಂಪನಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ಭೂಮಿ ಮಾಲೀಕತ್ವ ಸಾಬೀತುಪಡಿಸಲು ಸಿವಿಲ್‌ ನ್ಯಾಯಾಲಯ ಸಂಪರ್ಕಿಸುವಂತೆ ಹೈಕೋರ್ಟ್‌ ಕೇರಳ ಸರ್ಕಾರಕ್ಕೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ 2019ರಲ್ಲಿ ಸರಕಾರ ಪಾಲಾ ಸಬ್‌ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

ಇದನ್ನೂ ಓದಿ: ಪರ್ಯಾಯ ಮೆರವಣಿಗೆಯಲ್ಲಿ ಕೇಸರಿ ಧ್ವಜ ಹಾರಾಟ ವಿವಾದ : ಕಾಂಗ್ರೆಸ್​ಗೆ ಶಾಸಕ ವಿ.ಸುನೀಲ್​ ಕುಮಾರ್​ ಟಾಂಗ್

ಇದೀಗ ಈ ಹೋರಾಟದಲ್ಲಿ ಅಯಾನಾ ಚಾರಿಟೇಬಲ್​ ಟ್ರಸ್ಟ್​ ಗೆಲುವು ಸಾಧಿಸಿದ್ದು ಕೇರಳ ಸರ್ಕಾರದ ಮುಂದಿನ ನಡೆ ಏನು ಎಂಬ ಕುತೂಹಲ ಮನೆ ಮಾಡಿದೆ.

Exit mobile version