ರೇಣುಕಸ್ವಾಮಿ ಕೊಲೆ ಪ್ರಕರಣ : ಆರೋಪಿ ವಕೀಲರಿಗೆ ದಂಡ ವಿಧಿಸಿದ ನ್ಯಾಯಾಲಯ

ಪ್ರಕರಣದ ಮೂರನೇ ಆರೋಪಿ ಪವನ್​ ಪರ ವಕೀಲರಿಂದ ಕೋರ್ಟ್ ದಂಡ ಕೂಡ ವಿಧಿಸಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖಾಧಿಕಾರಿಗಳ ವಿರುದ್ಧವೇ ಗೂಬೆ ಕೂರಿಸಲು ಹೊರಟ ಆರೋಪಿ ಪರ ವಕೀಲರ ಕೋರ್ಟ್​ನ ನ್ಯಾಯಾಧೀಶರಿಂದ ಛೀಮಾರಿ ಹಾಕಿಸಿಕೊಂಡ ಪ್ರಸಂಗವೊಂದು ನಡೆದಿದೆ. ಪ್ರಕರಣದ ಮೂರನೇ ಆರೋಪಿ ಪವನ್​ ಪರ ವಕೀಲರಿಂದ ಕೋರ್ಟ್ ದಂಡ ಕೂಡ ವಿಧಿಸಿದೆ.

ಬೆಂಗಳೂರಿ 57ನೇ ಸಿಸಿಎಚ್​ ನ್ಯಾಯಾಲಯವು ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದೆ. ಈ ಪ್ರಕರಣದ ಆರೋಪಿ ಪವನ್​ ಪರ ವಕೀಲರು ತನಿಖಾಧಿಕಾರಿಗಳ ವಿರುದ್ಧವೇ ಆರೋಪ ಹೊರಿಸಿದ್ದರು. ಪೊಲೀಸರು ಆರೋಪಿಗಳ ಮೊಬೈಲ್​ ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಫೋಟೋದಲ್ಲಿನ ಟೈಲ್ಸ್​ ಬಣ್ಣ ಬದಲಾದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಪವನ್​ ಪರ ವಕೀಲರು ತನಿಖಾಧಿಕಾರಿ ಚಂದನ್​ ವಿರುದ್ಧ ಸಾಕ್ಷ್ಯ ತಿದ್ದಿರುವ ಆರೋಪ ಮಾಡಿದ್ದರು.
ಆದರೆ ಈ ಸಂಬಂಧ ವಾದ – ವಿವಾದ ಆಲಿಸಿದ ನ್ಯಾಯಾಧೀಶರು, ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ. ಅಲ್ಲದೇ ಕೋರ್ಟ್ನ ಅಮೂಲ್ಯ ಸಮಯ ವ್ಯರ್ಥ ಮಾಡಿದ ಪವನ್​ ಪರ ವಕೀಲರಿಗೆ ನ್ಯಾಯಾಧೀಶರು 5000 ರೂಪಾಯಿಗಳ ದಂಡ ವಿಧಿಸಿದ್ದಾರೆ. ಈ ಮೊತ್ತವನ್ನು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪವನ್ ಪರ ವಕೀಲರು ಪಾವತಿ ಮಾಡಬೇಕಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್: ನಟ ದರ್ಶನ್‌ಗೆ ಬಿಗ್ ರಿಲೀಫ್‌

ಇನ್ನು ಈ ನಡುವೆ ಜೈಲಿನ ಒಳಸಂದರ್ಶನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದ ಆರೋಪಿ ದರ್ಶನ್​ ಮನವಿಗೆ ಕೋರ್ಟ್ ಸಮ್ಮತಿ ಸೂಚಿಸಿದೆ. ಆದರೆ ಜೈಲು ಸೂಪರಿಟೆಂಡೆಂಟ್​ಗೆ ಅಂತಿಮ ಅಧಿಕಾರ ನೀಡಲಾಗಿದೆ. ಸೂಪರಿಟೆಂಡೆಂಟ್ ಅನುಮತಿ ನೀಡಿದರೆ ಮಾತ್ರ ಈ ಅವಕಾಶ ದರ್ಶನ್​ಗೆ ಸಿಗಲಿದೆ. ಭದ್ರತಾ ಕಾರಣ ನೀಡಿದ ಸೂಪರಿಟೆಂಡೆಂಟ್ ಅನುಮತಿ ನಿರಾಕರಿಸಿದರೆ ನ್ಯಾಯಾಲಯದ ಆದೇಶ ಮಾನ್ಯವಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ .

Exit mobile version