ಏನಿದು ಬ್ರೇನ್‌ ಈಟಿಂಗ್‌ ಅಮೀಬಾ? ರೋಗಲಕ್ಷಣ, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು?

Brain Eating Amoeba: ಕೇರಳ ಸದ್ಯ ಗಂಭೀರವಾದ ಸಾರ್ವಜನಿಕ ಆರೋಗ್ಯ ಸವಾಲನ್ನು ಎದುರಿಸುತ್ತಿದೆ. ಅದೇನೆಂದರೆ ಈ ವರ್ಷ ಕೇರಳದಲ್ಲಿ 61 ಬ್ರೇನ್‌ ಈಟಿಂಗ್‌ ಅಮೀಬಾ ಪ್ರಕರಣಗಳು ದೃಢಪಟ್ಟಿವೆ ಮತ್ತು 19 ಜನರ ಸಾವು ದಾಖಲಾಗಿದೆ.

ಇವುಗಳಲ್ಲಿ ಹಲವು ಸಾವುಗಳು ಕಳೆದ ಕೆಲವು ವಾರಗಳಲ್ಲಿ ವರದಿಯಾಗಿದೆ. ನೇಗ್ಲೇರಿಯಾ ಫೌಲೆರಿಯಿಂದ ಉಂಟಾಗುವ ಈ ಸೋಂಕನ್ನು ಪ್ರೈಮರಿ ಅಮೀಬಿಕ್‌ ಮೆನಿಂಗೊಎನ್ಸೆಫಾಲಿಟಿಸ್ (PAM) ಎಂದು ಕೆರೆಯುತ್ತಾರೆ.

ಮರಣ ಪ್ರಮಾಣ ಹೆಚ್ಚಿರುವ ಈ ಸೋಂಕನ್ನು ಸಾಮಾನ್ಯವಾಗಿ ‘ಬ್ರೇನ್‌ ಈಟಿಂಗ್‌ ಅಮೀಬಾ’ ಎಂದು ಕರೆಯುತ್ತಾರೆ. ಆರಂಭದಲ್ಲಿ ಕೇರಳದ ಕೋಝಿಕ್ಕೋಡ್ ಮತ್ತು ಮಲಪ್ಪುರಂನಂತಹ ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿದ್ದ ಈ ಸೋಂಕು ಈಗ ರಾಜ್ಯಾದ್ಯಂತ ಕಾಣಿಸಿಕೊಳ್ಳುತ್ತಿದೆ.

ಮೂರು ತಿಂಗಳ ಶಿಶುವಿನಿಂದ ಹಿಡಿದು 91 ವರ್ಷದ ವೃದ್ಧರವರೆಗೆ ರೋಗಿಗಳು ಕಂಡುಬರುತ್ತಿದ್ದಾರೆ. ಹಾಗಾದರೆ ಕೇರಳದಲ್ಲಿ ಆತಂಕ ಸೃಷ್ಟಿಸಿರುವ ಬ್ರೇನ್‌ ಈಟಿಂಗ್‌ ಅಮೀಬಾ ಸೋಂಕಿನ ಲಕ್ಷಣಗಳೇನು? ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು ಎಂದು ತಿಳಿಯೋಣ.

ಏನಿದು ಬ್ರೇನ್‌ ಈಟಿಂಗ್‌ ಅಮೀಬಾ?

