IPL 2026 RCB vs SRH : ಚಿನ್ನಸ್ವಾಮಿಯಲ್ಲಿ ಇಂದು ಹೈ-ವೋಲ್ಟೇಜ್ ಕದನ; ಆರ್‌ಸಿಬಿ vs ಎಸ್‌ಆರ್‌ಎಚ್ ಮುಖಾಮುಖಿಯಲ್ಲಿ ಯಾರ ಕೈ ಮೇಲು ? ಪಿಚ್ ವರದಿ ಇಲ್ಲಿದೆ

ಇಂಡಿಯನ್ ಪ್ರೀಮಿಯರ್ ಲೀಗ್ (IPL) 19ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗುತ್ತಿವೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವು ಹಲವು ಕುತೂಹಲಗಳಿಗೆ ಕಾರಣವಾಗಿದೆ.

RCB vs SRH IPL 2026‌ : ಬೆಂಗಳೂರು : ಐಪಿಎಲ್‌ ಪ್ರಿಯರ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL) 19ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗುತ್ತಿವೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವು ಹಲವು ಕುತೂಹಲಗಳಿಗೆ ಕಾರಣವಾಗಿದೆ.

RCB vs SRH : ಇಂದಿನ ಪಂದ್ಯದ ವಿಶೇಷತೆಗಳು (Special Highlights)

RCB vs SRH : ಏನು ಹೇಳುತ್ತೆ ಪಿಚ್ ರಿಪೋರ್ಟ್: ಚಿನ್ನಸ್ವಾಮಿಯಲ್ಲಿ ರನ್ ಮಳೆ ಗ್ಯಾರಂಟಿ ? (Pitch Report)

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವು ಯಾವಾಗಲೂ ಬ್ಯಾಟ್ಸ್ ಮನ್‌ಗಳ ಪಾಲಿಗೆ ಸ್ವರ್ಗ. ಅತೀ ಹೆಚ್ಚು ರನ್‌ ದಾಖಲಾಗಿದ್ದು, ಮಾತ್ರವಲ್ಲ ಕನಿಷ್ಠ ಮೊತ್ತಕ್ಕೆ ಕೂಡ ತಂಡಗಳು ಆಲೌಟ್‌ ಆಗಿರುವ ದಾಖಲೆಯನ್ನೂ ಹೊಂದಿದೆ.

ಮೈದಾನದ ಗರಿಷ್ಠ ಮತ್ತು ಕನಿಷ್ಠ ಸ್ಕೋರ್ ದಾಖಲೆಗಳು

ಚಿನ್ನಸ್ವಾಮಿ ಮೈದಾನವು ಐಪಿಎಲ್ ಇತಿಹಾಸದ ಅತ್ಯಂತ ದೊಡ್ಡ ಮತ್ತು ಅತ್ಯಂತ ಕಡಿಮೆ ಸ್ಕೋರ್‌ಗಳಿಗೆ ಸಾಕ್ಷಿಯಾಗಿದೆ.

Also Read : IPL 2026 : ಇಂದಿನಿಂದ ಶುರು ಐಪಿಎಲ್​ ಫೀವರ್​..! ಈ‌ ಬಾರಿ ಕಪ್ ನಮ್ದೇ ಅಂತಿದ್ದಾರೆ ಆರ್‌ಸಿಬಿ ಫ್ಯಾನ್ಸ್

ಮುಖಾಮುಖಿ ದಾಖಲೆ: ಯಾರು ಬಲಿಷ್ಠ? ( RCB vs SRH Head to Head)

ಇತಿಹಾಸವನ್ನು ಗಮನಿಸಿದರೆ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆರ್‌ಸಿಬಿ ವಿರುದ್ಧ ಅಲ್ಪ ಮುನ್ನಡೆ ಸಾಧಿಸಿದೆ.

ಆದರೆ, ಬೆಂಗಳೂರಿನ ಈ ಮೈದಾನದಲ್ಲಿ ನಡೆದ 8 ಪಂದ್ಯಗಳಲ್ಲಿ ಆರ್‌ಸಿಬಿ 5 ಬಾರಿ ಗೆದ್ದು ತನ್ನ ಪ್ರಾಬಲ್ಯ ಮೆರೆದಿದೆ.

Also Read : IPL 2026: ದಿನೇಶ್ ಕಾರ್ತಿಕ್ ಟೀಂ ಇಂಡಿಯಾದ ಮುಂದಿನ ಹೆಡ್ ಕೋಚ್ ?

RCB vs SRH : ಸಂಭಾವ್ಯ ತಂಡಗಳು (Playing XI)

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸಂಭಾವ್ಯ ತಂಡ RCB Playing XI : ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ (WK), ರಜತ್ ಪಾಟಿದಾರ್ (C), ದೇವದತ್ ಪಡಿಕ್ಕಲ್, ಟಿಮ್ ಡೇವಿಡ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಸುಯಶ್ ಶರ್ಮಾ, ವೆಂಕಟೇಶ್ ಅಯ್ಯರ್.

ಸನ್‌ರೈಸಸ್‌ ಹೈದ್ರಾಬಾದ್‌ ಸಂಭಾವ್ಯ ತಂಡ SRH Playing XI : ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (C/WK), ಹೆನ್ರಿಚ್ ಕ್ಲಾಸೆನ್, ಲಿಯಾಮ್ ಲಿವಿಂಗ್‌ಸ್ಟನ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಲ್ ಪಟೇಲ್, ಜಯದೇವ್ ಉನಾದ್ಕತ್, ಬ್ರೈಡನ್ ಕಾರ್ಸ್, ಜೀಶನ್ ಅನ್ಸಾರಿ, ಅನಿ ಕೇತ್ ವರ್ಮಾ.

ಪಂದ್ಯದ ಸಮಯ: ಇಂದು ರಾತ್ರಿ 7:30ಕ್ಕೆ ಆರಂಭವಾಗಲಿದೆ (ಟಾಸ್ ಸಂಜೆ 7:00ಕ್ಕೆ).

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಜಿಯೋ ಹಾಟ್‌ಸ್ಟಾರ್ (JioHotstar) ಆಪ್‌ನಲ್ಲಿ ಲೈವ್ ವೀಕ್ಷಿಸಬಹುದು.

ipl 2026 rcb vs srh match preview pitch report head to head kannada-news

Exit mobile version