ಬಿಗ್​ಬಾಸ್​ ಸೀಸನ್​ 12 ವಿಜೇತನಾಗಿ ಹೊರಹೊಮ್ಮಿದ ಗಿಲ್ಲಿ ನಟ : ಮೊಟ್ಟ ಮೊದಲ ಬಾರಿಗೆ ಸುದೀಪರಿಂದ ವೈಯಕ್ತಿಕ ಬಹುಮಾನ

ಈ ವರ್ಷ ಟಿಆರ್​ಪಿ ರೇಸ್​ನಲ್ಲಿ ನಾಗಾಲೋಟದಿಂದ ಸಾಗಿದ್ದ ಬಿಗ್​ಬಾಸ್​ ಸೀಸನ್​ 12 ಫಿನಾಲೆ ಪ್ರದರ್ಶನ ಮುಗಿಸಿ ತನ್ನ ಕಾರ್ಯಕ್ರಮ ಅಂತ್ಯಗೊಳಿಸಿದೆ. ಸುದೀಪ್​ ನೇತೃತ್ವದಲ್ಲಿ ಮೂಡಿಬಂದ ಈ ಕಾರ್ಯಕ್ರಮದಲ್ಲಿ ಗಿಲ್ಲಿ ನಟ ವಿಜೇತರಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಕೋಟ್ಯಂತರ ಕನ್ನಡಿಗರ ಕನಸು ನನಸಾಗಿದೆ.

ಸೀಸನ್​ ಆರಂಭದಿಂದಲೇ ತಮ್ಮ ನೇರ ನಿಲುವು, ಕಾಮಿಡಿ ಕಚಗುಳಿ , ಸೆನ್ಸ್​ ಆಫ್​ ಹ್ಯೂಮರ್​ ಮೂಲಕವೇ ಮನೆ ಮಾತಾಗಿದ್ದ ಗಿಲ್ಲಿ ನಟನಿಗೆ ಅಭಿಮಾನಿ ಬಳಗ ಬೆಳೆಯುತ್ತಲೇ ಹೋಗಿತ್ತು. ಅಂತೆಯೇ ದಾಖಲೆಯ 37 ಕೋಟಿ ಮತಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಗಿಲ್ಲಿ ನಟ ಬಿಗ್​ಬಾಸ್​ ಟ್ರೋಫಿಗೆ ಮುತ್ತಿಟ್ಟಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ 12ರ ಟ್ರೋಫಿಗೆ ಮುತ್ತಿಟ್ಟ ಗಿಲ್ಲಿ ನಟ, ಕೋಟಿ ಕೋಟಿ ಮತಗಳ ಜೊತೆ ಕರುನಾಡ ಮನಸ್ಸು ಗೆದ್ದ ಕಿಲಾಡಿ!

ಬಿಗ್​ಬಾಸ್​ ವಿನ್ನರ್​ ಆಗಿರುವ ಗಿಲ್ಲಿ ನಟನಿಗೆ 50 ಲಕ್ಷ ರೂಪಾಯಿ ಬಹುಮಾನ ಹಾಗೂ ಕಾರು ಬಹುಮಾನವಾಗಿ ದೊರಕಿದೆ. ಇದರ ಜೊತೆಯಲ್ಲಿ ಸೀಸನ್​ನಲ್ಲಿ ಅತ್ಯಂತ ಉತ್ತಮವಾಗಿ ಆಡಿರುವ ಗಿಲ್ಲಿ ನಟನಿಗೆ ಸುದೀಪ್​ ವೈಯಕ್ತಿಕವಾಗಿ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.
ನಟ ಗಿಲ್ಲಿ ವಿನ್ನರ್​ ಎಂದು ಘೋಷಣೆಯಾಗುತ್ತಿದ್ದಂತೆಯೇ ಜನಸ್ತೋಮವೇ ಜಮಾಯಿಸಿದೆ. ಯಾವುದೇ ಅವಘಢ ಸಂಭವಿಸದಂತೆ ತಡೆಯುವ ಸಲುವಾಗಿ ಪೊಲೀಸ್​ ವರಿಷ್ಠಾಧಿಕಾರಿಗಳು ಬಿಗ್​ಬಾಸ್​ ಫೈನಲಿಸ್ಟ್​ಗಳನ್ನು ವೇದಿಕೆಯಿಂದ ಹೊರಬಿಡದಂತೆ ಬಿಗ್​ಬಾಸ್​ ತಂಡಕ್ಕೆ ಸೂಚನೆ ನೀಡಿದ್ದರು. ಜನರ ಗುಂಪು ತಿಳಿಯಾದ ಬಳಿಕ ರಾತ್ರಿ ವೇಳೆಗೆ ಬಿಗ್​​ಬಾಸ್​ ಸ್ಪರ್ಧಿಗಳು ಕಾರ್ಯಕ್ರಮದಿಂದ ಹೊರಬಂದಿದ್ದಾರೆ.

Exit mobile version