ವೈಜ್ಞಾನಿಕವಾಗಿ ನೇಗ್ಲೇರಿಯಾ ಫೌಲೆರಿ ಎಂದು ಕರೆಯಲ್ಪಡುವ ತೀವ್ರವಾಗಿ ಮಿದುಳಿಗೆ ಹಾನಿಯನ್ನುಂಟುಮಾಡುವ ಅತ್ಯಂತ ಮಾರಕ ಸೋಂಕು ಇದಾಗಿದೆ. ಇದನ್ನು ಬ್ರೇನ್‌ ಈಟಿಂಗ್ ಅಮೀಬಾ ಎಂದು ಸಾಮನ್ಯವಾಗಿ ಕರೆಯಲಾಗುತ್ತದೆ. ಇದು ಬೆಚ್ಚಗಿನ ನೀರು, ಸಿಹಿನೀರು ಮತ್ತು ಮಣ್ಣಿನಲ್ಲಿ ಕಂಡು ಬರುತ್ತದೆ. ಅಮೀಬಾದಿಂದ ಕುಲಷಿತಗೊಂಡ ನೀರು ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿದಾಗ ವ್ಯಕ್ತಿಯು ಸೋಂಕಿಗೆ ಒಳಪಡುತ್ತಾನೆ. ಮೂಗಿನ ಲೋಳೆಪೊರೆಯನ್ನು ದಾಟಿ ನರಗಳ ಮೂಲಕ ಮೆದುಳನ್ನು ತಲುಪಿ ಮೆದುಳಿನ ಅಂಗಾಂಶಗಳನ್ನು ಹಾನಿಗೊಳಿಸಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ: Health Tips: ಖಾಲಿ ಹೊಟ್ಟೆಯಲ್ಲಿ ಕಡಲೆ ಮತ್ತು ಒಣದ್ರಾಕ್ಷಿ ತಿನ್ನುವುದರಿಂದ ಆಗುವ ಪ್ರಯೋಜನಗಳೇನು?

ರೋಗಲಕ್ಷಣಗಳೇನು?

ಸಾಮಾನ್ಯವಾಗಿ ಸೋಂಕು ತಗುಲಿದ 2 ರಿಂದ 15 ದಿನಗಳ ನಂತರ ರೋಗ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಆರಂಭಿಕ ಹಂತದಲ್ಲಿ ಜ್ವರ ಅಥವಾ ಇತರ ಸಾಮಾನ್ಯ ಖಾಯಿಲೆಗಳು ಕಂಡುಬರುತ್ತವೆ. ನಂತರ ದಿನಗಳಲ್ಲಿ ರೋಗ ಲಕ್ಷಣ ಉಲ್ಭಣಗೊಳ್ಳುತ್ತದೆ. ಜ್ವರ, ವಾಕರಿಕೆ, ವಾಂತಿ, ಕುತ್ತಿಗೆ ನೋವು, ಗೊಂದಲ, ಏಕಾಗ್ರತೆಯ ಕೊರತೆ, ನಡುಕ, ಬೆಳಕನ್ನು ನೋಡಲು ಸಾಧ್ಯವಾಗದೇ ಇರುವುದು, ಭ್ರಮೆ ಮತ್ತು ಕೋಮಾಗೆ ಜಾರುವುದು. ಈ ರೋಗವು ಬಹಳ ವೇಗವಾಗಿ ಹರಡುವುದರಿಂದ, ಇದರ ಮರಣ ಪ್ರಮಾಣವು ಶೇ. 97 ರಷ್ಟಿದೆ.

ಯಾರಿಗೆ ಹೆಚ್ಚು ಅಪಾಯಕಾರಿ?

ಈ ರೋಗ ನೇರವಾಗಿ ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲವಾದರೂ, ಅಮೀಬಾದಿಂದ ಕಲುಷಿತಗೊಂಡ ನೀರಿನಲ್ಲಿ ಈಜುವವರು, ಡೈವಿಂಗ್ ಮಾಡುವವರು ಅಥವಾ ಸ್ನಾನ ಮಾಡುವವರು ಸೋಂಕಿನ ಅಪಾಯವನ್ನು ಹೆಚ್ಚು ಎದುರಿಸುತ್ತಾರೆ. ಅಪರೂಪದ ಈ ರೋಗವು ಆರೋಗ್ಯವಂತ ಮಕ್ಕಳು, ಹದಿಹರೆಯದವರು ಮತ್ತು ವಯಸ್ಕರರಲ್ಲಿ ಕಂಡುಬರುತ್ತದೆ.

ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು?

ಇದನ್ನೂ ಓದಿ: Health Tips: ಹಸಿ ಮೊಟ್ಟೆ ಮತ್ತು ಬೇಯಿಸಿದ ಮೊಟ್ಟೆಯಲ್ಲಿ ಯಾವುದು ಸುರಕ್ಷಿತ ಮತ್ತು ಹೆಚ್ಚು ಪ್ರೋಟೀನ್ ನೀಡುತ್ತದೆ?

(what is brain eating amoeba how does it cause and what precautions should be taken)

Exit mobile version