ವಯಸ್ಸಿನ ವಿಚಾರದಲ್ಲಿ ಸುಳ್ಳು ಹೇಳಿದ್ರಾ ವೈಭವ್ ಸೂರ್ಯವಂಶಿ : ಅನುಮಾನ ಹುಟ್ಟಿಸಿದ ಯುವ ಬ್ಯಾಟರ್​ ಹಳೆಯ ವಿಡಿಯೋ

ಈ ಕ್ರಿಕೆಟ್​ ತಾರೆಯ ಹಳೆಯ ವಿಡಿಯೋವೊಂದು ವೈರಲ್​ ಆಗಿದ್ದು, ವೈಭವ್​ ಸೂರ್ಯವಂಶಿ ಅವರ ನಿಜವಾದ ವಯಸ್ಸೆಷ್ಟು ಎಂಬ ಅನುಮಾನ ಮೂಡಿಸಿದೆ.

ಭಾರತೀಯ ಕ್ರಿಕೆಟ್​ ರಂಗದ ಭರವಸೆಯ ಆಟಗಾರ, ಐಪಿಎಲ್​ ಹಾಗೂ ಅಂಡರ್​ 19 ಪಂದ್ಯಗಳಲ್ಲಿ ದಾಖಲೆಯ ಮೇಲೆ ದಾಖಲೆ ಬರೆಯುತ್ತಿರುವ ಕ್ರಿಕೆಟಿಗ ವೈಭವ್​ ಸೂರ್ಯವಂಶಿ (Vaibhav Suryavanshi age) ಇದೀಗ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಈ ಕ್ರಿಕೆಟ್​ ತಾರೆಯ ಹಳೆಯ ವಿಡಿಯೋವೊಂದು ವೈರಲ್​ ಆಗಿದ್ದು, ವೈಭವ್​ ಸೂರ್ಯವಂಶಿ ಅವರ ನಿಜವಾದ ವಯಸ್ಸೆಷ್ಟು ಎಂಬ ಅನುಮಾನ ಮೂಡಿಸಿದೆ.

ಇಂಟರ್ನೆಟ್​ನಲ್ಲಿ ಸಖತ್​ ವೈರಲ್​ ಆಗಿರುವ ಈ ವಿಡಿಯೋ 2020ನೇ ಇಸ್ವಿಯದ್ದು. ಈ ವಿಡಿಯೋದಲ್ಲಿ ಕ್ರಿಕೆಟಿಗ ವೈಭವ್​ ಸೂರ್ಯವಂಶಿ ತಮ್ಮ ವಯಸ್ಸು 12 ಎಂದು ಹೇಳಿಕೊಂಡಿದ್ದಾರೆ. ಈ ಲೆಕ್ಕಾಚಾರದ ಪ್ರಕಾರ , ಪ್ರಸ್ತುತ ವೈಭವ್​ ಸೂರ್ಯವಂಶಿ ಅವರ ವಯಸ್ಸು 18 ತುಂಬಿರಬೇಕು. ಆದರೆ ಅಧಿಕೃತ ದಾಖಲೆಗಳಲ್ಲಿ ವೈಭವ್​ ವಯಸ್ಸು ಕಡಿಮೆ ಇರುವುದು ಅನುಮಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: RCB ಹಣೆಬರಹ ಬದಲಿಸಿದ ಬಿರ್ಲಾ ಎಂಟ್ರಿ : IPL 2027ಕ್ಕೆ ಆರ್‌ಸಿಬಿಗೆ ಹೊಸ ಹೆಸರು ?

ಕೇವಲ ಇದು ಮಾತ್ರವಲ್ಲ, ವೈಭವ್​ ಸೂರ್ಯವಂಶಿ ವಯಸ್ಸಿಗೆ ಸಂಬಂಧಿಸಿದ ಅನೇಕ ಹಳೆಯ ವಿಡಿಯೋಗಳು ವೈರಲ್​ ಆಗುತ್ತಲೇ ಇವೆ. ಒಂದೊಂದು ವಿಡಿಯೋಗಳಲ್ಲಿ ವೈಭವ್​ ವಯಸ್ಸಿನ ಕುರಿತಂತೆ ಒಂದೊಂದು ರೀತಿಯ ಮಾಹಿತಿ ಇದೆ. ಹೀಗಾಗಿ ಯಾವುದನ್ನು ನಂಬುವುದು ಯಾವುದನ್ನು ಬಿಡುವುದು ಎಂಬುದೇ ಸದ್ಯದ ಗೊಂದಲವಾಗಿ ಮಾರ್ಪಟ್ಟಿದೆ.

Exit mobile version