ವಿವೋ ಇಂಡಿಯಾದಿಂದ 60,000 ರೂ. ವಿದ್ಯಾರ್ಥಿವೇತನ; ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಭರ್ಜರಿ ಪ್ರೋತ್ಸಾಹ

Vivo KanyaGyaan Scholarship 2026: ತಾಂತ್ರಿಕ ಮತ್ತು ಉನ್ನತ ಶಿಕ್ಷಣ ಪಡೆಯಲು ಇಚ್ಛಿಸುವ ಬಡ ಪ್ರತಿಭಾವಂತ ವಿದ್ಯಾರ್ಥಿನಿಯರಿಗಾಗಿ ವಿವೋ ಇಂಡಿಯಾ (Vivo India) ಸಂಸ್ಥೆಯು ‘ವಿವೋ ಕನ್ಯಾಜ್ಞಾನ’ (Vivo KanyaGyaan) ವಿದ್ಯಾರ್ಥಿವೇತನ ಯೋಜನೆಯನ್ನು ಘೋಷಿಸಿದೆ. ಆರ್ಥಿಕ ಅಡಚಣೆಯಿಂದ ಶಿಕ್ಷಣ ಅರ್ಧಕ್ಕೆ ನಿಲ್ಲಿಸುವ ಹೆಣ್ಣುಮಕ್ಕಳಿಗೆ ಈ ಯೋಜನೆ ಸಂಜೀವಿನಿಯಾಗಲಿದೆ.

ಯಾರು ಅರ್ಜಿ ಸಲ್ಲಿಸಬಹುದು? (ಅರ್ಹತೆಗಳು)

ಸ್ಕಾಲರ್‌ಶಿಪ್ ಮೊತ್ತ ಮತ್ತು ಸೌಲಭ್ಯ:

ಆಯ್ಕೆಯಾದ ಪ್ರತಿಯೊಬ್ಬ ವಿದ್ಯಾರ್ಥಿನಿಗೆ ವಾರ್ಷಿಕ 60,000 ರೂ. ಆರ್ಥಿಕ ನೆರವು ಸಿಗಲಿದೆ. ಕೇವಲ ಹಣಕಾಸಿನ ಸಹಾಯ ಮಾತ್ರವಲ್ಲದೆ, ವೃತ್ತಿಜೀವನ ರೂಪಿಸಿಕೊಳ್ಳಲು ಉದ್ಯಮದ ತಜ್ಞರಿಂದ ಮಾರ್ಗದರ್ಶನ (Mentorship) ಕೂಡ ಈ ಯೋಜನೆಯ ಭಾಗವಾಗಿರಲಿದೆ.

16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ಬ್ಯಾನ್? ಸಿಎಂ ಸಿದ್ದರಾಮಯ್ಯ ಹೊಸ ಮಾಸ್ಟರ್ ಪ್ಲಾನ್!

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು:

  1. ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ.
  2. 10 ಮತ್ತು 12ನೇ ತರಗತಿಯ ಅಂಕಪಟ್ಟಿಗಳು.
  3. ಪ್ರಸಕ್ತ ವರ್ಷದ ಕಾಲೇಜು ಪ್ರವೇಶ ದಾಖಲೆ (Bonafide/Fee Receipt).
  4. ಕುಟುಂಬದ ಆದಾಯ ಪ್ರಮಾಣಪತ್ರ.
  5. ಬ್ಯಾಂಕ್ ಪಾಸ್‌ಬುಕ್ ಪ್ರತಿ.
  6. ಪ್ರಬಂಧ: ನೀವು ಏಕೆ STEM ಕ್ಷೇತ್ರವನ್ನು ಆರಿಸಿಕೊಂಡಿದ್ದೀರಿ ಎಂಬ ಬಗ್ಗೆ ಸುಮಾರು 200 ಪದಗಳ ಕಿರು ಲೇಖನ ಬರೆಯಬೇಕು.

ಪ್ರಮುಖ ದಿನಾಂಕ ಮತ್ತು ವಿಧಾನ:

ಸಲಹೆ: ಸರ್ವರ್ ಸಮಸ್ಯೆಗಳನ್ನು ತಪ್ಪಿಸಲು ಕೊನೆಯ ದಿನದವರೆಗೆ ಕಾಯದೆ ಆದಷ್ಟು ಬೇಗ ಅರ್ಜಿ ಸಲ್ಲಿಸಿ. ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.

Exit mobile version