ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈಟೆಕ್​ ಭದ್ರತೆ : ಕಾಲ್ತುಳಿತ ನಡೆದ ಸ್ಥಳದಲ್ಲಿ ಭವ್ಯ ಪ್ರವೇಶ ದ್ವಾರ

ಆರ್​ಸಿಬಿ ವಿಜಯೋತ್ಸವ ಕಾಲ್ತುಳಿತ ದುರಂತದ ಬಳಿಕ ಬೆಂಗಳೂರು ಚಿನ್ನಸ್ವಾಮಿ ನಾನಾ ಅಪವಾದಗಳನ್ನು ಎದುರಿಸುತ್ತಲೇ ಬರ್ತಿದೆ. ಈ ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆ ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದೆ.
ಆರ್​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದ್ದ ಗೇಟ್​ ಸಂಖ್ಯೆ 18 ಹಾಗೂ 10ರ ಬಳಿ ಇರುವ ಸಣ್ಣ ಗೋಡೆಗಳನ್ನು ಒಡೆಯಲಾಗುತ್ತಿದೆ. ಪ್ರವೇಶ ಹಾಗೂ ನಿರ್ಗಮನದ ಸಂದರ್ಭದಲ್ಲಿ ಯಾವುದೇ ತೊಂದರೆ ಸಂಭವಿಸದಂತೆ ವಿಶಾಲವಾದ ಜಾಗ ವ್ಯವಸ್ಥೆ ಹಾಗೂ ಬೃಹತ್​ ಗೇಟ್​ ಸೌಕರ್ಯ ಕಲ್ಪಿಸಲಾಗುತ್ತಿದೆ.
ಜನದಟ್ಟಣೆ ನಿಯಂತ್ರಣಕ್ಕೆ 4.5 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ 350 ಎಐ ಕ್ಯಾಮರಾಗಳನ್ನು ಕ್ರೀಡಾಂಗಣದ ಸುತ್ತ ಅಳವಡಿಸಲಾಗುತ್ತಿದೆ. ಭದ್ರತೆಯ ವಿಚಾರದಲ್ಲಿ ಪೊಲೀಸ್​ ಇಲಾಖೆಯ ಮೇಲೆ ಮಾತ್ರ ಅವಲಂಬಿತರಾಗಿರದೇ ಆರ್​ಸಿಬಿ ಫ್ರಾಂಚೈಸಿ ತನ್ನದೇ ಆದ ವಿಶೇಷ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಿದೆ.

ಇದನ್ನೂ ಓದಿ: ವಿಶ್ವದಾಖಲೆ ನಿರ್ಮಿಸಿದ ಕಿಂಗ್ ಕೊಹ್ಲಿ: ಕಿವೀಸ್ ವಿರುದ್ಧ ಅತಿ ಹೆಚ್ಚು ಶತಕ ಸಿಡಿಸಿದ ಮೊದಲ ಬ್ಯಾಟರ್!

ಆರ್​ಸಿಬಿ ದುರಂತದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳ ಆಯೋಜನೆಗೆ ನಿಷೇಧ ಹೇರಲಾಗಿತ್ತು. ಆದರೆ ಇದೀಗ ಈ ನಿಷೇಧವನ್ನು ರಾಜ್ಯ ಸರ್ಕಾರ ತೆರವುಗೊಳಿಸಿದ್ದು ಬಹುತೇಕ ಐಪಿಎಲ್​ ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಕ್ಕೆ KSCA​ ಮುಂದಾಗಿದೆ.

Exit mobile version