ಬಾಯ್ಕಾಟ್​ ನಿರ್ಧಾರ ಹಿಂಪಡೆದ ಪಾಕ್​ : ಭಾರತದೊಂದಿಗೆ ಕ್ರಿಕೆಟ್​ ಪಂದ್ಯವಾಡಲು ನಿರ್ಧಾರ

Pakistan withdraws boycott decision: ಬಾಂಗ್ಲಾ ದೇಶಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಫೆಬ್ರವರಿ 15ರಂದು ಭಾರತದೊಂದಿಗಿನ ಪಂದ್ಯಕ್ಕೆ ನಿಷೇಧ ಹೇರಿದ್ದ ಪಾಕಿಸ್ತಾನ ಇದೀಗ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಪಾಕಿಸ್ತಾನದ ಮನವೊಲಿಸುವಲ್ಲಿ ಪಿಸಿಬಿ ಯಶಸ್ವಿಯಾಗಿದ್ದು ಭಾರತದೊಂದಿಗೆ ಪಂದ್ಯ ಆಡಲು ನಾವು ಸಿದ್ಧ ಎಂದು ಘೋಷಣೆ ಮಾಡಿದೆ. ಹೀಗಾಗಿ ಫೆಬ್ರವರಿ 15ರಂದು ಕ್ರಿಕೆಟ್​ ಅಭಿಮಾನಿಗಳು ಹೈ ವೋಲ್ಟೇಜ್​ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ.

ಬಾಂಗ್ಲಾದೇಶದ ಪಂದ್ಯಗಳನ್ನು ಶ್ರೀಲಂಕಾಕ್ಕೆ ವರ್ಗಾಯಿಸಬೇಕು ಎಂದು ಬಾಂಗ್ಲಾ ಬೇಡಿಕೆ ಇಟ್ಟಿತ್ತು. ಆದರೆ ಇದನ್ನು ಐಸಿಸಿ ತಿರಸ್ಕರಿಸಿತ್ತು. ಭಾರತದಲ್ಲಿ ಪಂದ್ಯವನ್ನಾಡಲು ತಯಾರಿಲ್ಲದ ಬಾಂಗ್ಲಾವನ್ನು ಐಸಿಸಿ ಟಿ 20 ಟೂರ್ನಿಯಿಂದ ಹೊರಗಿಟ್ಟು ಸ್ಕಾಟ್ಲೆಂಡ್​ ದೇಶಕ್ಕೆ ಅವಕಾಶ ನೀಡಲಾಗಿತ್ತು. ಇದರಿಂದ ಬಾಂಗ್ಲಾ ದೇಶಕ್ಕೆ ಅನ್ಯಾಯವಾಗಿದೆ ಎಂದು ದೂರಿದ ಪಾಕಿಸ್ತಾನ ಪಾಕಿಸ್ತಾನದ ಭಾರತದ ವಿರುದ್ಧದ ಪಂದ್ಯವನ್ನು ಬಾಯ್ಕಾಟ್​ ಮಾಡುವುದಾಗಿ ಹೇಳಿಕೊಂಡಿತ್ತು.

Also Read: ಬಿಸಿಸಿಐ ವಾರ್ಷಿಕ ಗುತ್ತಿಗೆ : ರೋಹಿತ್‌ ಶರ್ಮಾ, ವಿರಾಟ್ ಕೊಹ್ಲಿಗೆ ಹಿಂಬಡ್ತಿ

ಭಾರತ(India) ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಅತ್ಯಂತ ಹೆಚ್ಚಿನ ಆದಾಯವನ್ನು ಐಸಿಸಿಗೆ ನೀಡುವಂತಹ ಪಂದ್ಯ. ಹೀಗಾಗಿ ಪಾಕಿಸ್ತಾನದ ಮನವೊಲಿಸುವುದು ಐಸಿಸಿಗೆ ಅನಿವಾರ್ಯವಾಗಿತ್ತು. ಅಲ್ಲದೆ ಈ ಪಂದ್ಯದ ಆತಿಥ್ಯ ವಹಿಸಿರುವ ಶ್ರೀಲಂಕಾ ಕೂಡ ಪಾಕಿಸ್ತಾನದ ನಿರ್ಧಾರ ಬದಲಿಸುವ ತವಕದಲ್ಲಿತ್ತು. ಹೀಗಾಗಿ ಪಂದ್ಯ ಬಹಿಷ್ಕಾರದಿಂದ ಪಿಸಿಬಿ ಮೇಲೆ ಭಾರೀ ಮೊತ್ತದ ದಂಡ ಎದುರಾಗುವ ಬಗ್ಗೆ ಐಸಿಸಿ ಎಚ್ಚರಿಕೆ ನೀಡಿತ್ತು.

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯುವುದು ಇದೀಗ ಖಚಿತವಾಗಿದೆ. ಮುಂದಿನ ಭಾನುವಾರದಂದು ಕೊಲಂಬೋದ ಆರ್​. ಪ್ರೇಮದಾಸ ಸ್ಟೇಡಿಯಂನಲ್ಲಿ ಇಂಡೋ – ಪಾಕ್​ ಮುಖಾಮುಖಿಯಾಗಿ ಸೆಣೆಸಲಿವೆ. ಈ ಪಂದ್ಯ ವೀಕ್ಷಣೆಗಾಗಿ ಭಾರತೀಯ ಕ್ರಿಕೆಟ್​ ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ.

Exit mobile version