ಕಾರ್ಕಳ : ಮೊಬೈಲ್​ ಕೊಡಿಸಲಿಲ್ಲವೆಂದು ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಈಗಿನ ಜಮಾನದ ಯುವಕರಿಗೆ ತಂತ್ರಜ್ಞಾನದ ಮೋಹ ಜಾಸ್ತಿ. ಇದೇ ಮೋಹದಲ್ಲಿ ಯುವಕನೋರ್ವ ಪ್ರಾಣವನ್ನೇ ಬಲಿಕೊಟ್ಟಿದ್ದಾನೆ. ಅಮ್ಮ ಹೊಸ ಮೊಬೈಲ್​ ಕೊಡಿಸಲು ಒಪ್ಪುತ್ತಿಲ್ಲ ಎಂಬ ಒಂದೇ ಕಾರಣಕ್ಕೆ ಕೋಪಗೊಂಡ ಪಿ.ಯು.ಸಿ ವಿದ್ಯಾರ್ಥಿಯೊಬ್ಬ ಕಲ್ಲುಕೋರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯು ಕಾರ್ಕಳ ಸಮೀಪದ ಸಂಭವಿಸಿದೆ. ಮೃತ ವಿದ್ಯಾರ್ಥಿಯನ್ನು 16 ವರ್ಷದ ಸುಮಂತ್​ ನಂದಳಿಕೆ ಎಂದು ಗುರುತಿಸಲಾಗಿದೆ. ನವೆಂಬರ್​ 13ರಂದು ಈ ಘಟನೆ ಸಂಭವಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಸುಮಂತ್​ ಕೈಲಿದ್ದ ಮೊಬೈಲ್​ ಹಾಳಾಗಿತ್ತು. ರಿಪೇರಿ ಮಾಡಿಸುವ ಬದಲು ಹೊಸ ಮೊಬೈಲ್​ ತೆಗೆದುಕೊಳ್ಳುವ ಆಲೋಚನೆ ಸುಮಂತ್‌ಗೆ ಇತ್ತು. ಇದಕ್ಕೆ ಅಮ್ಮ ಸುರೇಖಾ ಸಧ್ಯ ಆಗುವುದಿಲ್ಲ. ಮುಂದಿನ ತಿಂಗಳು ನೋಡೋಣ ಎಂದು ಹೇಳಿದ್ದರಂತೆ. ಆದರೆ ಪಟ್ಟು ಬಿಡದ ಸುಮಂತ್​ ಮನೆ ಬಿಟ್ಟು ತೆರಳಿದ್ದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇದನ್ನೂ ಓದಿ: ಬಿ.ಸಿ ರೋಡಿನಲ್ಲಿ ಯಮನ ಅಟ್ಟಹಾಸ: ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ಬರುತ್ತಿದ್ದವರು ಬಾರದ ಲೋಕಕ್ಕೆ

ಅಂದಹಾಗೆ ಸುಮಂತ್ ತಂದೆ ಕೂಡ ಇದೇ ರೀತಿ ಆತ್ಮಹತ್ಯೆ ಮೂಲಕವೇ ಜೀವ ಕಳೆದುಕೊಂಡಿದ್ದರು. ಇದಾದ ಬಳಿಕ ತಮ್ಮ ಏಕೈಕ ಪುತ್ರ ಸುಮಂತ್​ ಜೊತೆಯಲ್ಲಿ ತಾಯಿ ಸುರೇಖಾ ವಾಸವಿದ್ದರು. ಇದೀಗ ಮಗ ಕೂಡ ತಂದೆಯ ಹಾದಿಯನ್ನೇ ತುಳಿದಿದ್ದು ಸುರೇಖಾ ಜೀವನ ದುಃಖದ ಕಡಲಿನಲ್ಲಿ ಮುಳುಗಿದೆ

Exit mobile version