ಕುಡಿದ ಮತ್ತಿನಲ್ಲಿ ಅವಾಂತರ : ನಟ ಮಯೂರ್​ ಪಟೇಲ್​ರಿಂದ ಸರಣಿ ಅಪಘಾತ

Sandalwood Actor Mayur Patel : ಕನ್ನಡ ಚಿತ್ರರಂಗದ ನಟ ಮಯೂರ್​ ಪಟೇಲ್ಕುಡಿದ ಮತ್ತಿನಲ್ಲಿ ಬಹುದೊಡ್ಡ ಅವಾಂತರವನ್ನೇ ಮಾಡಿದ್ದಾರೆ. ತಡರಾತ್ರಿ ಬೆಂಗಳೂರಿನಲ್ಲಿ ಮದ್ಯದ ಅಮಲಿನಲ್ಲಿ ಫಾರ್ಚೂನರ್​ ಕಾರನ್ನು ಬೇಕಾಬಿಟ್ಟಿ ಚಲಾಯಿಸಿ ಸರಣ ಅಪಘಾತಕ್ಕೆ ಕಾರಣರಾಗಿದ್ದಾರೆ. ಮಯೂರ್​ ಪಟೇಲ್​ ಅವರ ಕಾರು ನಿಂತಿದ್ದ ಕಾರುಗಳು ಹಾಗೂ ಸರ್ಕಾರಿ ವಾಹನಗಳಿಗೆ ಡಿಕ್ಕಿ ಹೊಡೆದಿದೆ.

ಬೆಂಗಳೂರಿನ ದೊಮ್ಮಲೂರು ಬಳಿಯ ಕಮಾಂಡೋ ಆಸ್ಪತ್ರೆ ಸಮೀಪ ಈ ಸರಣಿ ಅಪಘಾತ ಸಂಭವಿಸಿದೆ. ಕುಡಿದು ಕಾರು ಓಡಿಸುತ್ತಿದ್ದ ಮಯೂರ್​ ಪಟೇಲ್​ ಶ್ರೀನಿವಾಸ್​ (Sandalwood Actor Mayur Patel) ಹಾಗೂ ಅಭಿಷೇಕ್​ ಎಂಬವರ ಕಾರುಗಳಿಗೆ ಗುದ್ದಿದ್ದಾರೆ. ಬಳಿಕ ಸರ್ಕಾರಿ ವಾಹನವನ್ನೂ ಜಖಂಗೊಳಿಸಿದ್ದಾರೆ. ಕೂಡಲೇ ಪ್ರತ್ಯಕ್ಷದರ್ಶಿಗಳು ಕಂಟ್ರೋಲ್​ರೂಮಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಹೊಯ್ಸಳ ಪೊಲೀಸರು ಮಯೂರ್​ ಪಟೇಲ್​ರನ್ನು ಠಾಣೆಗೆ ಕರೆದೊಯ್ದು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕುಡಿದು ವಾಹನ ಚಲಾಯಿಸುರುವುದು ಗಮನಕ್ಕೆ ಬಂದಿದೆ.

ಇದನ್ನೂ ಓದಿ: ಮನೆಗೆಲಸದ ಸೋಗಿನಲ್ಲಿ ಬಂದು 18 ಕೋಟಿ ರೂಪಾಯಿ ಮೌಲ್ಯದ ಸ್ವತ್ತು ಎಗರಿಸಿದ ಖದೀಮ ದಂಪತಿ

ಶ್ರೀನಿವಾಸ್​ ಎಂಬವರು ನೀಡಿದ ದೂರು ಆಧರಿಸಿ ಹಲಸೂರು ಸಂಚಾರಿ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಪೊಲೀಸರು ಮಯೂರ್ ಪಟೇಲ್​ ಕಾರನ್ನು ಜಪ್ತಿ ಮಾಡಿದ್ದಾರೆ.. ಅಲ್ಲದೇ ಈ ಕಾರಿಗೆ ಇನ್ಸೂರೆನ್ಸ್​ ಕೂಡ ಇಲ್ಲವೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. .

Exit mobile version