ಕೇವಲ 100 ರೂಪಾಯಿಗಳಲ್ಲಿ ಸುಲಭವಾಗಿ ಸಿಗಬಲ್ಲ ಪ್ರೊಟೀನ್​ ಮೂಲಗಳ ಬಗ್ಗೆ ಇಲ್ಲಿದೆ ಮಾಹಿತಿ

Top Protein Sources : ಶ್ರಮದಾಯಕ ಜೀವನ ಈಗ ಎಲ್ಲರದ್ದಾಗಿ ಉಳಿದಿಲ್ಲ. ದೈಹಿಕ ಕೆಲಸಗಳಿಗಿಂತ ಮಾನಸಿಕ ಒತ್ತಡವಿರುವ ಕಾರ್ಯಗಳೇ ಹೆಚ್ಚಾಗಿವೆ. ಇಂತಹ ಸಂದರ್ಭದಲ್ಲಿ ತೂಕ ನಿರ್ವಹಣೆ ಮಾಡಲು ನಾವು ತುಸು ಹೆಚ್ಚೇ ಒತ್ತು ನೀಡಬೇಕಾಗುತ್ತದೆ.

ತೂಕ ನಿರ್ವಹಣೆ ಮಾಡಲು ಪ್ರೊಟೀನ್​ ಸೇವನೆ ಜಾಸ್ತಿ ಇರಬೇಕು. ಹೀಗಾಗಿ ಅನೇಕರು ಕೈಗೆಟುವ ದರದಲ್ಲಿ ಯಾವುದಾದರೂ ಪ್ರೊಟೀನ್​ ಮೂಲಗಳು ಸಿಗಬಹುದೇ ? ಎಂಬ ಹುಡುಕಾಟದಲ್ಲಿರುತ್ತಾರೆ. ನೀವು ಕೂಡ ಇದೇ ಮಾದರಿಯ ಹುಡುಕಾಟದಲ್ಲಿದ್ದರೆ ಮಾರುಕಟ್ಟೆಯಲ್ಲಿ ನೂರು ರೂಪಾಯಿಗೂ ಕಡಿಮೆ ದರದಲ್ಲಿ ಸಿಗಬಲ್ಲ ಜನಸ್ನೇಹಿ ಪ್ರೊಟೀನ್​ ಮೂಲಗಳ ಬಗ್ಗೆ ಇಲ್ಲಿದೆ ಮಾಹಿತಿ.

100 ರೂಪಾಯಿಗೂ ಕಡಿಮೆ ದರದಲ್ಲಿ ಸಿಗುವ ಪ್ರೊಟೀನ್​ ಮೂಲಗಳು :

ಮೊಟ್ಟೆಗಳು : ಮೊಟ್ಟೆಗಳು ಪ್ರೋಟೀನ್‌ನ ಸಂಪೂರ್ಣ ಮೂಲವಾಗಿದ್ದು, ಲಭ್ಯವಿರುವ ಅತ್ಯಂತ ಒಳ್ಳೆ ಆಯ್ಕೆಗಳಲ್ಲಿ ಒಂದಾಗಿದೆ. ನೀವು ಅವುಗಳನ್ನು ಬೇಯಿಸಬಹುದು, ಸ್ಕ್ರಾಂಬಲ್ ಮಾಡಬಹುದು ಅಥವಾ ಕರಿಯಲ್ಲಿ ಹಾಕಬಹುದು. ಮೊಟ್ಟೆಗಳು ಯಾವುದೇ ವಿಧದಲ್ಲಿ ತಿಂದರೂ ಆಹ್ಲಾದಕರ ಎನಿಸುತ್ತದೆ.

.ಪನ್ನೀರು : ಇದು ಪ್ರೋಟೀನ್‌ನ ಉತ್ತಮ ಸಸ್ಯಾಹಾರಿ ಮೂಲವಾಗಿದೆ. ಪನ್ನೀರ್​ ಭಕ್ಷ್ಯಗಳನ್ನು ತಯಾರಿಸಲು ನೀವು ಕೇವಲ 100 ಗ್ರಾಂ ಪನ್ನೀರು ಖರೀದಿ ಮಾಡಿದರೆ ಸಾಕು. ಅದರಲ್ಲೂ ಮನೆಯಲ್ಲಿಯೇ ತಯಾರಿಸುವ ಪನ್ನೀರು ಆರೋಗ್ಯಕ್ಕೆ ಮತ್ತಷ್ಟು ಒಳ್ಳೆಯದು.

ಇದನ್ನೂ ಓದಿ : ಮಹಿಳೆಯರೇ…! ಈ ೮ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ : ವಿಟಮಿನ್‌ ಡಿ ಕೊರತೆ ನಿಮ್ಮನ್ನು ಕಾಡುತ್ತಿರಬಹುದು

ಸೋಯಾ ಚಂಕ್​ಗಳು : ಮೊಟ್ಟೆ ಹಾಗೂ ಪನ್ನೀರಿನ ಬಗ್ಗೆ ಬಹುತೇಕರಿಗೆ ತಿಳಿದಿದೆ. ಆದರೆ ಸೋಯಾ ಚಂಕ್ಸ್​ ಪ್ರೊಟೀನ್​ ಮೂಲ ಎನ್ನುವುದರ ಬಗ್ಗೆ ಬಹುತೇಕರಿಗೆ ಮಾಹಿತಿ ಇಲ್ಲ. 100 ಗ್ರಾಂ ಸೋಯಾ ಚಂಕ್ಸ್​ ನಿಮಗೆ 52 ಗ್ರಾಂ ಪ್ರೊಟೀನ್​ ನೀಡುತ್ತದೆ. ಬಿರಿಯಾನಿ, ಕರ್ರಿ ರೂಪದಲ್ಲಿ ನೀವು ಸೋಯಾ ಚಂಕ್ಸ್ ಸೇವನೆ ಮಾಡಬಹುದಾಗಿದೆ.

