ಉಡುಪಿ : ಶಾಲಾ ಮಕ್ಕಳ ವಾಹನಗಳ ವಿರುದ್ದ ಪೊಲೀಸರ ವಾರ್ನಿಂಗ್‌, ಬಾರೀ ದಂಡ

ಉಡುಪಿ (udupi News ) : ಶಾಲಾ ವಾಹನಗಳು ಸಂಚಾರಿ ನಿಯಮ ಉಲ್ಲಂಘಿಸುತ್ತಿರುವ ಪ್ರಕರಣ ಹೆಚ್ಚುತ್ತಿರುವ ಬೆನ್ನಲ್ಲೇ ಉಡುಪಿ ಎಸ್‌ಪಿ ಹರಿರಾಂ ಜೈಶಂಕರ್‌ ಖಡಕ್‌ ಆದೇಶ ಹೊರಡಿಸಿದ್ದಾರೆ. ಇಂದು ಬೆಳ್ಳಂಬೆಳಗ್ಗೆಯೇ ಉಡುಪಿ ಜಿಲ್ಲೆಯ ಪೊಲೀಸರು ಜಿಲ್ಲೆಯಾದ್ಯಂತ ಶಾಲಾ ವಾಹನಗಳ ವಿರುದ್ದ ಕಾರ್ಯಾಚರಣೆ ನಡೆಸಿದ್ದು, ನಿಯಮ ಉಲ್ಲಂಘಿಸಿದವರಿಗೆ ದಂಡದ ಬಿಸಿ ಮುಟ್ಟಿಸಿದ್ದಾರೆ.

Image Credit : News Next Live

ಜೂನ್ 18 ರಂದು ಉಡುಪಿ ಜಿಲ್ಲೆಯ ಬ್ರಹ್ಮಾವರದ ಧರ್ಮಾವರ ಆಡಿಟೋರಿಯಂ ಬಳಿಯಲ್ಲಿ ಜಿಎಂ ವಿದ್ಯಾನಿಕೇತನ ಶಾಲೆಯ ಬಸ್‌ಗೆ ಲಾರಿ ಢಿಕ್ಕಿಯಾಗಿತ್ತು. ಅಪಘಾತದಲ್ಲಿ ಕೆಲವು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಈ ಪ್ರಕರಣದ ಬೆನ್ನಲ್ಲೇ ಉಡುಪಿ ಜಿಲ್ಲಾ ಪೊಲೀಸ್‌ ಇಲಾಖೆ ಎಚ್ಚೆತ್ತುಕೊಂಡಿದೆ. ಸಂಚಾರ ನಿಯಮ ಪಾಲನೆ ಮಾಡದ ವಾಹನಗಳ ವಿರುದ್ದ ಕ್ರಮಕೈಗೊಳ್ಳುವಂತೆ ಉಡುಪಿ ಎಸ್‌ಪಿ ಸೂಚನೆ ನೀಡಿದ್ದಾರೆ.

Also Read : ಬ್ರಹ್ಮಾವರ : ಖಾಸಗಿ ಶಾಲಾ ಬಸ್ಸಿಗೆ ಲಾರಿ ಢಿಕ್ಕಿ : ವಿದ್ಯಾರ್ಥಿಗಳಿಗೆ ಗಾಯ

ಪೊಲೀಸ್‌ ವರಿಷ್ಠಾಧಿಕಾರಿಗಳ ಸೂಚನೆಯ ಮೇರೆಗೆ ಉಡುಪಿ ಜಿಲ್ಲೆಯ 7 ತಾಲೂಕುಗಳಲ್ಲಿಯೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬೆಳ್ಳಂ ಬೆಳಗ್ಗೆಯೇ ಪೊಲೀಸರು ಶಾಲೆಗಳ ಮುಂದೆ ನಿಂತು, ಶಾಲೆಗಳಿಗೆ ಬರುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಿದ್ದಾರೆ. ಶಾಲೆ ಮಾತ್ರವಲ್ಲದೇ ಜಿಲ್ಲೆಯ ಪ್ರಮುಖ ಜಂಕ್ಷನ್‌ ರಸ್ತೆಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Image Credit : News Next Live

ಶಾಲಾ ವಿದ್ಯಾರ್ಥಿಗಳನ್ನು ಹೊತ್ತು ತರುವ ದ್ವಿಚಕ್ರ ವಾಹನ, ಆಟೋರಿಕ್ಷಾ, ಖಾಸಗಿ ವಾಹನ, ಸ್ಕೂಲ್ ಬಸ್ ಗಳನ್ನು ಪರಿಶೀಲಿಸಿದ್ದಾರೆ. ಅಗತ್ಯಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಬಂದಿರುವುದ ಕಂಡು ಬಂದಲ್ಲಿ ಅಂತಹ ವಾಹನಗಳ ವಿರುದ್ದ ಪ್ರಕರಣ ದಾಖಲು ಮಾಡಿದ್ದಾರೆ. ಅಲ್ಲದೇ ದ್ವಿಚಕ್ರ ವಾಹನದಲ್ಲಿ ಎರಡಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಕರೆತರುವವರಿಗೂ ವಾರ್ನಿಂಗ್‌ ಕೊಟ್ಟಿದ್ದಾರೆ.

Also Read : Post Office Recruitment 2025 : 10ನೇ ತರಗತಿ ಉತ್ತೀರ್ಣರಾದ್ರೆ ಅಂಚೆ ಇಲಾಖೆಯಲ್ಲಿ ಉದ್ಯೋಗ : 138 ಹುದ್ದೆ, 30 ಸಾವಿರ ವೇತನ

ಉಡುಪಿ ಜಿಲ್ಲೆಯಾದ್ಯಂತ ವಿಶೇಷ ಅಭಿಯಾನ – ಎಸ್‌ಪಿ ಹರಿರಾಂ ಜೈಶಂಕರ್‌

Image Credit : News Next Live

ವಿಶೇಷವಾಗಿ ಮಕ್ಕಳನ್ನು ಕರೆತರುವ, ವಿದ್ಯಾರ್ಥಿಗಳು ಪ್ರಯಾಣಿಸುವ ಶಾಲಾ ಬಸ್ಸು, ಖಾಸಗಿ ಬಸ್ಸು, ಆಟೋ ರಿಕ್ಷಾ, ಖಾಸಗಿ ವಾಹನಗಳ ಪರಿಶೀಲನೆಗೆ ವಿಶೇಷ ಅಭಿಯಾನವನ್ನೇ ಕೈಗೊಳ್ಳಲಾಗಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಫಿಟ್‌ನೆಟ್‌ ಪ್ರಮಾಣ ಪತ್ರ ಪರಿಶೀಲನೆ, ಓವರ್‌ ಲೋಡ್‌ ಸೇರಿದಂತೆ ಇತರ ಸಂಚಾರಿ ನಿಯಮಗಳ ಉಲ್ಲಂಘನೆಗಳನ್ನು ಪರಿಶೀಲಿಸಲಾಗುತ್ತದೆ. ವಿಶೇಷ ಅಭಿಯಾನ ಉಡುಪಿ ಜಿಲ್ಲೆಯಾದ್ಯಂತ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಂ ಜೈಶಂಕರ್‌ ಮಾಹಿತಿ ನೀಡಿದ್ದಾರೆ. ಎಂದು ಎಸ್ ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.

Udupi Police warning against school vehicles, Special campaign across Udupi district – SP Hariram Jaishankar

Exit mobile version