Bigg Boss Kannada 12: ಕನ್ನಡದ ಬಿಗ್‌ಬಾಸ್‌ಗೆ ತಪ್ಪದ ಸಂಕಷ್ಟ : ಮತ್ತೆ ಬಂದ್‌ ಆಗುತ್ತಾ ಬಿಗ್‌ಬಾಸ್‌ ಶೋ

Bigg Boss Kannada 12: ಬಿಗ್‌ಬಾಸ್‌ ಕನ್ನಡ ಸೀಸನ್‌ 12ರ ಸ್ಪರ್ಧೆ ಒಂದು ಬಾರಿ ಸ್ಥಗಿತಗೊಂಡು ಮತ್ತೆ ಪುನರಾರಂಭಗೊಂಡಿತ್ತು. ಈ ನಡುವಲ್ಲೇ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ.

ಬಿಗ್‌ಬಾಸ್‌ ಸ್ಪರ್ಧಿ ಅಶ್ವಿನಿ ಗೌಡ ಸೇರಿ ನಾಲ್ವರ ವಿರುದ್ದ ಬಿಡದಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರಾವಳಿಯ ಹುಡುಗಿ ರಕ್ಷಿತಾ ಶೆಟ್ಟಿ ವಿರುದ್ದ ಅಶ್ವಿನಿ ಗೌಡ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ವಕೀಲರಾದ ಪ್ರಶಾಂತ್‌ ಮೆಹ್ತಾಲ್‌ ಬಿಡದಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಬಿಗ್‌ಬಾಸ್‌ ಶೋನಲ್ಲಿ ಸ್ಪರ್ಧಿಗಳಾದ ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ ನಡುವೆ ಬಾರೀ ಜಗಳ ಏರ್ಪಟ್ಟಿತ್ತು.

Also Read: ಚಂದನವನ ನಿರ್ಮಾಪಕ ಕೆ.ಗೋವಿಂದ್​ ವಿಧಿವಶ

ಈ ವೇಳೆಯಲ್ಲಿ ರಕ್ಷಿತಾ ಶೆಟ್ಟಿಯನ್ನು ಅಶ್ವಿನಿ ಗೌಡ ಅವಳು ಎಸ್‌ ಕ್ಯಾಟಗರಿ ಎಂದು ಹೇಳಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ಈ ವಿಚಾರ ಬಾರೀ ಚರ್ಚೆಗೆ ಕಾರಣವಾಗಿತ್ತು.

ಅಶ್ವಿನಿ ಗೌಡ ಜೊತೆಗೆ ಬಿಗ್‌ಬಾಸ್‌ ಶೋನ ಬ್ಯುಸಿನೆಸ್‌ ಹೆಡ್ ಪ್ರಶಾಂತ್‌ ನಾಯ್ಕ್‌, ಸುಷ್ಮಾ ಮತ್ತು ಪ್ರಕಾಶ್‌ ಸೇರಿ ನಾಲ್ವರ ವಿರುದ್ದ ದೂರು ದಾಖಲಾಗಿದೆ.

ಬಿಡದಿ ಠಾಣೆಯ ಪೊಲೀಸರು ಸ್ಪರ್ಧಿ ಅಶ್ವಿನಿ ಗೌಡ ಸೇರಿ ನಾಲ್ವರನ್ನು ಬಂಧಿಸುತ್ತಾರಾ ? ಅನ್ನೋದು ಕುತೂಹಲ ಮೂಡಿಸಿದೆ. ಪರಿಸರ ಮಾಲಿನ್ಯ ಕಾಪಾಡದ ಹಿನ್ನೆಲೆಯಲ್ಲಿ ಬಿಗ್‌ಬಾಸ್‌ ಶೋ ನಡೆಯುತ್ತಿರುವ ಸ್ಟುಡಿಯೋಗೆ ಇತ್ತೀಚಿಗಷ್ಟೇ ಬೀಗ ಜಡಿಯಲಾಗಿತ್ತು.

Also Read: Bigg Boss : ಕಿಚ್ಚನ ವಾರದ ಪಂಚಾಯ್ತಿಗೆ ಕಾದು ಕುಳಿತ ಪ್ರೇಕ್ಷಕರು : ಕಾದಿದೆ ಜಾನ್ವಿ – ಅಶ್ವಿನಿ ಗೌಡಗೆ ಮಾರಿ ಹಬ್ಬ

ನಂತರದಲ್ಲಿ ಸ್ಪರ್ಧೆ ಪೈಪೋಟಿಯಿಂದ ಕೂಡಿತ್ತು. ಇದೀಗ ಸ್ಪರ್ಧಿಗಳ ನಡುವಿನ ಪರಸ್ಪರ ಕಿತ್ತಾಟ ಪೊಲೀಸ್‌ ಠಾಣೆಯ ಮೆಟ್ಟಿಲೇರಿದೆ.

Exit mobile version