Bigg Boss 12: ಸ್ಪಂದನಾ ಜೊತೆಗಿನ ಜಗಳವೇ ಧ್ರುವಂತ್​ಗೆ ಮುಳುವಾಯ್ತು : ಫಿನಾಲೆ ರೇಸ್​ನಿಂದ ಧ್ರುವಂತ್​ ಔಟ್

Bigg Boss 12: ಬಿಗ್​ಬಾಸ್​ ಸೀಸನ್​ 12 ಹಲವು ಅಡೆತಡೆಗಳ ನಡುವೆಯೂ ಯಶಸ್ವಿಯಾಗಿ ಸಾಗುತ್ತಿದೆ. ಅತೀ ಹೆಚ್ಚು ಟಿಆರ್​ಪಿ ಹೊಂದಿರುವ ಶೋ ಎನಿಸಿರುವ ಬಿಗ್​ಬಾಸ್​ ಸೀಸನ್​ 12(Bigg Boss 12) ಈಗಾಗಲೇ ಫಿನಾಲೆ ವಾರದಲ್ಲಿದೆ. ಶೋ ಶುರುವಾಗಿ ಮೂರನೇ ವಾರದಲ್ಲಿಯೇ ಫಿನಾಲೆ ವಾರ ಆರಂಭಗೊಂಡಿರುವುದು ಬಿಗ್​ಬಾಸ್​ ಕನ್ನಡ ಇತಿಹಾಸದಲ್ಲಿ ಇದೇ ಮೊದಲು.

ಕಳೆದ ವಾರ ಫಿನಾಲೆ ರೇಸ್​ನಿಂದ ಹೊರಗುಳಿದಿದ್ದ ಧ್ರುವಂತ್​​ ಅಶ್ವಿನಿ ಗೌಡ ಅವರನ್ನು ಫಿನಾಲೆ ವಾರಕ್ಕೆ ಆಯ್ಕೆ ಮಾಡಿದ್ದರು. ಇದಾದ ಬಳಿಕ ಅಶ್ವಿನಿ ತಮ್ಮೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ ಎಂಬ ಅಸಮಾಧಾನವನ್ನೂ ಹೊರ ಹಾಕುತ್ತಲೇ ಇದ್ದರು.

ಜಂಟಿ ತಂಡದಲ್ಲಿದ್ದ ಸ್ಪಂದನಾ ಅವರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದ ಧ್ರುವಂತ್​ ನೀವು ಕೇವಲ ಮೇಕಪ್​ ಮಾಡಲಿಕ್ಕೆ ಲಾಯಕ್ಕು ಎಂಬೆಲ್ಲ ಮಾತುಗಳನ್ನಾಡಿದ್ದರು. ಆದರೆ ಇದೀಗ ಧ್ರುವಂತ್​ ಅವರು ಮಾಡಿದ ಈ ಜಗಳವೇ ಅವರಿಗೆ ಮುಳುವಾಗಿ ಪರಿಣಮಿಸಿದೆ.

Also read: Raju Talikote : ಹಿರಿಯ ರಂಗಕರ್ಮಿ ರಾಜು ತಾಳಿಕೋಟೆ ಹೃದಯಾಘಾತದಿಂದ ನಿಧನ

ಇಂದು ಫಿನಾಲೆ ವಾರದ ಟಾಸ್ಕ್​ ಆರಂಭಗೊಂಡಿದ್ದು ಸಂಪೂರ್ಣ ವಾರದ ಟಾಸ್ಕ್​ಗಳಿಂದ ಯಾರನ್ನಾದರೂ ಹೊರಗಿಡುವ ಅಧಿಕಾರವನ್ನು ಸ್ಪಂದನಾ ಅವರಿಗೆ ನೀಡಲಾಗಿತ್ತು. ಈ ಅವಕಾಶ ಬಳಸಿಕೊಂಡ ಸ್ಪಂದನಾ ಧ್ರುವಂತ್​ ಅವರನ್ನೇ ಟಾಸ್ಕ್​ಗಳಿಂದ ಹೊರಗಿಟ್ಟಿದ್ದಾರೆ. ಈಗಾಗಲೇ ಈ ಪ್ರೊಮೋ ಬಿಡುಗಡೆಯಾಗಿದ್ದು ಈ ಎಪಿಸೋಡ್​ ಇಂದು ರಾತ್ರಿ ಪ್ರಸಾರ ಕಾಣಲಿದೆ.

ಒಂಟಿ – ಜಂಟಿ ಟಾಸ್ಕ್​ಗಳಿದ್ದ ಸಂದರ್ಭದಲ್ಲಿ ಸ್ಪಂದನಾ ಮೇಲೆ ದರ್ಪ ತೋರಿದ್ದ ಧ್ರುವಂತ್​ಗೆ ಸರಿಯಾದ ಶಾಸ್ತಿಯಾಗಿದೆ. ಕರ್ಮ ರಿರ್ಟನ್ಸ್​ ಅಂದ್ರೆ ಇದೇನೆ ಅಂತಾ ನೆಟ್ಟಿಗರು ಕಮೆಂಟ್​ ಮಾಡ್ತಾ ಇದ್ದಾರೆ. ಈ ಫಿನಾಲೆ ರೇಸ್​ನಲ್ಲಿ ಯಾರು ಜಯ ಸಾಧಿಸಬಹುದು ? ಎಂಬ ಕುತೂಹಲ ವೀಕ್ಷಕರಲ್ಲೂ ಮನೆ ಮಾಡಿದ್ದು ಶೀಘ್ರದಲ್ಲೇ ಈ ಕುತುಹೂಲಕ್ಕೂ ಬಿಗ್​ಬಾಸ್​ ತೆರೆ ಎಳೆಯಲಿದ್ದಾರೆ.

Also Read: ಬಾಹುಬಲಿ, ಸಲಾರ್ ದಾಖಲೆಗಳನ್ನು ಪುಡಿ : ಕಾಂತಾರ ಚಾಪ್ಟರ್ 1 ಗಳಿಕೆ ಎಷ್ಟು ಗೊತ್ತಾ ?

Exit mobile version