ಹೋಟೆಲ್ ಗ್ರಾಹಕರಿಗೆ ಬಿಗ್ ಶಾಕ್ : ತಿಂಡಿ-ತಿನಿಸುಗಳ ದರ ಭಾರೀ ಏರಿಕೆಗೆ ಸಜ್ಜು!

ಮಧ್ಯಪ್ರಾಚ್ಯದಲ್ಲಿ ಸಂಭವಿಸಿದ ಯುದ್ಧದ ಹಿನ್ನೆಲೆಯಲ್ಲಿ ದಿನಕ್ಕೊಂದು ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಕಂಡುಬರುತ್ತಲೇ ಇದೆ. ಹಾರ್ಮೋಜ್​ ಜಲಸಂಧಿಯಲ್ಲಿ ಉಂಟಾದ ಸಮಸ್ಯೆಯಿಂದಾಗಿ ಹೋಟೆಲ್​ ಉದ್ಯಮಿಗಳು ಯುದ್ಧ ಆರಂಭ ಕಾಲದಿಂದಲೂ ಕಮರ್ಷಿಯಲ್​ ಸಿಲಿಂಡರ್​ಗಳ ಪೂರೈಕೆಯಲ್ಲಿ ವ್ಯತ್ಯಯ ಅನುಭವಿಸುತ್ತಲೇ ಇದ್ದಾರೆ .

ಮಧ್ಯಪ್ರಾಚ್ಯದಲ್ಲಿ ಸಂಭವಿಸಿದ ಯುದ್ಧದ ಹಿನ್ನೆಲೆಯಲ್ಲಿ ದಿನಕ್ಕೊಂದು ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಕಂಡುಬರುತ್ತಲೇ ಇದೆ. ಹಾರ್ಮೋಜ್​ ಜಲಸಂಧಿಯಲ್ಲಿ ಉಂಟಾದ ಸಮಸ್ಯೆಯಿಂದಾಗಿ ಹೋಟೆಲ್​ ಉದ್ಯಮಿಗಳು ಯುದ್ಧ ಆರಂಭ ಕಾಲದಿಂದಲೂ ಕಮರ್ಷಿಯಲ್​ ಸಿಲಿಂಡರ್​ಗಳ ಪೂರೈಕೆಯಲ್ಲಿ ವ್ಯತ್ಯಯ ಅನುಭವಿಸುತ್ತಲೇ ಇದ್ದಾರೆ . ಅಲ್ಲದೇ ವಾಣಿಜ್ಯ ಸಿಲಿಂಡರ್​ಗಳ ಬೆಲೆಯಲ್ಲಿಯೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿರುವುದು ಹೋಟೆಲ್​ ಉದ್ಯಮವನ್ನು ಮತಷ್ಟು ಸಂಕಷ್ಟಕ್ಕೆ ದೂಡಿದೆ.

ಸಿಲಿಂಡರ್​ಗಳ ದರ ಏರಿಕೆಯಿಂದಾಗಿ ಹೋಟೆಲ್​ಗಳ ನಿರ್ವಹಣಾ ವೆಚ್ಚದಲ್ಲಿ ಬರೋಬ್ಬರಿ 60 ಪರ್ಸೆಂಟ್​ ಏರಿಕೆ ಕಂಡುಬಂದಿದ್ದು, ಹೀಗಾಗಿ ಶೀಘ್ರದಲ್ಲಿಯೇ ಹೋಟೆಲ್​ ತಿಂಡಿ – ತಿನಿಸುಗಳ ಬೆಲೆಯಲ್ಲಿ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಹೋಟೆಲ್​ ಮಾಲೀಕರ ಸಂಘದ ಅಧ್ಯಕ್ಷರು ಅಸಮಾಧಾನ ಹೊರಹಾಕಿದ್ದಾರೆ.

ಉನ್ನತ ಮೂಲಗಳಿಂದ ದೊರೆತ ಮಾಹಿತಿಯ ಪ್ರಕಾರ, 60 ರೂಪಾಯಿ ಇದ್ದ ತಿಂಡಿ – ತಿನಿಸುಗಳ ಬೆಲೆ 90 ರೂಪಾಯಿ ಆಗಲಿದೆ ಎನ್ನಲಾಗಿದೆ. 90 ರೂಪಾಯಿ ಇದ್ದ ಮಧ್ಯಾಹ್ನದ ಊಟದ ಬೆಲೆಯು 120 ರೂಪಾಯಿಗಳವರೆಗೆ ತಲುಪಬಹುದು ಎಂದು ಹೇಳಲಾಗ್ತಿದೆ.

Also Read: ಮತ್ತೆ ಏರಿದ ಪೆಟ್ರೋಲ್-ಡೀಸೆಲ್ ದರ: 10 ದಿನದಲ್ಲಿ 4ನೇ ಬಾರಿ ಬೆಲೆ ಶಾಕ್ 

ಸಣ್ಣ ಹೋಟೆಲ್​ಗಳಲ್ಲೇ ತಿಂಗಳಿಗೆ ವಾಣಿಜ್ಯ ಸಿಲಿಂಡರ್​ಗಳಿಗೆ 23 ಸಾವಿರ ರೂಪಾಯಿ ಪಾವತಿಸಬೇಕಾಗಿ ಬರುತ್ತಿದೆ. ಮಾತ್ರವಲ್ಲದೇ ಪೆಟ್ರೋಲ್​, ಡೀಸೆಲ್​ಗಳ ದರ ಏರಿಕೆಯಿಂದಾಗಿ ನಿರ್ವಹಣಾ ವೆಚ್ಚ ಕೂಡ ಅಧಿಕವಾಗಿದೆ. ಇತ್ತ ತರಕಾರಿ,ಅಡುಗೆ ಎಣ್ಣೆ , ಹಾಲಿನ ದರಗಳೂ ಗಗನಕ್ಕೇರಿದ್ದು, ಇಂತಹ ಪರಿಸ್ಥಿತಿಯಲ್ಲಿ ಬೆಲೆ ಏರಿಕೆ ಮಾಡದೇ ನಮಗೆ ಬೇರೆ ವಿಧಿಯಿಲ್ಲ ಎಂದು ಹೋಟೆಲ್​ ಮಾಲೀಕರ ಸಂಘ ಹೇಳಿದೆ.

Big shock for hotel customers Prices of snacks and meals set to increase drastically

Exit mobile version