ಬೆಂಗಳೂರಿನ ಬಟ್ಟೆ ಅಂಗಡಿಯೊಂದರಲ್ಲಿ ಮಹಿಳೆಯರ ಟ್ರಯಲ್ ರೂಮಿನಲ್ಲಿ ಕ್ಯಾಮರಾ ಅಳವಡಿಸಿದ ಪ್ರಕರಣ ಸಂಬಂಧ ರಾಜ್ಯ ಹೈಕೋರ್ಟ್ ತೀವ್ರ ಬೇಸರ ಹೊರಹಾಕಿದೆ. ಅಂಗಡಿ ಮಾಲೀಕನೇ ಮಹಿಳೆಯರ ಖಾಸಗಿ ಫೊಟೋ ತೆಗೆಯುತ್ತಾನೆ ಎಂದರೆ ಬೆಂಗಳೂರಿನ ಮಹಿಳೆಯರು ಎಷ್ಟು ಸುರಕ್ಷಿತವಾಗಿದ್ದಾರೆ? ಎಂದು ಪ್ರಶ್ನಿಸಿದ ಹೈಕೋರ್ಟ್ ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಬೆಂಗಳೂರು ಪೊಲೀಸರ ನಡೆ ಕುರಿತು ಅಸಮಾಧಾನ ಹೊರ ಹಾಕಿದೆ.
ಈ ಪ್ರಕರಣದ ಪ್ರಮುಖ ಆರೋಪಿ ದೊಡ್ಡಮಾವಳ್ಳಿಯ ಲಾಲ್ಬಾಗ್ ಕೋಟೆ ರಸ್ತೆಯ ಫೈಸಲ್ ಉಲ್ಲಾಷರೀಫ್ ತನ್ನ ಮೇಲಿನ ಕ್ರಿಮಿನಲ್ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಕೈಗೆತ್ತಿಕೊಂಡಿತ್ತು.
ಇದನ್ನೂ ಓದಿ: ಅನಂತಪದ್ಮನಾಭ ದೇಗುಲದ ಆಡಳಿತಾಧಿಕಾರಿ ನೇಮಕ : ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಬಟ್ಟೆ ಅಂಗಡಿ ಮಾಲೀಕ ಎಸಗಿರುವ ಕೃತ್ಯ ಸರಿ ಇದೆಯೇ? ಬಟ್ಟೆ ಅಂಗಡಿ ಮಾಲೀಕರೇ ಈ ಕೃತ್ಯ ಎಸಗಿದರೆ ಯಾವ ಮಹಿಳೆಗೆ ಸುರಕ್ಷತೆ ಸಿಗಲು ಸಾಧ್ಯ? ಇಂಥವರಿಗೆ ಸರಿಯಾದ ಪಾಠವನ್ನು ನ್ಯಾಯಾಂಗ ಕಲಿಸಬೇಕು ಎಂದು ಹೇಳಿದ್ದಾರೆ.
