PUC Result 2026 : ದ್ವಿತೀಯ ಪಿಯುಸಿ ಫಲಿತಾಂಶ ವೀಕ್ಷಿಸುವ ಮುನ್ನ ಈ 3 ವಿಷಯ ತಿಳಿದಿರಲಿ; ಲಿಂಕ್ ಇಲ್ಲಿದೆ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ಏಪ್ರಿಲ್ 9ರ ಮಧ್ಯಾಹ್ನ ಆಧಿಕೃತವಾಗಿ ಫಲಿತಾಂಶವನ್ನು ಪ್ರಕಟಿಸಲಿದೆ. ಸರ್ವರ್ ಬಿಜಿಯಾಗುವ ಮುನ್ನವೇ ನೀವು ಫಲಿತಾಂಶವನ್ನು ಸುಲಭವಾಗಿ ಹೇಗೆ ಚೆಕ್ ಮಾಡಬಹುದು?

PUC Result 2026 : ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. ಪರೀಕ್ಷೆ ಎದುರಿಸಿರುವ ಲಕ್ಷಾಂತರ ವಿದ್ಯಾರ್ಥಿಗಳ ಎದಬಡಿತ ಹೆಚ್ಚಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ಏಪ್ರಿಲ್ 9ರ ಮಧ್ಯಾಹ್ನ ಆಧಿಕೃತವಾಗಿ ಫಲಿತಾಂಶವನ್ನು ಪ್ರಕಟಿಸಲಿದೆ. ಸರ್ವರ್ ಬಿಜಿಯಾಗುವ ಮುನ್ನವೇ ನೀವು ಫಲಿತಾಂಶವನ್ನು ಸುಲಭವಾಗಿ ಹೇಗೆ ಚೆಕ್ ಮಾಡಬಹುದು? ಇಲ್ಲಿದೆ ಕಂಪ್ಲೀಟ್ ಗೈಡ್.

PUC Result 2026 : ಫಲಿತಾಂಶ ಪ್ರಕಟದ ಸಮಯ ಎಷ್ಟು ಗಂಟೆಗೆ ?

ಮಂಡಳಿಯ ಮೂಲಗಳ ಪ್ರಕಾರ, ನಾಳೆ  3 ಗಂಟೆಗೆ ಮಂಡಳಿಯ ಕಚೇರಿಯಲ್ಲಿ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಟಾಪರ್‌ಗಳ ಪಟ್ಟಿ ಮತ್ತು ಜಿಲ್ಲಾವಾರು ಶೇಕಡಾವಾರು ಫಲಿತಾಂಶ ಬಿಡುಗಡೆಯಾಗಲಿದೆ. ನಂತರ ಅಧಿಕೃತ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಫಲಿತಾಂಶವನ್ನು ಪಡೆಯಬಹುದು.

ಪಿಯುಸಿ ಫಲಿತಾಂಶ ವೀಕ್ಷಿಸಲು ಈ ಲಿಂಕ್‌ಗಳನ್ನು ಈಗಲೇ ಸೇವ್ ಮಾಡಿಟ್ಟುಕೊಳ್ಳಿ

ಫಲಿತಾಂಶ ಪ್ರಕಟವಾದ ತಕ್ಷಣ ಸಾವಿರಾರು ವಿದ್ಯಾರ್ಥಿಗಳು ವೆಬ್‌ಸೈಟ್‌ಗೆ ಲಾಗಿನ್ ಆಗುವುದರಿಂದ ಸೈಟ್ ‘ಹ್ಯಾಂಗ್’ ಆಗುವ ಸಾಧ್ಯತೆ ಇರುತ್ತದೆ. ಅಂತಹ ಸಮಯದಲ್ಲಿ ಈ ಎರಡು ಲಿಂಕ್‌ಗಳನ್ನು ಬಳಸಿ:

Also Read : ದ್ವಿತೀಯ ಪಿಯುಸಿ ರಿಸಲ್ಟ್​…! ದ್ವಿತೀಯ ಪಿಯುಸಿ ಫಲಿತಾಂಶ ಡಿಜಿಲಾಕರ್​ನಲ್ಲೂ ಲಭ್ಯ

karresults.nic.in (ಫಲಿತಾಂಶಕ್ಕಾಗಿ ಮಾತ್ರ ಮೀಸಲಾದ ಸೈಟ್)

kseab.karnataka.gov.in

ನಿಮ್ಮ ಮೊಬೈಲ್‌ನಲ್ಲಿ ಪಿಯುಸಿ ಫಲಿತಾಂಶ ಚೆಕ್ ಮಾಡುವುದು ಹೇಗೆ ?