    ಕಡ್ಲೆಕಾಳು : ಪೌಷ್ಟಿಕ ಮತ್ತು ಪ್ರೋಟೀನ್-ಭರಿತ ಆಹಾರಗಳಲ್ಲಿ ಕಪ್ಪು ಕಡ್ಲೆಗಳು ಕೂಡ ಒಂದಾಗಿವೆ. ಒಂದು ಕಪ್ ಸುಮಾರು 19 ಗ್ರಾಂ ಪ್ರೋಟೀನ್ ನೀಡುತ್ತದೆ, ಮತ್ತು ನೀವು ಅದನ್ನು ಬೇಯಿಸಿದ, ಹುರಿದ ಅಥವಾ ಸರಳವಾದ ಮೇಲೋಗರದಲ್ಲಿ ಆನಂದಿಸಬಹುದು.

    ರಾಜ್ಮಾ : ಇದು ಕೂಡ ಸಸ್ಯಮೂಲದಿಂದ ಸಿಗಬಹುದಾದ ಉತ್ತಮ ಪ್ರೊಟೀನ್​ ಮೂಲವಾಗಿದೆ. 100 ಗ್ರಾಂ ರಾಜ್ಮಾದಿಂದ ನಿಮಗೆ 24 ಗ್ರಾಂ ಪ್ರೊಟೀನ್​ ಸಿಗಲಿದೆ.

    ಮೊಸರು : ಮೊಸರು ಕೇವಲ ಬಾಯಿ ರುಚಿಗೆ ಮಾತ್ರವಲ್ಲ. ಇದು ಪ್ರೊಟೀನ್​ನಿಂದಲೂ ಸಮೃದ್ಧವಾಗಿದೆ. ಪ್ರತಿ 100 ಗ್ರಾಂನಲ್ಲಿ ನಿಮಗೆ 12 ಗ್ರಾಂ ಪ್ರೊಟೀನ್​ ಸಿಗುತ್ತದೆ. ಇದನ್ನು ನೀವು ಹಾಗೆಯೇ ಕುಡಿಯಬಹುದು. ಅಥವಾ ಸಲಾಡ್​ಗಳೊಂದಿಗೆ ಸೇರಿಸಿಕೊಳ್ಳಬಹುದು.

    ಇದನ್ನೂ ಓದಿ : ಪ್ರತಿಯೊಬ್ಬ ಮಹಿಳೆ ತಿಳಿದುಕೊಳ್ಳಲೇ ಬೇಕಾದ ಆಹಾರ ತಪಾಸಣೆಗಳು

    ಕಡ್ಲೆ ಹಿಟ್ಟು : ಕಡ್ಲೆಹಿಟ್ಟು ನಿಮಗೆ ಮಾರುಕಟ್ಟೆಯಲ್ಲಿ ಅತ್ಯಂತ ಅಗ್ಗದ ದರಕ್ಕೆ ದೊರೆಯುತ್ತದೆ. 100 ಗ್ರಾಂ ಕಡ್ಲೆಹಿಟ್ಟಿನಲ್ಲಿ ನಿಮಗೆ 22 ಗ್ರಾಂ ಪ್ರೊಟೀನ್​ ದೊರೆಯುತ್ತದೆ. ನೀವು ತಯಾರಿಸುವ ರೊಟ್ಟಿಗಳಲ್ಲಿ ಕಡ್ಲೆಹಿಟ್ಟನ್ನು ಸೇರಿಸಿಕೊಳ್ಳಬಹುದು.

    .ಟೋಫುಗಳು : ಇದು ಕೂಡಾ ಸೋಯಾಬಿನ್​ ಮೂಲದಿಂದ ಬರುವ ಪದಾರ್ಥ. ಡೈರಿ ಉತ್ಪನ್ನಗಳನ್ನು ತಿನ್ನದವರು ಟೋಫುಗಳನ್ನು ತಿನ್ನಬಹುದು. ಸೋಯಾಬಿನ್​ನ ಹಾಲನ್ನು ತೆಗೆದು ಟೋಪುಗಳನ್ನು ತಯಾರಿಸಲಾಗುತ್ತದೆ. ನೀವು ಪನ್ನೀರಿನ ರೂಪದಲ್ಲಿಯೇ ಟೋಪುಗಳನ್ನು ಬಳಸಬಹುದಾಗಿದೆ.

    ತೊಗರಿಬೆಳೆಗಳು : ಕಡ್ಲೆಕಾಳುಗಳಂತೆಯೇ ತೊಗರಿ ಬೆಳೆಕೂಡ ಉತ್ತಮ ಪ್ರೊಟೀನ್​ ಮೂಲವಾಗಿದೆ. ಪ್ರತಿನಿತ್ಯ ನೀವು ದಾಲ್​ನ ರೂಪದಲ್ಲಿ ಪ್ರೊಟೀನ್​ಗಳನ್ನು ಸೇವನೆ ಮಾಡಬಹುದಾಗಿದೆ.

      Health tips Top Protein Sources Under 100 rs The Best Budget-Friendly Foods for Your Muscle Gain

      Exit mobile version