ಮರುಜೀವ ಪಡೆಯಲು ಸಜ್ಜಾದ ಚಿನ್ನಸ್ವಾಮಿ ಕ್ರೀಡಾಂಗಣ : ರಾಜ್ಯ ರಾಜಧಾನಿ ಕ್ರಿಕೆಟ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್​

ಆರ್​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟ ಘಟನೆ ಇನ್ನೂ ಮಾಸಿಲ್ಲ. ಇದು ಚಿನ್ನಸ್ವಾಮಿ ಕ್ರೀಡಾಂಗಣದ ಇತಿಹಾಸಕ್ಕೆ ಬಹುದೊಡ್ಡ ಕಪ್ಪು ಚುಕ್ಕೆಯನ್ನಿಟ್ಟಿದೆ. ಈ ಘಟನೆ ಬಳಿಕ . ನಿವೃತ್ತ ನ್ಯಾ ಮೈಕಲ್ ಡಿ ಕುನ್ಹಾ ನೇತೃತ್ವದಲ್ಲಿ ಸಮಿತಿ ರಚಿಸಿ ಸರ್ಕಾರ ವರದಿ ಕೇಳಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದ 16 ಲೋಪಗಳನ್ನು ಗುರುತಿಸಿದ್ದ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
ಈ ವರದಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್​ ಪಂದ್ಯಾವಳಿಗೆ ಅನುಮತಿ ನೀಡದಂತೆ ಉಲ್ಲೇಖಿಸಲಾಗಿತ್ತು. ಸ್ಟೇಡಿಯಂನ ಗೇಟ್​ಗಳು ಚಿಕ್ಕದಾಗಿವೆ. ಅಗ್ನಿಶಾಮಕ ವಾಹನ, ಆ್ಯಂಬುಲೆನ್ಸ್ ಸಂಚಾರಕ್ಕೆ ಸ್ಟೇಡಿಯಂ ಸುತ್ತ ವ್ಯವಸ್ಥೆ ಇಲ್ಲ. ವಾಹನಗಳ ಪಾರ್ಕಿಂಗ್​ಗೆ ಸೂಕ್ತ ಅವಕಾಶ ಇಲ್ಲ. ಕ್ರೀಡಾಂಗಣದ ಒಳಭಾಗದಲ್ಲಿರುವ ಕಟ್ಟಡಗಳ ನಿರ್ಮಾಣ ಸಂದರ್ಭದಲ್ಲಿ ಸೆಟ್​ಬ್ಯಾಕ್​ ಜಾಗ ನೀಡಿಲ್ಲ. ತುರ್ತು ನಿರ್ಗಮನ ವ್ಯವಸ್ಥೆ ಎಲ್ಲಿಯೂ ಇಲ್ಲ. ಸ್ಟೇಡಿಯಂ ತಡೆಗೋಡೆ ಕೂಡ ಅವೈಜ್ಞಾನಿಕ ಹೀಗೆ ನಾನಾ ಕಾರಣಗಳನ್ನು ಈ ವರದಿಯಲ್ಲಿ ನೀಡಲಾಗಿತ್ತು .

ಇದನ್ನೂ ಓದಿ: ಆರ್‌ಸಿಬಿಗೆ ಹೊಸ ತವರು; ಬೆಂಗಳೂರಲ್ಲಿ ಆಡುವುದು ಅನುಮಾನ

ಇದೀಗ ವರದಿಯಲ್ಲಿ ಉಲ್ಲೇಖಿಸಲಾದ ಎಲ್ಲಾ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು KSCA ನಿರ್ಧರಿಸಿದೆ. ಸದ್ಯದಲ್ಲಿಯೇ ಎಲ್ಲಾ ಲೋಪದೋಷಗಳು ಸರಿಯಾಗಲಿದ್ದು ಮತ್ತೊಮ್ಮೆ ಚಿನ್ನಸ್ವಾಮಿಯಲ್ಲಿ ಕ್ರಿಕೆಟ್​ ರಂಗೇರುವುದು ಪಕ್ಕಾ ಎನ್ನಲಾಗಿದೆ.

Exit mobile version