ಬದುಕಿದ್ದಾಗಲೇ ಸತ್ತಂತೆ ನಟಿಸಿದ ವೃದ್ಧ : ಕಾರಣ ಕೇಳಿದ್ರೆ ನಗು ಬರೋದು ಗ್ಯಾರಂಟಿ

Old man death: ಮನಸ್ಸು ಮಾಡಿದರೆ ನಾವು ಏನನ್ನೂ ಸಾಧಿಸಬಹುದು. ಆದರೆ ನಾವು ಸತ್ತ ಬಳಿಕ ನಮ್ಮ ಸುತ್ತಮುತ್ತ ಏನಾಗುತ್ತೆ ಎಂಬುದನ್ನು ತಿಳಿದುಕೊಳ್ಳಲು ಮಾತ್ರ ಸಾಧ್ಯವಿಲ್ಲ. ಹೀಗಾಗಿ ಬಿಹಾರದಲ್ಲಿ ವ್ಯಕ್ತಿಯೊಬ್ಬರು ತಾನು ಸತ್ತ ಸುದ್ದಿ ಕೇಳಿದ ಬಳಿಕ ಎಷ್ಟು ಮಂದಿ ದುಃಖಿಸುತ್ತಾರೆ ? ನಾನು ಕುಟುಂಬಸ್ಥರಿಂದ ಎಷ್ಟು ಪ್ರೀತಿಯಲು ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳುವ ಉದ್ದೇಶದಿಂದ ಬದುಕಿದ್ದಾಗಲೇ ತನ್ನ ಅಂತ್ಯಕ್ರಿಯೆ ನಡೆಸಿಕೊಂಡಿದ್ದಾರೆ.

ಶವದಂತೆ ನನ್ನನ್ನು ತಯಾರು ಮಾಡಿ ಸ್ಮಶಾನಕ್ಕೆ ಕೊಂಡೊಯ್ಯಬೇಕೆಂದು ಕೆಲವು ಜನರಲ್ಲಿ ಕೇಳಿಕೊಂಡಿದ್ದರು ಎನ್ನಲಾಗಿದೆ. ಈ ಘಟನೆ ವಿಚಿತ್ರ ಎನಿಸಿದರೂ ಸಹ ಗಯಾ ಜಿಲ್ಲೆಯ ಗುರಾರು ಬ್ಲಾಕ್‌ನ ಕೊಂಚಿ ಗ್ರಾಮದಲ್ಲಿ ನಿಜಕ್ಕೂ ಇದು ಸಂಭವಿಸಿದೆ.

ವಾಯುಪಡೆಯ ಮಾಜಿ ಸೈನಿಕರಾದ 74 ವರ್ಷದ ಮೋಹನ್​ ಲಾಲ್​ ಜೀವಂತ ಇರುವಾಗಲೇ ತಮ್ಮ ಅಂತ್ಯಕ್ರಿಯೆ ಆಯೋಜಿಸಿ ಎಲ್ಲರಿಗೂ ಆಘಾತ ತರಿಸಿದ್ದಾರೆ. ಶವದಂತೆ ತನ್ನನ್ನು ತಾನು ಅಲಂಕರಿಸಿಕೊಂಡು ಹೂವಿನ ಮಾಲೆಯನ್ನು ಮೈಮೇಲೆ ಹಾಕಿಕೊಂಡು, ಬಿಳಿ ಬಟ್ಟೆ ಹೊದ್ದು ಸ್ಮಶಾನಕ್ಕೆ ಕೊಂಡೊಯ್ಯುವಂತೆ ಕೇಳಿದ್ದಾರೆ.

