2nd PUC Exam : ಇಂದಿನಿಂದ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಶುರು; ಎಕ್ಸಾಮ್ ಹಾಲ್‌ಗೆ ಹೋಗುವ ಮುನ್ನ ಈ ಮಾಹಿತಿ ತಿಳಿದಿರಲಿ

Karnataka 2nd puc exam : ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಬಿಗಿ ಭದ್ರತೆಯೊಂದಿಗೆ ಆರಂಭಗೊಂಡಿವೆ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಬಹುಮುಖ್ಯ ಘಟ್ಟವಾಗಿರುವ ಈ ಪರೀಕ್ಷೆಯನ್ನು ಎದುರಿಸಲು ಬರೋಬ್ಬರಿ 7.1 ಲಕ್ಷ ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ.

ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಬಿಗಿ ಭದ್ರತೆಯೊಂದಿಗೆ ಆರಂಭಗೊಂಡಿವೆ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಬಹುಮುಖ್ಯ ಘಟ್ಟವಾಗಿರುವ ಈ ಪರೀಕ್ಷೆಗಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (KSEAB) ರಾಜ್ಯಾದ್ಯಂತ ಒಟ್ಟು 1,217 ಪರೀಕ್ಷಾ ಕೇಂದ್ರಗಳನ್ನು ಸಿದ್ಧಪಡಿಸಿದೆ.

Karnataka 2nd puc exam : ಪರೀಕ್ಷೆಯ ಹೈಲೈಟ್ಸ್:

ಬಿಗಿ ಭದ್ರತೆ ಮತ್ತು ಸಿಸಿಟಿವಿ ಕಣ್ಗಾವಲು:

ಯಾವುದೇ ಪರೀಕ್ಷಾ ಅಕ್ರಮಗಳು ನಡೆಯದಂತೆ ತಡೆಯಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (KSEAB) ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಎಲ್ಲಾ 1,217 ಕೇಂದ್ರಗಳ ಸುತ್ತಮುತ್ತ ಸಿಸಿಟಿವಿ ಕಣ್ಗಾವಲು ಅಳವಡಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

Also Read : ವಿವೋ ಇಂಡಿಯಾದಿಂದ 60,000 ರೂ. ವಿದ್ಯಾರ್ಥಿವೇತನ; ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಭರ್ಜರಿ ಪ್ರೋತ್ಸಾಹ

ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ 37,337 ವಿದ್ಯಾರ್ಥಿಗಳು

ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿಯೂ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ 59 ಪರೀಕ್ಷಾ ಕೇಂದ್ರಗಳಲ್ಲಿ 37,337 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಮಂಗಳೂರಿನಲ್ಲಿ ಅತಿ ಹೆಚ್ಚು (21) ಕೇಂದ್ರಗಳಿದ್ದರೆ, ಬೆಳ್ತಂಗಡಿ (8), ಬಂಟ್ವಾಳ (6), ಮೂಡುಬಿದಿರೆ (6), ಕಡಬ (5), ಪುತ್ತೂರು (5), ಉಳ್ಳಾಲ (4), ಸುಳ್ಯ (2) ಹಾಗೂ ಮೂಲ್ಕಿಯಲ್ಲಿ (2) ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ವಿದ್ಯಾರ್ಥಿಗಳಿಗೆ ಶಿಕ್ಷಣ ತಜ್ಞರ ಕೊನೇ ಕ್ಷಣದ ಕಿವಿಮಾತು:

ಟೆನ್ಶನ್ ಬೇಡ: ಆತಂಕ ಅಥವಾ ಭಯ ಬಿಡಿ, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ.

ಸಮಯ ಪಾಲನೆ: ನಿಗದಿತ ಸಮಯಕ್ಕೂ ಮುಂಚಿತವಾಗಿ ಪರೀಕ್ಷಾ ಕೇಂದ್ರವನ್ನು ತಲುಪಿ.

ಹಾಲ್ ಟಿಕೆಟ್ ಮರೆಯದಿರಿ: ಪ್ರವೇಶ ಪತ್ರ, ಪೆನ್ನು, ಪೆನ್ಸಿಲ್ ಸೇರಿದಂತೆ ಅಗತ್ಯ ವಸ್ತುಗಳು ನಿಮ್ಮೊಂದಿಗಿರಲಿ.

ಗಡಿಬಿಡಿ ಬೇಡ: 3 ಗಂಟೆಗಳ ಕಾಲಾವಕಾಶ ಇರುವುದರಿಂದ, ಪ್ರಶ್ನೆಗಳನ್ನು ಸರಿಯಾಗಿ ಓದಿಕೊಂಡು, ನಿಧಾನವಾಗಿ ಯೋಚಿಸಿ ಉತ್ತರ ಬರೆಯಿರಿ.

Aslo Read : 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ಬ್ಯಾನ್? ಸಿಎಂ ಸಿದ್ದರಾಮಯ್ಯ ಹೊಸ ಮಾಸ್ಟರ್ ಪ್ಲಾನ್!

Exit mobile version