ಬಹುನಿರೀಕ್ಷಿತ ಮಾರ್ಕ್​ ಸಿನಿಮಾ ಟೀಸರ್​ ರಿಲೀಸ್​ : ಕಿಚ್ಚನ ಅಬ್ಬರಕ್ಕೆ ಮನಸೋತ ಅಭಿಮಾನಿಗಳು

Mark Movie Teaser: ಸ್ಯಾಂಡಲ್‌ವುಡ್‌ ನಲ್ಲಿ ಕಾಂತಾರ ಚಾಪ್ಟರ್​ 1 ಸಿನಿಮಾದ ಅದ್ಭುತ ಪ್ರದರ್ಶನ ಮುಂದುವರಿದಿದೆ. ಈ ಬೆನ್ನಲ್ಲೇ ಇದೀಗ ಚಂದನವನದ ಮತ್ತೊಂದು ಸಿನಿಮಾ ತೆರೆಯ ಮುಂದೆ ಬರಲು ಸಜ್ಜಾಗುತ್ತಿದೆ.

ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ ನಟನೆಯ ಬಹುನಿರೀಕ್ಷಿತ ಮಾರ್ಕ್ ಸಿನಿಮಾದ ಟೀಸರ್​ ರಿಲೀಸ್​ ಆಗಿದೆ. ಈ ಟೀಸರ್​ ನೋಡಿದ ಸುದೀಪ್​ ಅಭಿಮಾನಿಗಳು ಕಿಚ್ಚನ ಅಬ್ಬರ ಕಂಡು ಫಿದಾ ಆಗಿದ್ದಾರೆ.

ಮಾರ್ಕ್ ಸಿನಿಮಾದ ಸೈತಾನ್​ ಹಾಡು ಸಖತ್​ ವೈರಲ್​ ಆಗಿದ್ದು. ಟೈಟಲ್​ ಟೀಸರ್​ ಕೂಡ ಅಭಿಮಾನಿಗಳಿಗೆ ಮೆಚ್ಚುಗೆಯಾಗಿತ್ತು. ಇದೀಗ ಸಿನಿಮಾದ ಟೀಸರ್​ ಕೂಡ ರಿಲೀಸ್​ ಆಗಿದ್ದು ಸುದೀಪ್‌ ಅವರ ಖಡಕ್​ ಪೊಲೀಸ್​ ಅಬ್ಬರಕ್ಕೆ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ.

ಮಾರ್ಕ್ ಸಿನಿಮಾದ ಟೀಸರ್‌ಗೂ ಮುನ್ನ ಚಿತ್ರತಂಡ ಟೈಟಲ್​ ಟೀಸರ್​ ಬಿಡುಗಡೆ ಮಾಡಿತ್ತು. ಇದನ್ನು ಕೂಡ ಅಭಿಮಾನಿಗಳು ನೆಚ್ಚಿಕೊಂಡಿದ್ದರು. ಟೈಟಲ್​ ಟೀಸರ್‌​ನ ಕ್ರೇಜ್​ ಬಳಿಕವೇ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು.

ಇದನ್ನೂ ಓದಿ: ಅಶ್ವಿನಿ, ಜಾನವಿ ಮಾಡೋದೆಲ್ಲ ಬರಿ ನಾಟಕ ಎಂದ ನೆಟ್ಟಿಗರು

ಇದೀಗ ಸಿನಿಮಾದ ಟೀಸರ್​ ಮೂಲಕವೇ ಕಿಚ್ಚ ಸುದೀಪ ಅಬ್ಬರಿಸಿದ್ದು ಇನ್ನು ಟ್ರೇಲರ್​ ಯಾವ ರೀತಿ ಇರಬಹುದು ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.

ವಿಜಯ್​ ಕಾರ್ತಿಕೇಯ ಅವರ ನಿರ್ದೇಶನದ ಮಾರ್ಕ್ ಸಿನಿಮಾಗೆ ಶೇಖರ್​ ಚಂದ್ರ ಛಾಯಾಗ್ರಹಣ ಮಾಡಿದ್ದಾರೆ. ಅಜಯ್​ ಮಾರ್ಕಂಡೆ ಎಂಬ ಪಾತ್ರದಲ್ಲಿ ಸುದೀಪ್​ ಬಣ್ಣ ಹಚ್ಚಿದ್ದಾರೆ.

ಈ ಸಿನಿಮಾಗೆ ಅಜನೀಶ್​ ಬಿ. ಲೋಕನಾಥ್​ ಅವರ ಸಂಗೀತವಿದೆ. ಮಾರ್ಕ್​ ಸಿನಿಮಾ ಡಿಸೆಂಬರ್​ 25ರಂದು ತೆರೆಗೆ ಅಪ್ಪಳಿಸಲಿದ್ದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ವೀಕ್ಷಕರ ಕ್ಷಮೆ ಕೇಳಿದ Zee ಕನ್ನಡ ವಾಹಿನಿ!

Exit mobile version