ಗೆಲುವಿನ ಸಂಭ್ರಮದ ಬೆನ್ನಲ್ಲೇ ಆರ್​ಸಿಬಿಗೆ ಬಿಗ್​ ಶಾಕ್​ : ಸ್ಟಾರ್​ ಆಟಗಾರ ಟಿಮ್​ ಡೇವಿಡ್​ಗೆ ನಿಷೇಧದ ಶಿಕ್ಷೆ

ಐಪಿಎಲ್​ ಚಾಂಪಿಯನ್​ ಟ್ರೋಫಿ ಗೆದ್ದು ಬೀಗುತ್ತಿರುವ ಆರ್​ಸಿಬಿ ತಂಡಕ್ಕೆ ಬಿಸಿಸಿಐ ಬಿಗ್​ಶಾಕ್​ ನೀಡಿದೆ. ಆರ್​ಸಿಬಿ ತಂಡದ ಸ್ಟಾರ್​ ಆಟಗಾರ ಟಿಮ್​ ಡೇವಿಡ್​ಗೆ ಬಿಸಿಸಿಐ ಒಂದು ಪಂದ್ಯದಿಂದ ನಿಷೇಧ ಹೇರಿದೆ. ಹೀಗಾಗಿ ಮುಂದಿನ ಆವೃತ್ತಿಯ ಐಪಿಎಲ್​ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಆರ್​ಸಿಬಿ ತಂಡದಿಂದ ಟಿಮ್​ ಡೇವಿಡ್​ ಕಣಕ್ಕಿಳಿಯುವುದರಿಂದ ವಂಚಿತರಾಗಿದ್ದಾರೆ.

ಐಪಿಎಲ್​ ಚಾಂಪಿಯನ್​ ಟ್ರೋಫಿ ಗೆದ್ದು ಬೀಗುತ್ತಿರುವ ಆರ್​ಸಿಬಿ ತಂಡಕ್ಕೆ ಬಿಸಿಸಿಐ ಬಿಗ್​ಶಾಕ್​ ನೀಡಿದೆ. ಆರ್​ಸಿಬಿ ತಂಡದ ಸ್ಟಾರ್​ ಆಟಗಾರ ಟಿಮ್​ ಡೇವಿಡ್​ಗೆ ಬಿಸಿಸಿಐ ಒಂದು ಪಂದ್ಯದಿಂದ ನಿಷೇಧ ಹೇರಿದೆ. ಹೀಗಾಗಿ ಮುಂದಿನ ಆವೃತ್ತಿಯ ಐಪಿಎಲ್​ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಆರ್​ಸಿಬಿ ತಂಡದಿಂದ ಟಿಮ್​ ಡೇವಿಡ್​ ಕಣಕ್ಕಿಳಿಯುವುದರಿಂದ ವಂಚಿತರಾಗಿದ್ದಾರೆ. ಇದರ ಜೊತೆಯಲ್ಲಿ ಪಂದ್ಯದ ಶುಲ್ಕದಲ್ಲಿಯೂ ಕಡಿತ ಮಾಡಲಾಗಿದ್ದು,2 ಡಿಮರಿಟ್​ ಅಂಕಗಳನ್ನು ಬಿಸಿಸಿಐ ನೀಡಿದೆ.

ಈ ಎಲ್ಲಾ ಕಠಿಣ ಕ್ರಮಗಳನ್ನು ಬಿಸಿಸಿಐ ಟಿಮ್​ ಡೇವಿಡ್​ ಮೇಲೆ ಹೇರುವುದರ ಹಿಂದೆ ಕಾರಣ ಕೂಡ ಬಲವಾಗಿಯೇ ಇದೆ. ಗುಜರಾತ್​ ಟೈಟನ್ಸ್​ ವಿರುದ್ಧ ಫೈನಲ್​ ಕಾದಾಟದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಆನ್-ಫೀಲ್ಡ್ ಅಂಪೈರ್ ನಿತಿನ್ ಮೆನನ್ ಮೇಲೆ ಟಿಮ್​ ಡೇವಿಡ್​ ಕೋಪದಿಂದ ಐಸ್ ಪ್ಯಾಕ್ ಎಸೆದಿದ್ದರು. ಪಂದ್ಯದ 10ನೇ ಓವರ್‌ನಲ್ಲಿ ವಿಕೆಟ್ ಪತನದ ಬಳಿಕ ಟಿಮ್ ಡೇವಿಡ್ ಅಸಮಾಧಾನಗೊಂಡು ಆನ್-ಫೀಲ್ಡ್ ಅಂಪೈರ್ ನಿತಿನ್ ಮೆನನ್ ಅವರತ್ತ ಆಕ್ರಮಣಕಾರಿಯಾಗಿ ಐಸ್ ಬ್ಯಾಗ್ ಎಸೆದಿದ್ದರು.

