ಬಾಲಕಿಯರೇ ಗಮನಿಸಿ! ಉನ್ನತ ಶಿಕ್ಷಣಕ್ಕಾಗಿ ಅಜೀಂ ಪ್ರೇಮ್‌ಜಿ ವಿದ್ಯಾರ್ಥಿವೇತನ 2025 ಕ್ಕೆ ಇಂದೇ ಅರ್ಜಿ ಸಲ್ಲಿಸಿ

Azim Premji Foundation Scholarship 2025: ಅಜೀಂ ಪ್ರೇಮ್‌ಜಿ ಫೌಂಡೇಶನ್ 2025–26ನೇ ಸಾಲಿನ ಅಜೀಂ ಪ್ರೇಮ್‌ಜಿ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನಿಸಿದೆ.

ಅಧಿಕೃತ ಅಧಿಸೂಚನೆಯ ಪ್ರಕಾರ ಇದು 18 ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಾಲಕಿಯರಿಗೆ ಉನ್ನತ ಶಿಕ್ಷಣವನ್ನು ಪಡೆಯಲು ನೆರವು ನೀಡುತ್ತದೆ.

ಆಯ್ಕೆಯಾದ ವಿದ್ಯಾರ್ಥಿನಿಯರು ವರ್ಷಕ್ಕೆ 30,000 ರೂ. ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಕಲಿತು 10 ಮತ್ತು 12 ನೇ ತರಗತಿಯಲ್ಲಿ ಉತ್ತೀರ್ಣರಾದ ಮತ್ತು ಮಾನ್ಯತೆ ಪಡೆದ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆದ ಬಾಲಕಿಯರಿಗೆ ಈ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.

ವಿದ್ಯಾರ್ಥಿನಿಯರು ತಮ್ಮ ಅಧ್ಯಯನವನ್ನು ಯಾವುದೇ ಅಡೆತಡೆಗಳಿಲ್ಲದೇ (ಶೈಕ್ಷಣಿಕ ವರ್ಷದಲ್ಲಿ ಯಾವುದೇ ವಿಷಯದಲ್ಲಿ ಅನುತ್ತೀರ್ಣಗೊಳ್ಳದೇ) ಮುಂದುವರಿಸಿದರೆ ಅಂತಹ ವಿದ್ಯಾರ್ಥಿಗೆ ಪೂರ್ಣ ಅವಧಿಗೆ ವಿದ್ಯಾರ್ಥಿವೇತನವು ಮುಂದುವರಿಯುತ್ತದೆ.

ಈ ವರ್ಷದ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಸೆಪ್ಟೆಂಬರ್ 30, 2025 ಆಗಿದೆ. ಈ ವಿದ್ಯಾರ್ಥಿವೇತನ ಪಡೆದುಕೊಳ್ಳಲು ಅವಶ್ಯಕವಾಗಿರುವ ಅರ್ಹತಾ ಮಾನದಂಡಗಳೇನು ಇಲ್ಲಿದೆ ಓದಿ.

ಅಜೀಂ ಪ್ರೇಮ್‌ಜಿ ವಿದ್ಯಾರ್ಥಿವೇತನ ಅರ್ಹತಾ ಮಾನದಂಡಗಳು

ಅಜೀಂ ಪ್ರೇಮ್‌ಜಿ ವಿದ್ಯಾರ್ಥಿವೇತನ 2025, ಪಡೆದುಕೊಳ್ಳಲು ವಿದ್ಯಾರ್ಥಿನಿಯರು ಈ ಕೆಳಗಿನ ಎಲ್ಲಾ ಷರತ್ತುಗಳನ್ನು ಪೂರೈಸಬೇಕು. ಅದೇನೆಂದರೆ….

ಇದನ್ನೂ ಓದಿ: ಸಿಬಿಎಸ್‌ಇ 2026 ಪರೀಕ್ಷೆ ನಿಯಮದಲ್ಲಿ ಮಹತ್ವದ ಬದಲಾವಣೆ: ಯಾರಿಗೆ ಅನುಕೂಲ?

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು

ಅಜೀಂ ಪ್ರೇಮ್‌ಜಿ ವಿದ್ಯಾರ್ಥಿವೇತನ 2025 ಕ್ಕೆ ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಈ ಮೇಲಿನ ದಾಖಲೆಗಳನ್ನು ಕಡ್ಡಾಯವಾಗಿ ಅಪ್‌ಲೋಡ್‌ ಮಾಡಬೇಕಾಗುತ್ತದೆ.

ಅಜೀಂ ಪ್ರೇಮ್‌ಜಿ ವಿದ್ಯಾರ್ಥಿವೇತನ 2025 ಅರ್ಜಿ ಸಲ್ಲಿಕೆ ಹೇಗೆ?

ಇದನ್ನೂ ಓದಿ: ದಸರಾ ರಜೆ : ಶಾಲೆಗೆ 13 ದಿನ, ಕಾಲೇಜಿಗೆ 8 ದಿನ ರಜೆ ಘೋಷಣೆ

(Azim Premji Foundation Scholarship 2025 eligible girl student apply for higher education)

Exit mobile version