ಪ್ರಗತಿ ಕಂಡ ಕಾಂತಾರ ಚಾಪ್ಟರ್ 1: ಅಪರೂಪದ ಪೋಟೋ ಹಂಚಿಕೊಂಡ ರಿಶಬ್ ಪತ್ನಿ

Kantara Chapter 1: ಕಾಂತಾರ ಅಧ್ಯಾಯ‌ 1 ಸದ್ಯ ಸೋಷಿಯಲ್ ಮೀಡಿಯಾದಿಂದ ಆರಂಭಿಸಿ ಸಿನಿಮಾ ಜಗತ್ತಿನವರೆಗೆ ಎಲ್ಲವನ್ನೂ ಆವರಿಸಿಕೊಂಡಿದೆ. ಪ್ರತಿನಿತ್ಯ ಬಾಕ್ಸಾಫೀಸ್ ನಲ್ಲಿ ಕೋಟಿ ಕೋಟಿ ಗಳಿಸುತ್ತ ಸಾಗುತ್ತಿರುವ ಕಾಂತಾರ ಅಧ್ಯಾಯ 1 ದಲ್ಲಿ ರಿಶಬ್ ಶ್ರಮದಷ್ಟೇ ಶಕ್ತಿ ತುಂಬಿರೋದು ಸಿನಿಮಾದ ವಸ್ತ್ರವಿನ್ಯಾಸಕಿ ಪ್ರಗತಿ ಶೆಟ್ಟಿ. ತೆರೆಮರೆಯ ಕಾಯಿಯಂತೆ ಸಿನಿಮಾಕ್ಕೆ ಹೊಸಮೆರುಗು ನೀಡಿದ ಪ್ರಗತಿ ಶೆಟ್ಟಿ ತಮ್ಮ ಕಾಂತಾರ ಅಧ್ಯಾಯ 1(Kantara Chapter 1) ಚಿತ್ರೀಕರಣದ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸಾಮಾನ್ಯವಾಗಿ ಫ್ಯಾಮಿಲಿ ಪೋಟೋಗಳು ಹಾಗೂ ಮಕ್ಕಳ ವಿಡಿಯೋಗಳನ್ನೆ ಹಂಚಿಕೊಳ್ತಿದ್ದ ಪ್ರಗತಿ, ಇದೇ ಮೊದಲ ಬಾರಿಗೆ ತಮ್ಮ ಶ್ರಮಕ್ಕೆ ಸಾಕ್ಷಿ ಹೇಳುವಂತ ಪೋಟೋಗಳನ್ನು ಶೇರ್‌ಮಾಡಿದ್ದಾರೆ.

Also Read: Kantara Chapter 1: ಕನ್ನಡಿಗರಿಗೆ ಹೆಮ್ಮೆ ತಂದ ಕಾಂತಾರ ಅಧ್ಯಾಯ 1 : ರಾಷ್ಟ್ರಪತಿ ಭವನದಲ್ಲಿ ಪ್ರದರ್ಶನಗೊಳ್ಳಲಿದೆ ಸಿನಿಮಾ

ಸಿನಿಮಾದ ಮಾರುಮಟಗಡೆಯ ದೃಶ್ಯಾವಳಿಗಾಗಿ ರಾಜರ ಕಾಲದ ಮಾರುಕಟ್ಟೆ ಚಿತ್ರೀಕರಣ, ಸಾವಿರಾರು ಸಂಖ್ಯೆಯಲ್ಲಿರೋ ಮಹಿಳಾ ಸಹಕಲಾವಿದೆಯರ ಕಾಸ್ಟ್ಯೂಮ್, ನಟರಾಕ್ಷಸನಂತೆ‌ನಟಿಸಿರೋ ರಿಶಬ್ ಬಟ್ಟೆ, ಸಿನಿಮಾಕ್ಕೆ ಜೀವ ತುಂಬಿರೋ ಖಳನಟನ ಕಾಸ್ಟ್ಯೂಮ್ , ಸೆಟ್ ಹೀಗೆ ಎಲ್ಲ ಪ್ರಮುಖ ದೃಶ್ಯಾವಳಿಯಲ್ಲಿ ತಮ್ಮ ಶ್ರಮ ಇರೋದರ ಪೋಟೋಗಳನ್ನು ಪ್ರಗತಿ ಹಂಚಿಕೊಂಡಿದ್ದಾರೆ.

ಕಾಂತಾರ ಅಧ್ಯಾಯ 1 ಸುಂದರ ಜರ್ನಿಯ ಭಾಗವಾಗಿದ್ದು ನನ್ನ ಬದುಕಿನ ಮರೆಯಲಾಗದ ನೆನಪು ಎಂದಿರೋ ಪ್ರಗತಿ ಶೆಟ್ಟಿ, ಪುರಾತನವಾದ,ದೈವಿಕವಾದ ಕತೆಯೊಂದಕ್ಕಾಗಿ ನಾನು ವಸ್ತ್ರವಿನ್ಯಾಸಗೊಳಿಸಿದೆ ಎಂಬುದೇ ನನ್ನ ಪಾಲಿಗೆ ಧನ್ಯತೆಯ ಕ್ಷಣ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಇಂತಹದೊಂದು ಸಿನಿಮಾಕ್ಕೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದೆ ನನ್ನ ಪುಣ್ಯ ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ.

