ಬುರುಡೆ ಪ್ರಕರಣಕ್ಕೆ ಮೇಜರ್​ ಟ್ವಿಸ್ಟ್​ : ಬುರುಡೆ ಜೊತೆ ರಾತ್ರಿ ಕಳೆದಿದ್ದರಂತೆ ಸುಜಾತಾ ಭಟ್​..!

ಧರ್ಮಸ್ಥಳ ಶ್ರೀ ಕ್ಷೇತ್ರದ ಹೆಸರಿಗೆ ಮಸಿ ಬಳಿಯಲು ಮುಂದಾದ ಬುರುಡೆ ಗ್ಯಾಂಗ್​ನ ಅಸಲಿಯತ್ತು ಸಮಾಜದ ಮುಂದೆ ಬಯಲಾಗಿದ್ದು ತಲೆ ಎತ್ತದ ಸ್ಥಿತಿ ತಂದುಕೊಂಡಿದ್ದಾರೆ. ಈ ನಡುವೆ ಈ ಬುರುಡೆ ಪ್ರಕರಣದ ಕುರಿತಂತೆ ಮತ್ತೊಂದು ಮಹತ್ವದ ಮಾಹಿತಿ ಹೊರ ಬಿದ್ದಿದೆ. ಈ ಬುರುಡೆ ಪ್ರಕರಣದ ಸಂಚನ್ನು ಹೆಣೆಯಲು ಈ ಗ್ಯಾಂಗ್​ನ ಸದಸ್ಯರಾದ ಗಿರೀಶ್​ ಮಟ್ಟಣನವರ್​, ಜಯಂತ್ ಟಿ , ಚಿನ್ನಯ್ಯ ಹಾಗೂ ಸುಜಾತಾ ಭಟ್​ ದೆಹಲಿಯಲ್ಲಿ ಸೇರಿದ್ದರು. ಈ ವೇಳೆ ಸುಜಾತಾ ಭಟ್​ ಅವರಿಗೆ ಅರಿವಿಲ್ಲದಂತೆ ಬುರುಡೆಯೊಂದಿಗೆ ರೂಮ್ ಶೇರ್​ ಮಾಡಿದ್ದಾರೆ..!
ದೆಹಲಿಯ ವಿಠ್ಠಲ ಮಂದಿರದಲ್ಲಿ ಈ ನಾಲ್ವರು ರೂಮ್​ ಮಾಡಿ ತಂಗಿದ್ದರು. ಈ ವೇಳೆ ಗಿರೀಶ್ ಮಟ್ಟಣವರ್​,, ಜಯಂತ್​ ಟಿ ಹಾಗೂ ಚಿನ್ನಯ್ಯ ಒಂದು ರೂಮಿನಲ್ಲಿ ವಾಸಗಿದ್ದರೆ ಸುಜಾತಾ ಭಟ್​ಗೆ ಪ್ರತ್ಯೇಕ ರೂಮು ನೀಡಲಾಗಿತ್ತು. ಈ ವೇಲೆ ಸುಜಾತಾ ಭಟ್​ ತಂಗಿದ್ದ ರೂಮಿನಲ್ಲಿದ್ದ ಮಂಚದ ಕೆಳಗೆ ಜಯಂತ್​ ಟಿ ಈ ಬುರುಡೆಯಿದ್ದ ಬಾಕ್ಸ್​ ಇಟ್ಟಿದ್ದರು ಎನ್ನಲಾಗಿದೆ.

ಬಾಕ್ಸ್​ ಒಳಗೆ ಏನಿದೆ ಎಂದು ಸುಜಾತಾ ಜಯಂತ್​ ಟಿ . ಬಳಿ ಕೇಳಿದ್ದರು ಎನ್ನಲಾಗಿದೆ. ಆದರೆ ಅದರಲ್ಲಿ ಏನಿಲ್ಲ ಎಂದು ಜಯಂತ್​ ಟಿ. ಹಾರಿಕೆಯ ಉತ್ತರ ನೀಡಿದ್ದರು. ಇದನ್ನೇ ನಂಬಿಕೊಂಡಿದ್ದ ಸುಜಾತಾ ಮಂಚದ ಕೆಳಗೊಂದು ಬುರುಡೆಯಿದೆ ಎಂಬುದನ್ನು ಅರಿಯದೇ ಆ ರೂಮಿನಲ್ಲಿ ಮಲಗಿದ್ದರು ಎನ್ನಲಾಗಿದೆ. ಬುರುಡೆ ಇರುವ ವಿಚಾರವೇ ಇಲ್ಲದೇ ಸುಜಾತಾ ನೆಮ್ಮದಿಯಾಗಿ ಮಲಗಿದ್ರೆ ಇತ್ತ ಜಯಂತ್​ಗೆ ರಾತ್ರಿಯೆಲ್ಲ ಕೆಟ್ಟ ಕನಸು ಬೀಳುತ್ತಿತ್ತಂತೆ..! ಈ ಬಗ್ಗೆ ಎಸ್​ಐಟಿ ಅಧಿಕಾರಿಗಳ ಎದುರು ಜಯಂತ್​ ಹೇಳಿಕೆ ದಾಖಲಿಸಿದ್ದಾರೆ.

ಇದನ್ನೂ ಓದಿ: ಕೊಡಲಿಯಿಂದ ಗಂಡನನ್ನು 26 ಬಾರಿ ಕಡಿದು ಕೊಂದ ಹೆಂಡತಿ! ಅಡಗಿಕೊಂಡು ಬಚಾವಾದ ಮಗು

ಇನ್ನು ಎಸ್​ಐಟಿ ವರದಿಯಲ್ಲಿ ಮಹೇಶ್​ ಶೆಟ್ಟಿ ತಿಮರೋಡಿ ಆಪ್ತ ಗಣೇಶ್​ ಶೆಟ್ಟಿ ಹೇಳಿಕೆ ಕೂಡ ದಾಖಲಾಗಿದೆ. ಗಿರೀಶ್​ ಶೆಟ್ಟಿ ಮಟ್ಟಣ್ಣವರ್​ ಇವರೆಲ್ಲರ ಬಳಿಕ ಬುರುಡೆ ಹಾಗೂ ಮಣ್ಣನ್ನು ನಾನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದ್ದೇನೆ. ಇದು ಹುಡುಗಿಯ ತಲೆಬುರುಡೆ ಎಂದು ಹೇಳಿದ್ದರಂತೆ. ತಿಮರೋಡಿ ಮನೆಯಲ್ಲಿಯೇ ಬುರುಡೆಯನ್ನು ಇರಿಸಲಾಗಿತ್ತು. ಆದರೆ ಈ ವಿಚಾರ ಮಹೇಶ್​ ಶೆಟ್ಟಿ ತಿಮರೋಡಿ ಪತ್ನಿಗೆ ತಿಳಿದಿರಲಿಲ್ಲ ಎಂದು ತನಿಖೆಯ ವೇಳೆ ಗಣೇಶ್​ ಶೆಟ್ಟಿ ಹೇಳಿಕೆ ದಾಖಲಿಸಿದ್ದಾರೆ .

Exit mobile version