ಯಾವುದೇ ಸೈಬರ್ ಸೆಂಟರ್‌ಗೆ ಹೋಗುವ ಅವಶ್ಯಕತೆಯಿಲ್ಲದೆ ನಿಮ್ಮ ಮೊಬೈಲ್‌ನಲ್ಲಿ ಹೀಗೆ ರಿಸಲ್ಟ್ ನೋಡಿ:

 ರಿಜಿಸ್ಟ್ರೇಷನ್ ನಂಬರ್ ಕಳೆದುಹೋಗಿದ್ದರೆ ಏನು ಮಾಡಬೇಕು ?

ಒಂದು ವೇಳೆ ನೀವು ಹಾಲ್ ಟಿಕೆಟ್ ಅಥವಾ ರಿಜಿಸ್ಟ್ರೇಷನ್ ನಂಬರ್ ಮರೆತಿದ್ದರೆ, ತಕ್ಷಣ ನಿಮ್ಮ ಕಾಲೇಜನ್ನು ಸಂಪರ್ಕಿಸಿ ಅಥವಾ ಕಾಲೇಜಿನ ನೋಟಿಸ್ ಬೋರ್ಡ್‌ನಲ್ಲಿ ನಿಮ್ಮ ಫಲಿತಾಂಶವನ್ನು ವೀಕ್ಷಿಸಬಹುದು. ಆನ್‌ಲೈನ್‌ನಲ್ಲಿ ರಿಸಲ್ಟ್ ನೋಡಲು ರಿಜಿಸ್ಟ್ರೇಷನ್ ನಂಬರ್ ಕಡ್ಡಾಯ.

Also Read : ಡಿಗ್ರಿ ಮುಗಿದಿದೆಯೇ ? ಮನೆಯಲ್ಲೇ ಕುಳಿತು ಲಕ್ಷ ಗಳಿಸಬಹುದಾದ 5 ಬೆಸ್ಟ್ ‘ಫ್ರೀ’ ಕೋರ್ಸ್‌

ಪಿಯುಸಿ ಅಂಕಪಟ್ಟಿಯಲ್ಲಿ ದೋಷವಿದ್ದರೆ ?

ಫಲಿತಾಂಶ ಬಂದ ತಕ್ಷಣ ನಿಮ್ಮ ಹೆಸರು, ವಿಷಯ ಮತ್ತು ಅಂಕಗಳನ್ನು ಸರಿಯಾಗಿ ಪರಿಶೀಲಿಸಿ. ಯಾವುದೇ ದೋಷವಿದ್ದರೆ ಕೂಡಲೇ ಮಂಡಳಿಯ ಗಮನಕ್ಕೆ ತರಲು ಕಾಲೇಜು ಪ್ರಾಂಶುಪಾಲರನ್ನು ಭೇಟಿ ಮಾಡಿ. ಮರು ಮೌಲ್ಯಮಾಪನಕ್ಕೆ (Revaluation) ಅರ್ಜಿ ಸಲ್ಲಿಸಲು ನಾಳೆಯೇ ದಿನಾಂಕಗಳನ್ನು ಘೋಷಿಸಲಾಗುತ್ತದೆ.

ಈ ಸುದ್ದಿಯನ್ನು ನಿಮ್ಮ ಫ್ರೆಂಡ್ಸ್ ಗ್ರೂಪ್‌ಗಳಿಗೆ ಶೇರ್ ಮಾಡಿ. ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೂ ಆಲ್ ದಿ ಬೆಸ್ಟ್!

karnataka 2nd puc result 2026 important things and direct link

Exit mobile version