ಆಟೋ, ಕ್ಯಾಬ್ ಚಾಲಕರಿಗೆ ಕೇಂದ್ರ ಸರ್ಕಾರದಿಂದ ಬಂಪರ್​ : ಸಿಎನ್​ಜಿ ದರ ಇಳಿಕೆ

ಹೊಸ ವರ್ಷದ ಆರಂಭದಲ್ಲೇ ಆಟೋ ಹಾಗೂ ಕ್ಯಾಬ್​ ಚಾಲಕರಿಗೆ ಕೇಂದ್ರ ಸರ್ಕಾರ ಬಂಪರ್​ ಗಿಫ್ಟ್​ ನೀಡಿದೆ. ಜನವರಿ 2026ರಿಂದ ಅನ್ವಯವಾಗುವಂತೆ ಸಿಎನ್‌ಜಿ ಮತ್ತು ಪೈಪ್ಡ್ ನೈಸರ್ಗಿಕ ಅನಿಲದ ಬೆಲೆ ಇಳಿಕೆ ಮಾಡಲಾಗಿದ್ದು ಆಟೋ ಹಾಗೂ ಕ್ಯಾಬ್​ ಚಾಲಕರಿಗೆ ಬಿಗ್​ ರಿಲೀಫ್​ ಸಿಕ್ಕಿದಂತಾಗಿದೆ.
2025ರ ಅಂತ್ಯದಲ್ಲಿ ಇಂದ್ರಪ್ರಸ್ಥ ಗ್ಯಾಸ್​ ಲಿಮಿಟೆಡ್​ ಸಿಎನ್​​ಜಿ ದರ ಕಡಿಮೆ ಮಾಡಿತ್ತು. ಈ ಬೆನ್ನಲ್ಲೇ ಇದೀಗ ಇದೀಗ ಕೇಂದ್ರ ಸರ್ಕಾರಿ ಒಡೆತನದ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಕೂಡ ಪಿಎನ್​ಜಿ ದರ ಇಳಿಕೆ ಮಾಡಿದೆ. ಇದರಿಂದ ಮನೆ ಅಡುಗೆ ಅನಿಲ ಬಳಸುವ ಗ್ರಾಹಕರಿಗೂ, ವಾಣಿಜ್ಯವಾಗಿ ಸಿಎನ್‌ಜಿ ಬಳಸುವ ಆಟೋ ಮತ್ತು ಕ್ಯಾಬ್ ಚಾಲಕರಿಗೂ ನೇರ ಲಾಭವಾಗಲಿದೆ.
GAIL ಗ್ಯಾಸ್ ಲಿಮಿಟೆಡ್ ಪ್ರಕಟಣೆಯ ಪ್ರಕಾರ, ದೇಶೀಯ ಪಿಎನ್‌ಜಿ ಬೆಲೆಯನ್ನು ಪ್ರತಿ ಪ್ರಮಾಣಿತ ಘನ ಮೀಟರ್‌ಗೆ 1 ರೂಪಾಯಿ ಹಾಗೂ ಸಿಎನ್‌ಜಿ ಬೆಲೆಯನ್ನು ಪ್ರತಿ ಕೆಜಿಗೆ 1 ರೂಪಾಯಿ ಕಡಿಮೆ ಮಾಡಲಾಗಿದೆ. ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ, ಉತ್ತರಾಖಂಡ, ಜಾರ್ಖಂಡ್, ಛತ್ತೀಸ್‌ಗಢ, ರಾಜಸ್ಥಾನ ಮತ್ತು ಒಡಿಶಾ ಸೇರಿದಂತೆ ಗೈಲ್ ಗ್ಯಾಸ್ ಕಾರ್ಯನಿರ್ವಹಿಸುವ ಎಲ್ಲಾ ಅಧಿಕೃತ ಪ್ರದೇಶಗಳಲ್ಲಿಯೂ ಜಾರಿಗೆ ಬಂದಿದೆ.

ಇದನ್ನೂ ಓದಿ: PM Kisan: ಪಿಎಂ ಕಿಸಾನ್‌ ಹಣ ಜಮಾ ಆಗುವ ದಿನಾಂಕ ಘೋಷಣೆ

ಈ ರೀತಿಯ ಬೆಲೆ ಇಳಿಕೆಯಿಂದಾಗಿ ಭವಿಷ್ಯದಲ್ಲಿ ಸಿಎನ್​ಜಿ ಮತ್ತು ಪಿಎನ್​ಜಿ ಬಳಕೆದಾರರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ ಕಂಡು ಬರುವ ನಿರೀಕ್ಷೆಯಿದೆ. ಇದರಿಂದ ಪರಿಸರ ಸ್ನೇಹಿ ಇಂಧನ ಬಳಕೆದಾರರ ಸಂಖ್ಯೆಯಲ್ಲಿ ಏರಿಕೆ ಕಂಡು ಬರಲಿದೆ. ಇದು ಗ್ರಾಹಕರ ಮೇಲೆ ಹಣದ ಒತ್ತಡ ಕಡಿಮೆ ಮಾಡುವ ಜೊತೆಯಲ್ಲಿ ಪರಿಸರದಲ್ಲಿ ಮಾಲಿನ್ಯ ಒತ್ತಡವನ್ನು ಕಡಿಮೆ ಮಾಡಲಿದೆ.

Exit mobile version