ಸಿಸಿಎಲ್​ ಪಂದ್ಯಾವಳಿಗೆ ತೆರೆ : 12 ವರ್ಷಗಳ ಬಳಿಕ ಕರ್ನಾಟಕ ಬುಲ್ಡೋಜರ್ಸ್​ಗೆ ಚಾಂಪಿಯನ್​ ಪಟ್ಟ

ವಿವಿಧ ಚಿತ್ರರಂಗದವರು ಒಟ್ಟಾಗಿ ಆಡುವ ಸೆಲೆಬ್ರಿಟಿ ಕ್ರಿಕೇಟ್​ ಲೀಗ್​ಗೆ ಅದ್ಧೂರಿ ತೆರೆ ಬಿದ್ದಿದೆ. ಕೊಯಮತ್ತೂರಿನಲ್ಲಿ ನಡೆದ ಫೈನಲ್​ ಪಂದ್ಯಾವಳಿಯಲ್ಲಿ ಬಂಗಾಳ ತಂಡದ ವಿರುದ್ಧ ಸೆಣೆಸಿದ ಕರ್ನಾಟಕ ಬುಲ್ಡೋಜರ್ಸ್​ ಗೆಲುವು ದಾಖಲಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಸತತ 12 ವರ್ಷಗಳ ಬಳಿಕ ಸುದೀಪ್​ ನೇತ್ವತ್ವದ ತಂಡ ಗೆಲುವು ದಾಖಲಿಸಿದಂತಾಗಿದೆ.
ಆರು ಬಾರಿ ಫೈನಲ್​ ಪ್ರವೇಶಿಸಿದ್ದರೂ ಕರ್ನಾಟಕ ಬುಲ್ಡೋಜರ್​ ತಂಡಕ್ಕೆ ಚಾಂಪಿಯನ್​ ಪಟ್ಟ ಅಲಂಕರಿಸಲು ಸಾಧ್ಯವಾಗಿರಲಿಲ್ಲ. ಈಗಾಗಲೇ 2 ಬಾರಿ ಚಾಂಪಿಯನ್​ ಆಗಿರುವ ಬುಲ್ಡೋಜರ್ಸ್​ ಕಳೆದ 12 ವರ್ಷಗಳಿಂದ ಮೂರನೇ ಗೆಲುವಿನ ಕಾತುರದಲ್ಲಿತ್ತು. ಇದೀಗ ಆ ಕನಸು ನನಸಾಗಿದೆ.

ಇದನ್ನೂ ಓದಿ: ಐಸಿಸಿ ಟಿ20 ವಿಶ್ವಕಪ್​ : ಭಾರತದೊಂದಿಗಿನ ಪಂದ್ಯ ಬಹಿಷ್ಕರಿಸಿದ ಪಾಕಿಸ್ತಾನ

ಫೈನಲ್​ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಬೆಂಗಾಲ್​ ಟೈಗರ್ಸ್ ತಂಡ ಕರ್ನಾಟಕದ ಬೌಲಿಂಗ್​ ದಾಳಿಗೆ ತತ್ತರಿಸಿ ಹೋಗಿತ್ತು. 20 ಓವರ್​​ಗಳಲ್ಲಿ ಕೇವಲ 129 ರನ್​ಗಳನ್ನು ಕಲೆ ಹಾಕಲಷ್ಟೇ ಶಕ್ತವಾಗಿತ್ತು. ಈ ಸವಾಲು ಬೆನ್ನಟ್ಟಿದ್ದ ಕರ್ನಾಟಕ ಬುಲ್ಡೋಜರ್ಸ್ ತಂಡ ಕ್ಕೆ ರಾಜೀವ್​​ ಆಸರೆಯಾದರು. ರಾಜೀವ್​ ಔಟಾದ ಬಳಿಕ ತಂಡದ ಪ್ರದರ್ಶನ ಕೊಂಚ ನಿಧಾನಗತಿಯಲ್ಲಿ ಸಾಗಿತು.ಆದರೆ ಇದಾದ ಬಳಿಕ ಮತ್ತೆ ಮುನ್ನಡೆ ಸಾಧಿಸಿದ ಕರ್ನಾಟಕ ಬುಲ್ದೋಜರ್ಸ್​ ತಂಡ ಅಭೂತಪೂರ್ವ ಗೆಲುವು ದಾಖಲಿಸಿ ಚಾಂಪಿಯನ್​ ಆಗಿ ಹೊರಹೊಮ್ಮಿದೆ.

Exit mobile version