ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್​ : ಇಂದಿನಿಂದ ಮಧ್ಯರಾತ್ರಿಯವರೆಗೂ ಟಿಕೆಟ್​ ಬುಕ್ಕಿಂಗ್​ಗೆ ಅವಕಾಶ

ರೈಲ್ವೆ ಇಲಾಖೆಯಲ್ಲಿ ದಿನಕ್ಕೊಂದು ಸುಧಾರಣೆಗಳು ಬರುತ್ತಲೇ ಇದ್ದು ದಿನಕಳೆದಂತೆ ಭಾರತೀಯ ರೈಲ್ವೆ ಇಲಾಖೆ ಸೇವೆಯು ಹೆಚ್ಚೆಚ್ಚು ಜನಸ್ನೇಹಿಯಾಗುತ್ತಿದೆ. ಈ ಮಾತಿಗೆ ಮತ್ತೊಂದು ಪುರಾವೆ ಎಂಬಂತೆ ಆಧಾರ್ ದೃಢೀಕೃತ ಬಳಕೆದಾರರಿಗೆ ಟಿಕೆಟ್​ ಬುಕ್ಕಿಂಗ್​ ಮಾಡುವ ಅವಧಿಯನ್ನು ಮಧ್ಯರಾತ್ರಿಯರವರೆಗೂ ವಿಸ್ತರಿಸಲಾಗಿದೆ. ಇಂದಿನಿಂದ ಗ್ರಾಹಕರು ಮಧ್ಯರಾತ್ರಿಯವರೆಗೂ ತಮ್ಮ ರೈಲ್ವೆ ಟಿಕೆಟ್​ ಬುಕ್ಕಿಂಗ್​ ಮಾಡುವ ಅವಕಾಶ ಪಡೆಯಲಿದ್ದಾರೆ.
ಐಆರ್​ಸಿಟಿಸಿ ಹಾಗೂ ರೈಲ್ವೆ ಆ್ಯಪ್​ ಮೂಲಕ ಟಿಕೆಟ್​ ಬುಕ್ಕಿಂಗ್​ ಮಾಡುವವರಿಗೆ ಮಾತ್ರ ಈ ಅವಕಾಶ ಸಿಗಲಿದೆ. ಈ ಮೊದಲು ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆವರೆಗೆ ಮಾತ್ರ ಟಿಕೆಟ್​ ಬುಕ್ಕಿಂಗ್​ ಅವಕಾಶ ನೀಡಲಾಗಿತ್ತು. ಜನವರಿ 5ರ ಬಳಿಕ ಈ ಸೇವೆಯನ್ನು ಬೆಳಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ವಿಸ್ತರಿಸಲಾಗಿತ್ತು. ಇದೀಗ ಈ ಸಮಯವನ್ನು ಮಧ್ಯರಾತ್ರಿಯವರೆಗೂ ವಿಸ್ತರಣೆ ಮಾಡಲಾಗಿದೆ.

ಇದನ್ನೂ ಓದಿ: ಕರಾವಳಿ ಭಾಗದ ಜನತೆಗೆ ಗುಡ್​ನ್ಯೂಸ್​.. ಶೀಘ್ರದಲ್ಲೇ ವಂದೇ ಭಾರತ್​ ಎಕ್ಸ್​ಪ್ರೆಸ್​

ದಲ್ಲಾಳಿಗಳು ನಕಲಿ ಖಾತೆಗಳ ಮೂಲಕ ಟಿಕೆಟ್​ ಬುಕ್​ ಮಾಡುವದನ್ನು ತಪ್ಪಿಸಲು ಈ ಕ್ರಮ ಕೈಗೊಂಡಿರುವುದಾಗಿ ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ. ಇನ್ಮುಂದೆ ರೈಲ್ವೆ ಪ್ರಯಾಣಿಕರು ದಲ್ಲಾಳಿಗಳ ಕಾಟವಿಲ್ಲದೇ ಸಂಪೂರ್ಣ ದಿನ ರೈಲ್ವೆ ಟಿಕೆಟ್​ ಬುಕ್ಕಿಂಗ್​ ಅವಕಾಶ ಪಡೆಯಬೇಕು ಎಂಬ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಇಲಾಖೆ ಈ ಮಹತ್ವದ ಕ್ರಮ ಕೈಗೊಂಡಿದೆ.

Exit mobile version