ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ : ಸರ್ಕಾರದಿಂದ ಸಿಗಲಿದೆ ಉಚಿತ NEET ತರಬೇತಿ

ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆಂದೇ ಪ್ರತಿಭಾನ್ವಿತ ಶಿಕ್ಷಣ ತಜ್ಞರಿಂದ ನೀಟ್​ ಪರೀಕ್ಷೆ ತರಬೇತಿಯನ್ನು ಸರ್ಕಾರವೇ ನಡೆಸಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್​ ಆರ್​.ಪಾಟೀಲ್​ ಹೇಳಿದ್ದಾರೆ.

NEET Coaching: ವೈದ್ಯಕೀಯ ಶಿಕ್ಷಣ ಎನ್ನುವುದು ಬಡವರ ಪಾಲಿಗೆ ಒಂದು ರೀತಿಯಲ್ಲಿ ಕೈಗೆಟುದ ದ್ರಾಕ್ಷಿಯೇ ಸರಿ. ಸರ್ಕಾರಿ ವೈದ್ಯಕೀಯ ಸೀಟುಗಳು ಲಭ್ಯವಿದ್ದರೂ ಸಹ ನೀಟ್​ ಪರೀಕ್ಷೆಯನ್ನು ಎದುರಿಸಲು ಕೋಚಿಂಗ್​ ಕ್ಲಾಸ್​ಗಳಿಗೆ ದುಬಾರಿ ಶುಲ್ಕ ತೆರೆಬೇಕಾದ ಅನಿವಾರ್ಯವಿದೆ. ಆದರೆ ಇದೀಗ ಈ ಸಮಸ್ಯೆಗೆ ರಾಜ್ಯ ಸರ್ಕಾರವೇ ಪರಿಹಾರ ನೀಡಿದೆ.

ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆಂದೇ ಪ್ರತಿಭಾನ್ವಿತ ಶಿಕ್ಷಣ ತಜ್ಞರಿಂದ ನೀಟ್​ ಪರೀಕ್ಷೆ ತರಬೇತಿಯನ್ನು ಸರ್ಕಾರವೇ ನಡೆಸಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್​ ಆರ್​.ಪಾಟೀಲ್​ ಹೇಳಿದ್ದಾರೆ. ವಿಧಾನಪರಿಷತ್​ ಪ್ರಶ್ನೋತ್ತರ ಕಲಾಪದ ಅವಧಿಯಲ್ಲಿ ಶರಣಪ್ರಕಾಶ್​ ಆರ್​. ಪಾಟೀಲ್​ ಈ ಮಾಹಿತಿ ನೀಡಿದ್ದಾರೆ.

ಈ ವಿಚಾರವನ್ನು ಮೊದಲು ಪ್ರಸ್ತಾಪಿಸಿದ ಕಾಂಗ್ರೆಸ್​ ಸದಸ್ಯ ಐವಾನ್​ ಡಿಸೋಜಾ, ನೀಟ್​ ಪರೀಕ್ಷೆಯು ಅತ್ಯಂತ ಕಷ್ಟದ ಪರೀಕ್ಷೆಯಾಗಿದ್ದು ಇದಕ್ಕೆ ಬೇಕಾದ ಸೂಕ್ತ ತಯಾರಿಯನ್ನು ಭರಿಸಲಾಗದೇ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ನೀಟ್​ ಪರೀಕ್ಷೆಯ ತಯಾರಿ ನಡೆಸುವ ಕೋಚಿಂಗ್​ ಸೆಂಟರ್​ಗಳು 3 ಲಕ್ಷ ರೂಪಾಯಿಗಳವರೆಗೆ ಶುಲ್ಕ ಕೇಳುತ್ತವೆ. ಇಂತಹ ಸಂದರ್ಭದಲ್ಲಿ ಹಳ್ಳಿ ಭಾಗದ ಬಡ ವಿದ್ಯಾರ್ಥಿಗಳು ಈ ತರಬೇತಿಯನ್ನು ಪಡೆಯುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ವಿಎಸ್‌ಎಸ್‌ ಶಾಲೆಯಲ್ಲಿ ಎಪ್ರಿಲ್‌ 13ರಿಂದ ಬೇಸಿಗೆ ಶಿಬಿರ : ಇಂದೇ ಹೆಸರು ನೋಂದಾಯಿಸಿ

ಇದಕ್ಕೆ ಉತ್ತರಿಸಿದ ಸಚಿವ ಡಾ. ಶರಣಪ್ರಕಾಶ್​ ಪಾಟೀಲ, ನೀಟ್​ ಪರೀಕ್ಷೆಯನ್ನು ಕೈಬಿಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಆದರೆ ಸರ್ವೋಚ್ಛ ನ್ಯಾಯಾಲಯವೇ ನೀಟ್​ ಪರೀಕ್ಷೆಯ ಪರವಾಗಿದೆ. ಸಂಪೂರ್ಣ ದೇಶಕ್ಕೆ ಒಂದೇ ವೈದ್ಯಕೀಯ ಪರೀಕ್ಷೆ ಎಂದು ಸುಪ್ರೀಂಕೋರ್ಟ್ ಹೇಳಿರುವಾಗ ನೀಟ್​ ಪರೀಕ್ಷೆಯನ್ನು ರಾಜ್ಯದಲ್ಲಿ ರದ್ದು ಮಾಡಲು ಸಾಧ್ಯವಿಲ್ಲ. ಆದರೆ ನಾವು ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಈ ಕಠಿಣ ಪರೀಕ್ಷೆಗೆ ಹೇಗೆ ಸಜ್ಜುಗೊಳಿಸಬಹುದು ಎಂಬುದರ ಬಗ್ಗೆ ಖಂಡಿತ ಯೋಷಚಿಸಬಹುದಾಗಿದೆ. ಗ್ರಾಮೀಣ ಭಾಗದಲ್ಲಿ ಸೂಕ್ತ ಹಾಗೂ ಪರಿಣಾಮಕಾರಿ ನೀಟ್​ ಕೋಚಿಂಗ್​ ತರಗತಿಗಳನ್ನು ಸರ್ಕಾರವೇ ಉಚಿತವಾಗಿ ಆರಂಭಿಸುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

Exit mobile version