ಯುದ್ಧದ ನೆಲದಲ್ಲಿ ಡ್ರೋನ್ ಪ್ರತಾಪ್ ಬಂಧಿ: ಮಾಜಿ ಬಿಗ್‌ಬಾಸ್ ಸ್ಪರ್ಧಿಯ ಪರದಾಟ

Israel Iran war | Former Bigg Boss contestant Drone Prathap in Abu Dhabi Airport: ಬೆಂಗಳೂರು/ಅಬುಧಾಬಿ: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧದ ಕಿಡಿ ಹೊತ್ತಿಕೊಂಡಿರುವ ಬೆನ್ನಲ್ಲೇ, ಸಾವಿರಾರು ಭಾರತೀಯ ಪ್ರಯಾಣಿಕರು ವಿದೇಶಿ ವಿಮಾನ ನಿಲ್ದಾಣಗಳಲ್ಲಿ ಕಂಗಾಲಾಗಿದ್ದಾರೆ. ಈ ಪೈಕಿ ಕನ್ನಡಿಗರಿಗೆ ಚಿರಪರಿಚಿತರಾದ ‘ಡ್ರೋನ್’ ಪ್ರತಾಪ್ ಕೂಡ ಒಬ್ಬರು. ಸದ್ಯ ಅವರು ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದು, ಅಲ್ಲಿನ ಪರಿಸ್ಥಿತಿಯನ್ನು ವಿಡಿಯೋ ಮೂಲಕ ವಿವರಿಸಿದ್ದಾರೆ.

ಏನಾಗಿದೆ?

ತಮ್ಮ ‘ಡ್ರೋನಾರ್ಕ್’ ಕಂಪನಿಯ ಕೆಲಸಗಳ ನಿಮಿತ್ತ ದುಬೈಗೆ ತೆರಳಿದ್ದ ಪ್ರತಾಪ್, ಶನಿವಾರ ರಾತ್ರಿ ಬೆಂಗಳೂರಿಗೆ ಮರಳಬೇಕಿತ್ತು. ಆದರೆ, ಇಸ್ರೇಲ್-ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ ಪರಿಣಾಮ, ಸುರಕ್ಷತೆಯ ದೃಷ್ಟಿಯಿಂದ ಭಾರತಕ್ಕೆ ಬರುವ ಮತ್ತು ಭಾರತದಿಂದ ಹೊರಡುವ ಬಹುತೇಕ ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ವಿಡಿಯೋದಲ್ಲಿ ಪ್ರತಾಪ್ ಹೇಳಿದ್ದೇನು?

ಇತ್ತೀಚೆಗಷ್ಟೇ ದುಬೈನಲ್ಲಿ ತಮ್ಮ ಕಂಪನಿ ನೋಂದಣಿ ಮಾಡಿಸಿ, ಅಲ್ಲಿನ ಕನ್ನಡಿಗರ ಜೊತೆ ಕಾಲ ಕಳೆದು ಸಂಭ್ರಮಿಸಿದ್ದ ಪ್ರತಾಪ್, ಈಗ ಅನಿವಾರ್ಯವಾಗಿ ವಿಮಾನ ನಿಲ್ದಾಣದಲ್ಲೇ ಕಾಲ ಕಳೆಯುವಂತಾಗಿದೆ. ಕೇವಲ ಪ್ರತಾಪ್ ಮಾತ್ರವಲ್ಲದೆ, ಜೆಡಿಎಸ್ ಮುಖಂಡ ಭೋಜೇಗೌಡ ಅವರ ಕುಟುಂಬ ಕೂಡ ದುಬೈ ಏರ್‌ಪೋರ್ಟ್‌ನಲ್ಲಿ ಸಿಲುಕಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

Exit mobile version