ಈ ಸಿನಿಮಾಕ್ಕಾಗಿ ಕಾಂತಾರಾ ಸಿನಿಮಾ ತಂಡ ಹಾಗೂ ಹೊಂಬಾಳೆ ಫಿಲ್ಮ್ಸ್ ಸಾಕಷ್ಟು ಶ್ರಮ ಹಾಕಿದೆ. ಕದಂಬರ ಕಾಲದ ಕತೆಯ ಎಳೆಯೊಂದನ್ನು ಇಟ್ಟುಕೊಂಡು ರಿಶಬ್ ಹೆಣೆದ ಕತೆಗೆ ಗ್ರ್ಯಾಂಡ್ ಕಾಸ್ಟ್ಯೂಮ್ ಮೂಲಕ ಜೀವ ತುಂಬಿದ್ದೆ ರಿಶಬ್ ಪತ್ನಿ ಪ್ರಗತಿ.

ಕುಂದಾಪುರದ ಬಳಿ 25 ಎಕರೆ ಪ್ರದೇಶದಲ್ಲಿ ಕಾಂತಾರ ಅಧ್ಯಾಯ 1 ಕ್ಕಾಗಿ ಸೆಟ್ ಹಾಕಲಾಗಿತ್ತು. ಬಹುತೇಕ ಕಾಡಿನಲ್ಲೇ ಸಿನಿಮಾ ಚಿತ್ರೀಕರಣ ನಡೆದಿತ್ತು. ರಿಶಬ್ ಪತ್ನಿ ಪ್ರಗತಿ ಈ ಸೆಟ್ ನಲ್ಲೇ ಬಿಡುಬಿಟ್ಟು ತಮ್ಮ ಸಂಪೂರ್ಣ ಶ್ರಮ ಹಾಕಿ ವಸ್ತ್ರಾಭರಣ ಸಿದ್ಧಪಡಿಸಿದ್ದರು.

ಈ ಬಗ್ಗೆ ಸಾಕಷ್ಟು ಇಂಟರವ್ಯೂಗಳಲ್ಲೂ ಹೇಳಿಕೊಂಡಿದ್ದ ಪ್ರಗತಿ, ರಾಜರ ಕಾಲದ ವಸ್ತ್ರಾಭರಣ ಹಾಗೂ ಆಭರಣಗಳನ್ನು ಪುನರಾವರ್ತಿಸದಂತೆ ಸಿದ್ಧಪಡಿಸೋದು ನನ್ನ ಪಾಲಿಗೆ ದೊಡ್ಡ ಸವಾಲಾಗಿತ್ತು ಎಂದಿದ್ದರು.

Also Read: Darshan: ಡಿ ಬಾಸ್ ಜೊತೆಗೆ ಅಭಿಮಾನಿಗಳಿಗೂ ಸಂಕಷ್ಟ: ಬೇಲ್ ಗೂ ದುಡ್ಡಿಲ್ಲ, ಜೈಲಿನಲ್ಲೂ ಕೇಳೋರಿಲ್ಲ

ಆದರೆ ಎಲ್ಲಿಯೂ ಪ್ರಗತಿ ತಮ್ಮ ಅಥವಾ ಸಿನಿಮಾ ಸೆಟ್ ನ ಪೋಟೋಗಳನ್ನು ಹಂಚಿಕೊಂಡಿರಲಿಲ್ಲ. ಈಗ ಪೋಟೋ ಹಂಚಿಕೊಂಡು ಸಿನಿಮಾಕ್ಕೆ ಪಟ್ಟ ಶ್ರಮ ಹಾಗೂ ಅಂತಹದೊಂದು ಅವಕಾಶಕ್ಕಾಗಿ ಸಿನಿಮಾ ತಂಡಕ್ಕೆ ಧನ್ಯವಾದವನ್ನು ಹೇಳಿದ್ದಾರೆ.

ಮೂರು ಸಾವಿರಕ್ಕೂ ಅಧಿಕ ಜನರಿಗಾಗಿ ಕಾಸ್ಟ್ಯೂಮ್ ತಯಾರಿಕೆ ಅಷ್ಟು ಸುಲಭದ ಮಾತಲ್ಲ. ಆದರೆ ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರೋ ಪ್ರಗತಿ ಶೆಟ್ಟಿ ಪ್ರವೃತ್ತಿಯಲ್ಲಿ ವಸ್ತ್ರವಿನ್ಯಾಸಕಿಯಾಗಿ ಮಿಂಚಿದ್ದಾರೆ. ಮಾತ್ರವಲ್ಲ ಕಾಂತಾರಾ ಅಧ್ಯಾಯ 1 ಕ್ಕೆ ಮೆರುಗು ತಂದಿದ್ದಾರೆ.

Exit mobile version