Also Read: ಅಪ್ರಾಪ್ತರ ಮಕ್ಕಳಿಗೆ ವಿಷವುಣಿಸಿ ನೇಣಿಗೆ ಶರಣಾದ ತಂದೆ

ಮೋಹನ್​ ಲಾಲ್​ ಮೃತಪಟ್ಟಿದ್ದಾರೆ ಎಂಬ ವಿಚಾರ ಗ್ರಾಮಾದ್ಯಂತ ಕಾಡ್ಗಿಚ್ಚಿನಂತೆ ಹರಡಿದೆ. ನೂರಾರು ಗ್ರಾಮಸ್ಥರು ಈ ವಿಶಿಷ್ಠ ಶವ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಏಕಾಏಕಿ ಸ್ಮಶಾನದಿಂದ ಮೋಹನ್​ ಲಾಲ್​ ಎದ್ದು ಕುಳಿತಿದ್ದು, ಶವಯಾತ್ರೆಯಲ್ಲಿ ಭಾಗಿಯಾದವರು ಆಘಾತಕ್ಕೆ ಒಳಗಾಗಿದ್ದಾರೆ. ಬಳಿಕ ಅವರ ಬದಲಾಗಿ ಸಾಂಕೇತಿಕ ಪ್ರತಿಕೃತಿಯನ್ನು ಸುಡಲಾಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಮೋಹನ್​ಲಾಲ್​, ನಾನು ನನ್ನ ಅಂತ್ಯಕ್ರಿಯೆಯಲ್ಲಿ ಯಾರೆಲ್ಲ ಭಾಗಿಯಾಗುತ್ತಾರೆ ಎಂಬುದನ್ನು ಬದುಕಿದ್ದಾಗಲೇ ತಿಳಿದುಕೊಳ್ಳಲು ಬಯಸಿದ್ದೆ. ಮರಣ ಹೊಂದಿದ ಬಳಿಕ ಶವವನ್ನು ಸ್ಮಶಾನಕ್ಕೆ ಕೊಂಡೊಯ್ಯುತ್ತಾರೆ ಎಂಬ ವಿಚಾರ ನನಗೂ ತಿಳಿಸಿದೆ.

ಆದರೆ ನಾನು ನನ್ನ ಶವಯಾತ್ರೆಯನ್ನು ಸ್ವತಃ ಕಣ್ತುಂಬಿಕೊಳ್ಳಬೇಕು ಎಂಬ ಇರಾದೆಯನ್ನು ಹೊಂದಿದ್ದೆ. ನನ್ನ ಮರಣದ ಬಳಿಕ ಜನರು ನನಗೆ ಎಷ್ಟು ಪ್ರೀತಿ ಹಾಗೂ ಗೌರವ ಕೊಡುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನನಗೆ ಇತ್ತು ಎಂದು ಹೇಳಿದ್ದಾರೆ.

Also Read: ಸುಪ್ರೀಂ ಕೋರ್ಟ್‌ ಬೆನ್ನಲ್ಲೇ, ಗುಜರಾತ್‌ನಲ್ಲಿ ನ್ಯಾಯಮೂರ್ತಿಗಳ ಮೇಲೆ ಚಪ್ಪಲಿ ಎಸೆತ

ಮೋಹನ್​ಲಾಲ್​ ರ ಈ ನಡೆಯನ್ನು ಗ್ರಾಮಸ್ಥರು ಸ್ವಾಗತಿಸಿದ್ದಾರೆ. ಅಲ್ಲದೇ ಮಳೆಗಾಲದಲ್ಲಿ ಅಂತ್ಯಕ್ರಿಯೆಗಳನ್ನು ನಡೆಸಲು ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಮೋಹನ್​ಲಾಲ್​ ಕೆಲವು ದಿನಗಳ ಹಿಂದೆಯಷ್ಟೇ ತಮ್ಮ ಸ್ವಂತ ಖರ್ಚಿನಲ್ಲಿ ಗ್ರಾಮಕ್ಕೆ ಸುಸಜ್ಜಿತ ಸ್ಮಶಾನ ನಿರ್ಮಿಸಿಕೊಟ್ಟಿದ್ದರು.

ಮೋಹನ್ ಲಾಲ್ ಅವರ ಪತ್ನಿ ಜೀವನ್ ಜ್ಯೋತಿ 14 ವರ್ಷಗಳ ಹಿಂದೆ ನಿಧನರಾದರು. ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳು ಇದ್ದಾರೆ.

Exit mobile version