ಟಿಮ್​ ಡೇವಿಡ್​ರ ಈ ವರ್ತನೆಯು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್​ನ ಉಲ್ಲಂಘನೆಯಾಗಿದೆ ಎಂದು ಪರಿಗಣಿಸಲಾಗಿದೆ. ಇದರ ಪ್ರಕಾರ ಪಂದ್ಯದ ವೇಳೆ ಅಂಪೈರ್, ಆಟಗಾರರು ಅಥವಾ ತಂಡದ ಅಧಿಕಾರಿಗಳ ಮೇಲೆ ಯಾವುದೇ ವಸ್ತುವನ್ನು ಅಪಾಯಕಾರಿ ರೀತಿಯಲ್ಲಿ ಎಸೆಯುವುದು ಅಪರಾಧವಾಗಿದೆ. ಈ ತಪ್ಪಿಗಾಗಿ ಟಿಮ್​ ಡೇವಿಡ್​ರ ಪಂದ್ಯದ ಶುಲ್ಕದಲ್ಲಿ ಶೇಕಡಾ50ರಷ್ಟು ದಂಡ ವಿಧಿಸಲಾಗಿದೆ .ಹಾಗೂ 2 ಡಿಮರಿಟ್​ ಅಂಕಗಳನ್ನು ನೀಡಲಾಗಿದೆ.

Also Read: ಗುಜರಾತ್​ ಟೈಟನ್ಸ್​ ವಿರುದ್ಧ ರಣರೋಚಕ ವಿಜಯ : ಸತತ 2ನೇ ಬಾರಿ ಕಪ್​ ಎತ್ತಿ ಹಿಡಿದ ಆರ್​ಸಿಬಿ

ಅಂದಹಾಗೆ ಈ ಸೀಸನ್‌ನಲ್ಲಿ ಇದು ಅವರ ಮೂರನೇ ತಪ್ಪಾಗಿದ್ದು, ಒಟ್ಟು 5 ಡಿಮರಿಟ್ ಅಂಕಗಳು ಅವರ ಖಾತೆಗೆ ಸೇರಿದವು. ಐಪಿಎಲ್ ನಿಯಮಾವಳಿ ಪ್ರಕಾರ 5 ಡಿಮರಿಟ್ ಅಂಕಗಳಾದರೆ ಒಂದು ಪಂದ್ಯದ ನಿಷೇಧ ಎದುರಿಸಬೇಕಾಗುತ್ತದೆ. ಹೀಗಾಗಿ ಅವರು ಐಪಿಎಲ್ 2027ರ ಮೊದಲ ಪಂದ್ಯದಿಂದ ಅಮಾನತುಗೊಂಡಿದ್ದಾರೆ.

ಏಪ್ರಿಲ್​ 13ರಂದು ನಡೆದಿದ್ದ ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಡೇವಿಡ್, ಪಂದ್ಯದ ವೇಳೆ ಅಂಪೈರ್‌ಗಳು ಚೆಂಡನ್ನು (Ball) ಬದಲಾಯಿಸಿದಾಗ, ಟಿಮ್ ಡೇವಿಡ್ ಆ ಚೆಂಡನ್ನು ತಾನು ನೋಡಬೇಕೆಂದು ಹಠ ಹಿಡಿದು, ಅಂಪೈರ್‌ಗಳು ಪದೇ ಪದೇ ಕೇಳಿದರೂ ವಾಪಸ್ ನೀಡದೆ ತಮ್ಮ ಕೈಯಲ್ಲೇ ಹಿಡಿದು ಉದ್ಧಟತನ ತೋರಿದ್ದರು. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.4 ರ ಅಡಿಯಲ್ಲಿ ಅಂಪೈರ್ ಸೂಚನೆ ಪಾಲಿಸದ ಡೇವಿಡ್​ಗೆ ಪಂದ್ಯದ ಸಂಭಾವನೆಯ ಶೇ. 25 ರಷ್ಟು ದಂಡ ಮತ್ತು 1 ಡಿಮರಿಟ್ ಅಂಕ ವಿಧಿಸಲಾಗಿತ್ತು. ಇದಾದ ಬಳಿಕ ಮೇ 10ರಂದು ಮತ್ತೆ ಮುಂಬೈ ಇಂಡಿಯನ್ಸ್​ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಅಸಭ್ಯ ಹಾವಭಾವ ಪ್ರದರ್ಶಿಸಿದ್ದರು. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.6 ರ ಅಡಿಯಲ್ಲಿ ಪಂದ್ಯದ ಸಂಭಾವನೆಯ ಶೇ. 30 ರಷ್ಟು ದಂಡ ಮತ್ತು 2 ಡಿಮರಿಟ್ ಅಂಕಗಳನ್ನು ನೀಡಲಾಗಿತ್ತು.

Big shock for RCB after victory celebration Star player Tim David gets ban

Exit mobile version